ETV Bharat / state

ಬೀದರ್​​ನಲ್ಲಿ ಲಾಕ್​ಡೌನ್​ ಲೆಕ್ಕಿಸದೇ ರಸ್ತೆಗಿಳಿದ ಜನ

author img

By

Published : Apr 27, 2020, 11:17 PM IST

people came out to road at Bidar in amid lockdown
ಬೀದರ್​​ನಲ್ಲಿ ಲಾಕ್​ಡೌನ್​ ಲೆಕ್ಕಿಸದೇ ರಸ್ತೆಗಿಳಿದ ಮಂದಿ

ನಗರದ ಮಡಿವಾಳ ಸರ್ಕಲ್, ಅಂಬೇಡ್ಕರ್ ವೃತ್ತ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜನರು ರಸ್ತೆಗೆ ಬಂದಿದ್ದರು. 15 ಕೊರೊನಾ ಸೋಂಕಿತರು ದೃಢಪಟ್ಟ ಬೀದರ್ ನಗರವನ್ನು ಹಾಟ್​ಸ್ಪಾಟ್​​ ಎಂದು ಗುರುತಿಸಲಾಗಿದ್ದು, ಕಳೆದ ವಾರ 9 ಜನ ಸೋಂಕಿತರು ಗುಣಮುಖವಾದ ಮೇಲೆ ಲಾಕ್​ಡೌನ್ ಸಡಿಲಿಕೆಯಾದಂತೆ ಕಂಡುಬಂದು ಜನರ ಓಡಾಟ ಹೆಚ್ಚಾಗುತ್ತಿದೆ.

ಬೀದರ್: ಜಿಲ್ಲೆಯಲ್ಲಿ ಲಾಕ್​ಡೌನ್​ ನಡುವೆಯೂ ಜನರು ನಗರದ ಹಲವು ರಸ್ತೆಗಳಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಜೋರಾಗಿತ್ತು.

ಮಡಿವಾಳ ಸರ್ಕಲ್, ಅಂಬೇಡ್ಕರ್ ವೃತ್ತ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜನರು ರಸ್ತೆಗೆ ಬಂದಿದ್ದರು. 15 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟ ಬೀದರ್ ನಗರವನ್ನು ಹಾಟ್​ಸ್ಪಾಟ್​​ ಎಂದು ಗುರುತಿಸಲಾಗಿದ್ದು, ಕಳೆದ ವಾರ 9 ಜನ ಸೋಂಕಿತರು ಗುಣಮುಖರಾದ ಮೇಲೆ ಲಾಕ್​ಡೌನ್ ಸಡಿಲಿಕೆಯಾದಂತೆ ಕಂಡುಬಂದು ಜನರು ಹೊರ ಬರಲು ಆರಂಭಿಸಿದ್ದಾರೆ.

ಬೀದರ್​​ನಲ್ಲಿ ಲಾಕ್​ಡೌನ್​ ಲೆಕ್ಕಿಸದೇ ರಸ್ತೆಗಿಳಿದ ಮಂದಿ

ಕೆನರಾ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ ಹತ್ತಿರ ಜನರು ಹಣ ಡ್ರಾ ಮಾಡಿಕೊಳ್ಳಲು ಮುಗಿ ಬಿದ್ದಿದ್ದರು. ಈ ವೇಳೆಯಲ್ಲಿ ನ್ಯೂ ಟೌನ್ ಪಿಎಸ್​​ಐ ಗುರು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನರಿಗೆ ತಿಳಿಹೇಳಲು ಹರಸಾಹಸ ಪಡಬೇಕಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.