ETV Bharat / state

ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ: ಬಳ್ಳಾರಿಯಿಂದಲೇ ಮತ ಚಲಾಯಿಸಲಿರುವ ರಾಹುಲ್​ ಗಾಂಧಿ

author img

By

Published : Oct 17, 2022, 10:15 AM IST

Updated : Oct 17, 2022, 10:59 AM IST

Bharat Jodo yatra  Congress president election  Bharat Jodo yatra temporally stop  Congress president election voting  ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ  ಮತ ಚಲಾಯಿಸಲಿರುವ ರಾಹುಲ್​ ಗಾಂಧಿ  ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ  ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ  ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭ
ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ

24 ವರ್ಷಗಳ ಸುದೀರ್ಘ ಅಂತರದ ನಂತರ ಗಾಂಧಿ ಕುಟುಂಬತೇರ ಸದಸ್ಯರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಇಂದು ಮತದಾನ ನಡೆದಿದೆ. ಭಾರತ್​ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್​ ಗಾಂಧಿ ಬಳ್ಳಾರಿಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಬಳ್ಳಾರಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಬೆಳಿಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿದೆ. ಹೀಗಾಗಿ ಇಂದು ಭಾರತ್​ ಜೋಡೋ ಯಾತ್ರೆಗೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ.

ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿಯ ಸಂಗನಕಲ್ಲು ಗ್ರಾಮ ಬಳಿಯೇ ವಾಸ್ತವ್ಯ ಹೂಡಿದ್ದು, ಅಲ್ಲಿಂದಲೇ ಮತದಾನ ಮಾಡಲಿದ್ದಾರೆ. ಮತದಾನ ಬೇಕಾಗುವ ಎಲ್ಲ ವ್ಯವಸ್ಥೆ ಈಗಾಗಲೇ ಕಲ್ಪಿಸಲಾಗಿದೆ.

  • This is the polling booth at the #BharatJodoYatra campsite in Sanganakallu that will open at 10am. It is the meeting room container converted into a polling booth for the Congress Presidential elections. pic.twitter.com/3LvvALEHp9

    — Jairam Ramesh (@Jairam_Ramesh) October 17, 2022 " class="align-text-top noRightClick twitterSection" data=" ">

ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಬಳಿ ಇಂದು ಮತ್ತು ನಾಳೆ ವಾಸ್ತವ್ಯ ಹೂಡಿರುವ ರಾಹುಲ್ ಗಾಂಧಿ, ಎಐಸಿಸಿ ಹಾಗೂ ಕೆಪಿಸಿಸಿಯ ಸುಮಾರು 45 ಸದಸ್ಯರು ಅಲ್ಲೇ ಮತದಾನ ಹಕ್ಕು ಚಲಾಯಿಸಲಿದ್ದಾರೆ. ಪಾದಯಾತ್ರೆಗೆ ಬಳಸುವ ರೂಮ್ ಕಂಟೇನರ್​ ಅನ್ನು ಮತಗಟ್ಟೆಯಾಗಿ ಬದಲಾಯಿಸಿದ್ದು, ರಾಹುಲ್ ಗಾಂಧಿ ಸೇರಿ 45 ಸದಸ್ಯರು ಇಲ್ಲಿಂದಲೇ ಹಕ್ಕು ಚಲಾಯಿಸಲಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕಣದಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪೈಪೊಟಿ ನಡೆಸುತ್ತಿದ್ದಾರೆ.

ಓದಿ: 137 ವರ್ಷಗಳ ಕಾಂಗ್ರೆಸ್​​ ಇತಿಹಾಸದಲ್ಲಿ ಆರನೇ ಅಧ್ಯಕ್ಷೀಯ ಚುನಾವಣೆ: ಇಂದು ಮತದಾನ

Last Updated :Oct 17, 2022, 10:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.