ETV Bharat / sports

ಆರ್​ಸಿಬಿ vs ಸಿಎಸ್​ಕೆ ಹೈವೋಲ್ಟೇಜ್ ಪಂದ್ಯ: ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಏನಂದ್ರು? - csk vs rcb

author img

By ETV Bharat Karnataka Team

Published : May 18, 2024, 8:35 PM IST

ಆರ್​​ಸಿಬಿ ಮತ್ತು ಸಿಎಸ್​​ಕೆ ಮಧ್ಯೆ ಭರ್ಜರಿ ಸೆಣಸಾಟ ನಡೆಯುತ್ತಿದೆ. ಕ್ರಿಕೆಟ್​ ಅಭಿಮಾನಿಗಳು "ಈಟಿವಿ ಭಾರತ್"​ ಜೊತೆ ತಮ್ಮ ಸಂತಸ ಹಂಚಿಕೊಂಡರು.

ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಅನಿಸಿಕೆ
ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಅನಿಸಿಕೆ (ETV Bharat)

ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಅನಿಸಿಕೆ (ETV Bharat)

ಬೆಂಗಳೂರು: ಐಪಿಎಲ್​ನ ಮಹತ್ವದ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಯಾವುದೇ ರೋಚಕ ಸಿನಿಮಾಗಿಂತ ಕಡಿಮೆ ಏನಿಲ್ಲದ ಕುತೂಹಲ ಹುಟ್ಟಿಸಿರುವ ಪಂದ್ಯಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿರುವ ಇತ್ತಂಡಗಳ ಅಭಿಮಾನಿಗಳು ತಮ್ಮ ಆಟಗಾರರನ್ನು ಚಿಯರ್​ ಮಾಡುವಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಕ್ರೀಡಾಂಗಣದ ಹೊರಗೆ ಸಿಕ್ಕ ಕೆಲ ಅಭಿಮಾನಿಗಳು ತಮ್ಮ ಖುಷಿಯನ್ನು ಹಂಚಿಕೊಂಡಿದ್ದು ಹೀಗಿದೆ.

ಆರ್​ಸಿಬಿ ತಂಡದ ಅಭಿಮಾನಿಯಾದ ಬಾಲು ಅಯ್ಯರ್ ಅವರು ಮಾತನಾಡಿ, ನಾನು ಆರ್​ಸಿಬಿಯ ದೊಡ್ಡ ಅಭಿಮಾನಿ. ತಂಡ ಪ್ಲೇಆಫ್​ನಲ್ಲಿ ಸ್ಥಾನ ಪಡೆಯಬೇಕು ಎಂಬ ಆಸೆಯಿದೆ. ಇಂದಿನ ಪಂದ್ಯವನ್ನು ನೇರವಾಗಿ ವೀಕ್ಷಿಸಬೇಕು ಎಂದು 10 ಗೆಳೆಯರ ಜೊತೆಗೆ ಇಲ್ಲಿಗೆ ಬಂದಿದ್ದೇವೆ. ಬ್ಯಾಟಿಂಗ್​ ಕಿಂಗ್​​ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸುವ ಆಟ ಆಡಲಿದ್ದಾರೆ ಎಂಬ ವಿಶ್ವಾಸವಿದೆ. ತಂಡ ನಾಲ್ಕರಲ್ಲಿ ಸ್ಥಾನ ಪಡೆದು ಮೊದಲ ಬಾರಿ ಐಪಿಎಲ್​ ಪ್ರಶಸ್ತಿ ಗೆಲ್ಲಲಿದೆ ಎಂದ ಅದಮ್ಯ ಭರವಸೆ ಇದೆ ಎಂದರು.

ಬನಶಂಕರಿಯ ಚರಣ್ ಮಾತನಾಡಿ, ಆರ್​ಸಿಬಿ ಸತತ 5 ಪಂದ್ಯ ಗೆಲ್ಲುವ ಮೂಲಕ ಉತ್ತಮ ಲಯದಲ್ಲಿದೆ. ಇದನ್ನು ಗಮನಿಸಿದರೆ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಈ ಪಂದ್ಯ ನೋಡಲೆಂದು ಕಳೆದ ವಾರದಿಂದ ಟಿಕೆಟ್​ಗಾಗಿ ಪರದಾಡಬೇಕಾಯಿತು. ಕೊನೆಗೂ ಟಿಕೆಟ್​ ಪಡೆದು ಇಲ್ಲಿಗೆ ಬಂದಿದ್ದೇನೆ. ಆರ್​ಸಿಬಿಯ ಗೆಲುವಿಗಾಗಿ ಕಾಯುತ್ತಿದ್ದೇನೆ ಎಂದರು.

ವಿದ್ಯಾರ್ಥಿ ಪ್ರಣವ್ ಕ್ರೀಡಾಂಗಣದ ಹೊರಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ಚೆನ್ನೈ ನನ್ನ ನೆಚ್ಚಿನ ತಂಡ. ಇದೊಂದು ಹೈಸ್ಕೋರ್​ ಮ್ಯಾಚ್​ ಆಗಲಿದೆ. ಗೆಲ್ಲುವ ವಿಶ್ವಾಸವೂ ಇದೆ ಎಂದರು.

ಇವತ್ತು ನಮಗೆ ಅದೃಷ್ಟದ ದಿನ. ಆರ್​ಸಿಬಿ ಭರ್ಜರಿ ಫಾರ್ಮ್​ನಲ್ಲಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ತೋರುತ್ತಿದೆ ಎಂದು ಮತ್ತೊಬ್ಬ ಕ್ರಿಕೆಟ್​ ಅಭಿಮಾನಿ ಸ್ಯಾಮ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇಂದಿನ ಪಂದ್ಯ ನೋಡಲೆಂದೇ ಕಾರವಾರದ ಶಿರಸಿಯಿಂದ ಬೆಂಗಳೂರಿಗೆ ಬಂದ ರವಿ ಕೊಳೆಗಾರ ಮಾತನಾಡಿ, ಇದಿನ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲಿದೆ. ಮೇ 18 ಹೇಳಿ ಆರ್​​ಸಿಬಿಗೆ ಮಾಡಿಸಿದ ಪಂದ್ಯ. ನೀಡಿದ ಟಾರ್ಗೆಟ್​ನಲ್ಲಿ ಪಂದ್ಯ ಮುಗಿಸುವ ವಿಶ್ವಾಸವಿದೆ. ಧೋನಿ ಅವರಿಗೆ ಒಳ್ಳೆಯ ರೀತಿಯಂದ ಬೀಳ್ಕೊಡುಗೆ ನೀಡುವುದು ಖಚಿತ. ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ತಮ್ಮ ತಾಕತ್ತು ಮತ್ತೊಮ್ಮೆ ತೋರಿಸಲಿದ್ದಾರೆ ಎಂದರು.

ಇದನ್ನೂ ಓದಿ: ಈ ಬಗ್ಗೆ ನಿಮಗೆಷ್ಟು ಗೊತ್ತು?: ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ಭದ್ರತೆಗೆ KSCA ಭರಿಸುವ ಹಣವೆಷ್ಟು?! - IPL Match Security

ETV Bharat Logo

Copyright © 2024 Ushodaya Enterprises Pvt. Ltd., All Rights Reserved.