ETV Bharat / state

ವಾಲ್ ಆಫ್ ಫೇಮ್ ಪ್ರಶಸ್ತಿ ಪ್ರದಾನ: 50 ಸಾಧಕರಿಗೆ ಸಂದ ಗೌರವ

author img

By

Published : Oct 9, 2022, 7:26 PM IST

Updated : Oct 9, 2022, 8:33 PM IST

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಜನ ಸಾಧಕರಿಗೆ ವಾಲ್ ಆಫ್ ಫೇಮ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

wall-of-fame-award-50-achievers
ವಾಲ್ ಆಫ್ ಫೇಮ್ ಪ್ರಶಸ್ತಿ ಪ್ರಧಾನ: 50 ಸಾಧಕರಿಗೆ ಸಂದ ಗೌರವ

ಬೆಂಗಳೂರು : ಇಂದು 50 ಜನ ಸಾಧಕರಿಗೆ ವಾಲ್ ಆಫ್ ಫೇಮ್ ಗೌರವ ಪ್ರದಾನ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಅತಿಥಿಗಳಾಗಿ ನಟರಾದ ಡಾಲಿ ಧನಂಜಯ್, ವಸಿಷ್ಠ ಸಿಂಹ, ನಿವೃತ್ತ ಐ.ಪಿ.ಎಸ್​ ಅಧಿಕಾರಿ ಭಾಸ್ಕರ್ ರಾವ್, ಚಿತ್ರ ನಟಿಯರಾದ ಶೃತಿ ಹರಿಹರನ್, ಸಾನ್ವಿ ಶ್ರೀವಾಸ್ತವ್, ಅಗ್ನಿ ಶ್ರೀಧರ್​, ರೋಷನ್ ಬಚ್ಚನ್, ಜಾನ್ ಅಲುಕಾಸ್ ಮೊದಲಾದವರು ಪಾಲ್ಗೊಂಡಿದ್ದರು.

ನಂದಿನಿ ನಾಗರಾಜ್ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಿ ಗುರುತಿಸಿಕೊಂಡಿದ್ದ ಗಣ್ಯರನ್ನು ಗೌರವಿಸಿ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇತಿ ಆಚಾರ್ಯ ಪಡೆದರೆ, ಅತ್ಯುತ್ತಮ ನಟ ಪ್ರಶಸ್ತಿ ಕಾಕ್ರೋಚ ಸುಧಿಗೆ ವಿತರಿಸಲಾಯಿತು. ಧನಲಕ್ಷ್ಮಿ ಅವರಿಗೆ ಉತ್ತಮ ಸ್ವಾವಲಂಬಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೀವನದಲ್ಲಿ ಉತ್ಸಾಹವೇ ಇಲ್ಲದೆ ಬದುಕು ಬೇಡ, ಇನ್ನು ಸಾವೇ ಗತಿ ಎಂದುಕೊಂಡಿದ್ದ ಲಕ್ಷಾಂತರ ಜನರ ಮನಪರಿವರ್ತನೆ ಮಾಡಿರುವ ಮೋಟಿವೇಶನ್ ಸ್ಪೀಕರ್ ವಿಸ್ಮಯಾ ಗೌಡರಿಗೆ ಪ್ರಶಸ್ತಿ ವಿತರಿಸಲಾಯಿತು. ಅತ್ಯುತ್ತಮ ಆಂಕರ್ ಪ್ರಶಸ್ತಿಯನ್ನು ನಿರಂಜನ್ ದೇಶಪಾಂಡೆ, ಇಂಟರ್​ನ್ಯಾಷನಲ್ ಅಥ್ಲೀಟ್ ರೋಷನ್, ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಅರುಣ್, ಟ್ರೆಂಡ್ ಸೆಟ್ಟರ್ ಶಿಲ್ಪಾ, ಅತ್ಯುತ್ತಮ ಸಮಾಜ ಸೇವೆಗೆ ಜಯರಾಜ್, ಇನ್ನೋವೇಶನ್ ಸಂಗೀತಗಾರ ಅನೀಶ್, ಉತ್ತಮ ಆರ್ ಜೆ ಪಟಾಕಿ ಶೃತಿ, ಸಮಾಜ ಸೇವೆಯಲ್ಲಿ ನಟಿ ಕಾರುಣ್ಯ ರಾಮ್, ಉತ್ತಮ ಮಾಡೆಲ್ ಪ್ರಿಯಾಂಕ ಗಿರೀಶ್, ಫಿಟ್ನೆಸ್ ಸ್ಪೂರ್ತಿ ವನಿತಾ ಅಶೋಕ್, ಉತ್ತಮ ವೈದ್ಯರು ಗಣೇಶ್, ಫ್ಯಾಷನ್ ಐಕಾನ್ ಶ್ವೇತ ಮೌರ್ಯ ಗೌರವವನ್ನು ಸ್ವೀಕರಿಸಿದರು.

ಇದನ್ನೂ ಓದಿ : ಆರ್​ಎಸ್​ಎಸ್​ ಪಥ ಸಂಚಲನದಲ್ಲಿ ಮುಸ್ಲಿಮರಿಂದ ಹೆಡ್ಗೆವಾರ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ

Last Updated : Oct 9, 2022, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.