ETV Bharat / state

16 ಕೋಟಿ ರಸ್ತೆ ಕಾಮಗಾರಿಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಯಿಂದ ಗುದ್ದಲಿ ಪೂಜೆ..

author img

By

Published : Aug 12, 2019, 9:24 AM IST

double-road-to-gauribidanur-road

ಶಾಸಕ ಎಸ್ ಎನ್ ಸುಬ್ಬಾರೆಡ್ಡಿ, ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ಭಾಗದವರೆಗಿನ 16 ಕೋಟಿ ಡಬಲ್​ ರೋಡ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಚಿಕ್ಕಬಳ್ಳಾಪುರ: ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ಭಾಗದವರೆಗಿನ 16 ಕೋಟಿ ಡಬಲ್​ ರೋಡ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

16 ಕೋಟಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ..

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಶೇ.80ರಷ್ಟು ರಸ್ತೆಗಳು ಈಗಾಲೇ ಸಿದ್ಧವಾಗಿವೆ. ಉಳಿದ ಶೇ. 20ರಷ್ಟು ರಸ್ತೆಗಳನ್ನು ಮುಂದಿನ 6 ತಿಂಗಳೊಳಗೆ ಸಂಪೂರ್ಣ ಗುಣಮಟ್ಟದ ರಸ್ತೆಗಳು ಆಗಲಿವೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಗ್ರಾಮ ಸಡಕ್​ ಯೋಜನೆಯಿಂದ ಒಟ್ಟು 21 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 16 ಕೋಟಿ ಗುಡಿಬಂಡೆ ತಾಲೂಕಿಗೆ ಉಳಿದ 5 ಕೋಟಿ ಬಾಗೇಪಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿಸಿಲಾಗಿದೆ. ರಾಷ್ಟ್ರೀಯ ಹೆದ್ದಾರಿ 7 ರಿಂದ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಬೀಚಗಾನಹಳ್ಳಿ ರಸ್ತೆ, ಪೋಲಂಪಲ್ಲಿ ರಸ್ತೆ, ಹಂಪಸಂದ್ರ ರಸ್ತೆ ಸೇರಿದಂತೆ ಇತರೆ ರಸ್ತೆಗಳಿಗೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದರು.

