ETV Bharat / state

ಸಾರಿಗೆ ಸಂಸ್ಥೆ ಘಟಕದಲ್ಲಿ ಡಿಸೇಲ್ ಕಳ್ಳತನ.. 7 ಸಿಬ್ಬಂದಿ ಸಸ್ಪೆಂಡ್...!

author img

By

Published : Oct 14, 2019, 10:51 PM IST

ಸಾರಿಗೆ ಸಂಸ್ಥೆ ಘಟಕದಲ್ಲಿ ಡಿಸೇಲ್ ಕಳ್ಳತನ ಪ್ರಕರಣ 7 ಸಿಬ್ಬಂದಿ ಸಸ್ಪೆಂಡ್

ಭಾಲ್ಕಿ ಘಟಕದಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಡೀಸೆಲ್ ಕಳ್ಳತನ ಪ್ರಕರಣದಲ್ಲಿ ಸಿಬ್ಬಂದಿ ಬೇಜವಾಬ್ದಾರಿತನ ಕಂಡುಬಂದ ಹಿನ್ನೆಲೆಯಲ್ಲಿ 7 ಜನರನ್ನ ಅಮಾನತು ಮಾಡಲಾಗಿದೆ.

ಬೀದರ್: ಈಶಾನ್ಯ ಸಾರಿಗೆ ಸಂಸ್ಥೆಯ ಭಾಲ್ಕಿ ಘಟಕದಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಡೀಸೆಲ್ ಕಳ್ಳತನ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಿಬ್ಬಂದಿ ಬೇಜವಾಬ್ದಾರಿತನ ಗೊತ್ತಾಗಿದ್ದು, 7 ಜನರನ್ನ ಅಮಾನತುಗೊಳಿಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸಾರಿಗೆ ಸಂಸ್ಥೆ ಘಟಕದಲ್ಲಿ ಡಿಸೇಲ್ ಕಳ್ಳತನ ಪ್ರಕರಣ 7 ಸಿಬ್ಬಂದಿ ಸಸ್ಪೆಂಡ್

ಜಿಲ್ಲೆಯ ಭಾಲ್ಕಿ ಘಟಕದ ಪ್ರಭಾರಿ ವ್ಯವಸ್ಥಾಪಕ ಮಹ್ಮದ್ ಇಸಾಕ್, ಸಹಾಯಕ ಕಾರ್ಯ ಅಧೀಕ್ಷಕ ಎಸ್.ಟಿ. ರಾಥೋಡ್, ಪಾರುಪತ್ತೇಗಾರ ಸಂತೋಷ, ಡೇಟಾ ಎಂಟ್ರಿ ಆಪರೇಟರ್ ಜಿತೇಂದ್ರ, ಪ್ರಭಾರಿ ಲೆಕ್ಕಪತ್ರ ಮೇಲ್ವಿಚಾರಕ ಮಹೇಶ, ತಾಂತ್ರಿಕ ಸಹಾಯಕ ಬಸವರೆಡ್ಡಿ ಹಾಗೂ ಭದ್ರತಾ ಸಿಬ್ಬಂದಿ ಶಿವಕುಮಾರ ಅಮಾನತುಗೊಂಡ ಸಿಬ್ಬಂದಿ

ಜುಲೈ 1ರಂದು ಭಾಲ್ಕಿ ಘಟಕದ ಬಂಕ್​ನಲ್ಲಿ 2,488 ಲೀಟರ್ ಡೀಸೆಲ್ ವ್ಯತ್ಯಾಸ ಕಂಡು ಬಂದಿತ್ತು. ಇದರಿಂದ ಸಂಸ್ಥೆಗೆ 1.48 ಲಕ್ಷ ರೂ. ನಷ್ಟ ಉಂಟಾಗಿತ್ತು. ತನಿಖೆ ನಡೆಸಿ ವರದಿ ತಯಾರಿಸಿದ ಅಧಿಕಾರಿಗಳು ಡಿಸೇಲ್​ ಕಳವು ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಪರಿಣಾಮ 7 ಮಂದಿ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ, ತಕ್ಷಣವೆ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

Intro:ಸಾರಿಗೆ ಸಂಸ್ಥೆ ಘಟಕದಿಂದ ಡಿಸೇಲ್ ಕಳ್ಳತನ, 7 ಜನ ಸಿಬ್ಬಂಧಿಗಳು ಸಸ್ಪೇಂಡ್...!

ಬೀದರ್:
ಈಶಾನ್ಯ ಸಾರಿಗೆ ಸಂಸ್ಥೆಯ ಭಾಲ್ಕಿ ಘಟಕದಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಡೀಸೆಲ್ ಕಳ್ಳತನ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಿಬ್ಬಂಧಿಗಳ ಬೇಜವಾಬ್ದಾರಿತನ ಗೊತ್ತಾಗಿದ್ದು ಈ ಹಿನ್ನಲೆಯಲ್ಲಿ 7 ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.


ಜಿಲ್ಲೆಯ ಭಾಲ್ಕಿ ಘಟಕದ ಪ್ರಭಾರಿ ವ್ಯವಸ್ಥಾಪಕ ಮಹ್ಮದ್ ಇಸಾಕ್, ಸಹಾಯಕ ಕಾರ್ಯ ಅಧೀಕ್ಷಕ ಎಸ್.ಟಿ. ರಾಥೋಡ್, ಪಾರುಪತ್ತೇಗಾರ ಸಂತೋಷ, ಕಿರಿಯ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಜಿತೇಂದ್ರ, ಸಹಾಯಕ ಲೆಕ್ಕಿಗ, ಪ್ರಭಾರಿ ಲೆಕ್ಕಪತ್ರ ಮೇಲ್ವಿಚಾರಕ ಮಹೇಶ, ತಾಂತ್ರಿಕ ಸಹಾಯಕ ಬಸವರೆಡ್ಡಿ ಹಾಗೂ ಭದ್ರತಾ ಸಿಬ್ಬಂದಿ ಶಿವಕುಮಾರ ಅವರನ್ನು ಅಮಾನತುಗೊಳಿಸಲಾಗಿದೆ.

ಜುಲೈ 1ರಂದು ಭಾಲ್ಕಿ ಘಟಕದ ಬಂಕ್​ನಲ್ಲಿ 2,488 ಲೀಟರ್ ಡೀಸೆಲ್ ವ್ಯತ್ಯಾಸ ಕಂಡು ಬಂದಿತ್ತು. ಇದರಿಂದ ಸಂಸ್ಥೆಗೆ 1.48 ಲಕ್ಷ ರೂ. ನಷ್ಟ ಉಂಟಾಗಿತ್ತು. ತನಿಖೆ ನಡೆಸಿ ವರದಿ ತಯಾರಿಸಿದ ಅಧಿಕಾರಿಗಳು ಡಿಸೇಲ್​ ಕಳವು ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಪರಿಣಾಮ, 7 ಮಂದಿ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣವೆ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.