ETV Bharat / state

ತಜ್ಞರ ಸಲಹೆ ಪಡೆದು ಲಾಕ್​​​ಡೌನ್ ಬಗ್ಗೆ ನಿರ್ಧರಿಸಲಿ: ಖಂಡ್ರೆ ಒತ್ತಾಯ

author img

By

Published : Apr 10, 2020, 9:43 PM IST

ಲಾಕ್​ಡೌನ್​: ತಜ್ಞರ ಸಲಹೆ ಪಡೆದು ಲಾಕ್​​​ಡೌನ್​ ಕುರಿತು ತೀರ್ಮಾನ ಕೈಗೊಳ್ಳಲಿ-ಖಂಡ್ರೆ

ಲಾಕ್​​ಡೌನ್​ ಅವಧಿ ಮುಕ್ತಾಯದ ಹಂತ ತಲುಪುವ ದಿನ ಹತ್ತಿರವಾಗುತ್ತಿದ್ದು, ಲಾಕ್​​ಡೌನ್ ಮುಂದುವರಿಸಬೇಕೇ ಅಥವಾ ಅಂತ್ಯ ಹಾಡಬೇಕೆ ಎಂಬ ಪ್ರಶ್ನೆ ಎದುರಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಹೆ ನೀಡಿದ್ದಾರೆ. ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಷೇತ್ರಗಳ ಕುರಿತು ತಜ್ಞರ ಸಲಹೆಯಂತೆ ಲಾಕ್​ಡೌನ್ ಮುಂದುವರಿಸಿದರೆ ಸರ್ಕಾರದ ತಿರ್ಮಾನದ ಜೊತೆ ನಾವು ಇರುತ್ತೇವೆ ಎಂದಿದ್ದಾರೆ.

ಬೀದರ್: ಲಾಕ್​​ಡೌನ್ ಆದೇಶವನ್ನು ತಜ್ಞರ ಸಲಹೆ ಮೇರೆಗೆ ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಹಾಮಾರಿ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಷೇತ್ರಗಳ ಕುರಿತು ತಜ್ಞರ ಸಲಹೆಯಂತೆ ಲಾಕ್​ಡೌನ್ ಮುಂದುವರಿಸಿದರೆ ಸರ್ಕಾರದ ತಿರ್ಮಾನದ ಜೊತೆ ನಾವು ಇರುತ್ತೇವೆ ಎಂದಿದ್ದಾರೆ.

ಅಲ್ಲದೇ ಫೆ.12 ರಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಎಚ್ವರಿಸಿದ್ರು, ಆದರೆ ಅಂದೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೂ ಈಗ ಹಾಕಲಾದ ಲಾಕ್​​​​ಡೌನ್ ಪರಿಣಾಮಕಾರಿಯಾಗಬೇಕಿದ್ದು, ಇದರಿಂದಾಗಿ ಸಂಕಟದಲ್ಲಿರುವ ಬಡವರನ್ನು ಹಸಿವಿನಿಂದ ಉಳಿಸಿಕೊಳ್ಳುವ ಎಲ್ಲಾ ಕ್ರಮಗಳು ಸರ್ಕಾರ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಉಳಿಸಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.