ಈಗ ರಾಜ್ಯ ಹೆದ್ದಾರಿ 94ರ ಹಲಗೂರು ರಸ್ತೆಗೆ ಗ್ರಾಮ ಸಡಕ್​ ಯೋಜನೆಯ 16 ಕೋಟಿಯ ಅನುಧಾನದಲ್ಲಿ ಬಾಗೇಪಲ್ಲಿ ತಾಲೂಕಿನ ಗ್ರೀನ್ ಪಾರ್ಕ್ ಹೋಟೆಲ್‌ನಿಂದ ಹಂಪಸಂದ್ರದ ವರೆಗೆ, ರೂರಲ್ ಗುಡಿಬಂಡೆ ಬಳಿಯ ರಸ್ತೆ, ಪಟ್ಟಣದ ಮಸೀದಿ ಬಳಿ ಇರುವ ಮೋರಿ ಹಾಗೂ ತಿರುಮಲ ನಗರದಿಂದ ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ವರೆಗೆ ರಸ್ತೆ ಕಾಮಗಾರಿಯನ್ನು 3 ತಿಂಗಳೊಳಗೆ ಮುಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Intro:ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಕ್ರಾಸ್ ನಲ್ಲಿ ಎಸ್.ಎಸ್.ಡಿ.ಬಿ ವತಿಯಿಂದ ರಾಜ್ಯ ಹೆದ್ದಾರಿ 94ರ ಗ್ರೀನ್ ಪಾರ್ಕ ಹೋಟಲ್ ನಿಂದ ಕಡೇಹಳ್ಳಿ ಕ್ರಾಸ್, ಹಂಪಸಂದ್ರ ವರೆಗೆ, ರೂರಲ್ ಗುಡಿಬಂಡೆ ರಸ್ತೆ, ಪಟ್ಟಣದ ಮಸೀದಿ ಬಳಿ ಇರುವ ಮೋರಿ ಹಾಗೂ ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ಭಾಗದವರೆಗೆ 46 ಅಡಿಗಳ ದ್ವಿಪಥ ರಸ್ತೆಯ 16 ಕೋಟಿ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.Body:ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಶೇ.80 ರಷ್ಟು ರಸ್ತೆಗಳು ಈಗಾಲೇ ಕಲ್ಪಿಸಿದ್ದು ಉಳಿದ ಶೇ. 20 ರಷ್ಟು ರಸ್ತೆಗಳನ್ನು ಮುಂದಿನ 6 ತಿಂಗಳ ಒಳಗೆ ಸಂಪೂರ್ಣ ಗುಣಮಟ್ಟದ ರಸ್ತೆಗಳು ಆಗಲಿವೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಎಸ್.ಎಸ್.ಡಿ.ಬಿ ಯಿಂದ ಒಟ್ಟು 21 ಕೋಟಿ ಅನುಧಾನ ಬಿಡುಗಡೆಯಾಗಿದ್ದು ಅದರಲ್ಲಿ 16 ಕೋಟಿ ಗುಡಿಬಂಡೆ ತಾಲೂಕಿಗೆ ಉಳಿದ 5 ಕೋಟಿ ಬಾಗೇಪಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ 7 ರಿಂದ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಬೀಚಗಾನಹಳ್ಳಿ ರಸ್ತೆ, ಪೋಲಂಪಲ್ಲಿ ರಸ್ತೆ, ಹಂಪಸಂದ್ರ ರಸ್ತೆ ಸೇರಿದಂತೆ ಇತರೆ ರಸ್ತೆಗಳು ಈಗಾಲೇ ಗುಣಮಟ್ಟದ ರಸ್ತೆಗಳಾಗಿದ್ದು ಈಗ ರಾಜ್ಯ ಹೆದ್ದಾರಿ 94ರ ಹಲಗೂರು ರಸ್ತೆಗೆ ಎಸ್.ಎಸ್.ಡಿ.ಬಿ ಯ 16 ಕೋಟಿಯ ಅನುಧಾನದಲ್ಲಿ ಬಾಗೇಪಲ್ಲಿ ತಾಲೂಕಿನ ಗ್ರೀನ್ ಪಾರ್ಕ ಹೋಟಲ್ ನಿಂದ ಹಂಪಸಂದ್ರದ ವರೆಗೆ, ರೂರಲ್ ಗುಡಿಬಂಡೆ ಬಳಿಯ ರಸ್ತೆ, ಪಟ್ಟಣದ ಮಸೀದಿ ಬಳಿಇರುವ ಮೋರಿ ಹಾಗೂ ತಿರುಮಲ ನಗರದಿಂದ ಗೌರಿಬಿದನೂರು ರಸ್ತೆಯ ಗುಡಿಬಂಡೆ ಗಡಿ ವರೆಗೆ ರಸ್ತೆ ಕಾಮಗಾರಿಯನ್ನು 3 ತಿಂಗಳ ಒಳಗೆ ಮುಗಿಸುವಂತೆ ತಿಳಿಸಿದ್ದೇನೆ ಜೊತೆಗೆ ಕಡೇಹಳ್ಳಿ ಕ್ರಾಸ್ ನಿಂದ ಎಲ್ಲೋಡು ರಸ್ತೆ, ಚೋಳಶೆಟ್ಟಿಹಳ್ಳಿ ರಸ್ತೆ ಹಾಗೂ ಇನ್ನು ಕೆಲಸವು ರಸ್ತೆಗಳು ಮಾತ್ರ ಬಾಕಿ ಉಳಿದಿವೆ ಅವುಗಳನ್ನು ಸಹ 6 ತಿಂಗಳ ಒಳಗೆ ಪೂರ್ಣ ಮಾಡಲಾಗುವುದು ಎಂದು ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.