ETV Bharat / state

ಯೋಗೇಶ್ವರ್​ ಬಾವನ ಕೊಲೆ ಕೇಸ್: ರಾಮಪುರ, ಹನೂರಲ್ಲಿ ಸ್ಥಳ ಮಹಜರು, ಟೀ ಶರ್ಟ್ ವಶಕ್ಕೆ

author img

By ETV Bharat Karnataka Team

Published : Dec 22, 2023, 2:29 PM IST

ಚಾಮರಾಜನಗರ
ಚಾಮರಾಜನಗರ

ಎಂಎಲ್​ಸಿ ಸಿಪಿವೈ ಬಾವ ಮಹಾದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರಿಂದ ಸ್ಥಳ ಮಹಜರು ನಡೆಯಿತು. ಈ ವೇಳೆ ಟೀ ಶರ್ಟ್​ವೊಂದನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಂದ ಸ್ಥಳ ಮಹಜರು

ಚಾಮರಾಜನಗರ: ಎಂಎಲ್​ಸಿ ಸಿ ಪಿ ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರಿಂದ ಸ್ಥಳ ಮಹಜರು ನಡೆಯಿತು. ಹನೂರು ತಾಲೂಕಿನ ರಾಮಾಪುರಕ್ಕೆ ಆರೋಪಿ ಮುರುಗೇಶ್ ಹಾಗೂ ಪ್ರಭಾಕರ್ ನನ್ನು ಕರೆತಂದ ರಾಮನಗರ ಪೊಲೀಸರು ಕಂದಕ, ಕಾರು ನಿಲ್ಲಿಸಿದ್ದ ಸ್ಥಳದಲ್ಲಿ ಮಹಜರು ನಡೆಸಿದರು. ಇನ್ನು, ಮಹಜರು ವೇಳೆ ಟೀ ಶರ್ಟ್​ವೊಂದನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಮಹಾದೇವಯ್ಯ ಅವರನ್ನು ಕಿಡ್ನಾಪ್ ಮಾಡಿಕೊಂಡು ರಾಮಾಪುರಕ್ಕೆ ಬಂದ ಹಂತಕರು 50 ಅಡಿ ಆಳದ ಕಂದಕಕ್ಕೆ ಶವವನ್ನು ಇಟ್ಟು, ಬಳಿಕ ರಾಮಾಪುರದಲ್ಲಿ ಕಾರು ನಿಲ್ಲಿಸಿ, ಬಸ್ ಒಂದರ ಮೂಲಕ ಹನೂರಿಗೆ ಬಂದು ನಂತರ ಚನ್ನಪಟ್ಟಣಕ್ಕೆ ಹೋಗಿದ್ದನ್ನು ಪೊಲೀಸರಿಗೆ ವಿವರಿಸಿದ್ದಾರೆ.

ಕಳೆದ 4 ರಂದು ಕೊಲೆ ಪ್ರಕರಣ ಬೆಳಕಿಗೆ: ತೋಟದ ಮನೆಯಿಂದ ಕಾಣೆಯಾಗಿದ್ದ ಮಹಾದೇವಯ್ಯ ಅವರ ಶವ ಅರೆ ಕೊಳೆತ ಸ್ಥಿತಿಯಲ್ಲಿ ಕಳೆದ 4 ರಂದು ರಾಮಾಪುರದಿಂದ 6 ಕಿ ಮೀ ದೂರದ ಕಂದಕದಲ್ಲಿ ಪತ್ತೆಯಾಗಿತ್ತು. ರಾಮಾಪುರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮಹಾದೇವಯ್ಯ ಕಾರು ಪತ್ತೆಯಾಗಿದ್ದರಿಂದ ಪೊಲೀಸರು ಕೂಂಬಿಂಗ್ ನಡೆಸಿದ್ದರು. ಸುಮಾರು 50 ಅಡಿ‌ ಕಂದಕದಿಂದ ಹರಸಾಹಸಪಟ್ಟು ಮಹಾದೇವಯ್ಯ ಶವವನ್ನು ಹೊರಕ್ಕೆ ತರಲಾಗಿತ್ತು.

ಆರೋಪಿಗಳು ಕಾರು ನಿಲ್ಲಿಸಿ ಹೊರ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ, ರಾಮನಗರ ಪೊಲೀಸರು ಈ ಕೊಲೆ ತನಿಖೆಯನ್ನು ಕೈಗೊಂಡಿದ್ದಾರೆ. ಚಾಮರಾಜನಗರ ಪೊಲೀಸರು ತನಿಖೆಗೆ ಸಹಕಾರ ನೀಡುತ್ತಿದ್ದಾರೆ.

ಮರಣೋತ್ತರ ಪರೀಕ್ಷೆ : ಬಿಡದಿ ಸಮೀಪದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಶವ ರವಾನೆ ಮಾಡಿ, ಅಲ್ಲಿ ಮರಣೋತ್ತರ ಪರೀಕ್ಷೆ (ಡಿಸೆಂಬರ್- 4 -23) ನಡೆಸಲಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ಹಾಗೂ ಪ್ರಕರಣ ದಾಖಲಾಗಿತ್ತು.

ಘಟನೆಯ ಕುರಿತು ಎಸ್ಪಿ ಪದ್ಮಿನಿ ಸಾಹು ಹೇಳಿದ್ದೇನು?: ಈ ಕುರಿತು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು ಮಾತನಾಡಿ, ನಾಪತ್ತೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಮಪುರದಲ್ಲಿ ಅವರ ಕಾರು ಪತ್ತೆಯಾದ ಬಳಿಕ ಶವವೂ ಪತ್ತೆಯಾಗಿದೆ. ರಾಮನಗರ ಪೊಲೀಸರು ಕೂಡ ಬಂದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ತನಿಖೆ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಎಂಎಲ್​ಸಿ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ ಪ್ರಕರಣ: ಪೊಲೀಸರಿಂದ ಮುಂದುವರಿದ ಶೋಧ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.