ETV Bharat / state

ಚಾಮರಾಜನಗರದಲ್ಲಿ ಜನ ಸತ್ತಿರೋದು, ಮೈಸೂರಲ್ಲಿ ತನಿಖಾ ಕಚೇರಿ ಸ್ಥಾಪನೆ.. 'ನ್ಯಾಯ'ಕ್ಕಾಗಿ ಸಂತ್ರಸ್ತರ ಅಲೆದಾಟ

author img

By

Published : Jun 9, 2021, 8:31 PM IST

Updated : Jun 9, 2021, 10:55 PM IST

 enquiry office open in mysore for inquiry the chamrajnagar oxygen case
enquiry office open in mysore for inquiry the chamrajnagar oxygen case

ದುರಂತ ನಡೆದಿರುವುದು ಚಾಮರಾಜನಗರದಲ್ಲಿ, ಮೃತಪಟ್ಟವರು ಹೆಚ್ಚಿನ ಮಂದಿ ಚಾಮರಾಜನಗರ ಜಿಲ್ಲೆಯವರು. ಆದರೆ, ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದರಿಂದ ಈ ಲಾಕ್​ಡೌನ್‌ನಲ್ಲಿ ನ್ಯಾಯ ಕೇಳುವುದಾದರೂ ಹೇಗೆ‌.? ಚಾಮರಾಜನಗರದಲ್ಲಿ ಆಯೋಗದ ಕಚೇರಿ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ಪು.ಶ್ರೀನಿವಾಸ ನಾಯಕ್ ಒತ್ತಾಯಿಸಿದ್ದಾರೆ..

ಚಾಮರಾಜನಗರ : ಆಕ್ಸಿಜನ್ ಇಲ್ಲದೇ 24 ಮಂದಿ ಮೃತಪಟ್ಟ ಘಟನೆ ನಡೆದದ್ದು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಾದರೂ ಕೂಡ ಅದರ ತನಿಖೆಗಾಗಿ ನ್ಯಾಯಾಂಗ ಆಯೋಗದ ಕಚೇರಿ ತೆರೆದಿರುವುದು ಮಾತ್ರ ಮೈಸೂರಲ್ಲಿ. ಮೇ 5ರಿಂದಲೇ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ನ್ಯಾ. ಬಿ ಎ ಪಾಟೀಲ್ ವಿಚಾರಣಾ ಆಯೋಗದ ಕಚೇರಿ ತೆರೆದಿದ್ದು, ದುರಂತಕ್ಕೆ ಸಂಬಂಧಿಸಿದಂತೆ ಮೃತರ ವಾರಸುದಾರರು, ಸಂಘ-ಸಂಸ್ಥೆಗಳು, ದೂರು ನೀಡುವವರು 15 ದಿನದೊಳಗಾಗಿ ಕೊಡಬಹುದಾಗಿದೆ. ಆದರೆ, ಲಾಕ್​ಡೌನ್​ ಹಿನ್ನೆಲೆ ಮೈಸೂರಿಗೆ ತೆರಳಲಾಗದೇ ಸಂತ್ರಸ್ತ ಕುಟುಂಬಗಳು ಪರದಾಡುತ್ತಿವೆ.

'ನ್ಯಾಯ'ಕ್ಕಾಗಿ ಸಂತ್ರಸ್ತರ ಅಲೆದಾಟ

ಅಂತರ ಜಿಲ್ಲೆಗೆ ಪ್ರವೇಶ ನಿರ್ಬಂಧ, ವಾಹನ ಓಡಾಟವಿಲ್ಲವಾದ್ದರಿಂದ ದೂರು ಕೊಡಲು ಕಷ್ಟವಾಗುತ್ತಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟರೂ ಪರಿಹಾರ ಪಟ್ಟಿಯಿಂದ ಪತಿ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 2-3 ದಿನಗಳಿಂದಲೂ ಬಿಸಲವಾಡಿಯ ಜ್ಯೋತಿ ಎಂಬುವರು ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಾಮರಾಜನಗರಕ್ಕೆ ಹೇಗೋ ಬರಬಹುದು. ಆದರೆ, ದೂರದ ಮೈಸೂರಿಗೆ ತೆರಳುವುದು ಹೇಗೆ..? ಎಂದು ಜ್ಯೋತಿ ಅಳಲು ತೋಡಿಕೊಂಡಿದ್ದಾರೆ.

ದುರಂತ ನಡೆದಿರುವುದು ಚಾಮರಾಜನಗರದಲ್ಲಿ, ಮೃತಪಟ್ಟವರು ಹೆಚ್ಚಿನ ಮಂದಿ ಚಾಮರಾಜನಗರ ಜಿಲ್ಲೆಯವರು. ಆದರೆ, ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದರಿಂದ ಈ ಲಾಕ್​ಡೌನ್‌ನಲ್ಲಿ ನ್ಯಾಯ ಕೇಳುವುದಾದರೂ ಹೇಗೆ‌.? ಚಾಮರಾಜನಗರದಲ್ಲಿ ಆಯೋಗದ ಕಚೇರಿ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ಪು.ಶ್ರೀನಿವಾಸ ನಾಯಕ್ ಒತ್ತಾಯಿಸಿದ್ದಾರೆ.

Last Updated :Jun 9, 2021, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.