ETV Bharat / state

ಬಿಜೆಪಿ ಸರ್ಕಾರದ ವೈಫಲ್ಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ: ಯು ಟಿ ಖಾದರ್

author img

By

Published : Dec 20, 2022, 6:00 PM IST

ಯು ಟಿ ಖಾದರ್ ಹಾಗೂ ಬಿ ಕೆ ಹರಿಪ್ರಸಾದ್​
ಯು ಟಿ ಖಾದರ್ ಹಾಗೂ ಬಿ ಕೆ ಹರಿಪ್ರಸಾದ್​

ಇಡಿ ಅಂದ್ರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್​ಮೆಂಟ್​, ಐಟಿ ಅಂದ್ರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ಬೆಳಗಾವಿ: ಸರ್ಕಾರಕ್ಕೆ ಜನರ ಪರ ಕಾಳಜಿ ಇಲ್ಲ. ಬಿಜೆಪಿ ಸರ್ಕಾರದ ವೈಫಲ್ಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಪ್ರತಿಪಕ್ಷದ ಉಪ ನಾಯಕ ಯು ಟಿ ಖಾದರ್ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಡಬಲ್ ಇಂಜಿನ್ ಸರ್ಕಾರಕ್ಕೆ ಕಾಳಜಿ ಇಲ್ಲ. ಇದರ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದೇವೆ. ಮೀಸಲಾತಿ ವಿಚಾರವಾಗಿ ದ್ವಂದ್ವ ನಿಲುವು ಬಿಜೆಪಿಯಲ್ಲಿದೆ. ರಾಜ್ಯ ಸರ್ಕಾರ ಒಂದು ಹೇಳಿದ್ರೆ ಕೇಂದ್ರ ಇನ್ನೊಂದು ಹೇಳುತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ವಿವರಿಸಿದರು.

ಸಿಬಿಐ ಬಿಜೆಪಿ ಮುಂಚೂಣಿ ಘಟಕ: ಬಿಕೆಹೆಚ್

ಇಡಿ ಅಂದ್ರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್​ಮೆಂಟ್​, ಐಟಿ ಅಂದ್ರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ಸುವರ್ಣಸೌಧದಲ್ಲಿ ಮಂಗಳವಾರ ಮಾತನಾಡಿದ ಸಂದರ್ಭ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ನಡೆದಿದೆ. ಐಟಿ ಅಂದರೆ ಅವರ ಇಂಟಲಿಜೆಂಟ್ ಡಿಪಾರ್ಟ್‌ಮೆಂಟ್ ಆಗಿ ಚಿಲುಮೆ ರೀತಿ ಕೆಲಸ ಮಾಡುತ್ತಿದೆ. ಸಿಬಿಐ ಕೂಡಾ ಬಿಜೆಪಿ ವಿರೋಧಿಗಳ ವಿರುದ್ಧ ದೊಡ್ಡ ಅಸ್ತ್ರ ಇಟ್ಟುಕೊಂಡು ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಿದೆ. ಆದರೆ ನಾವು ಭಯ ಪಡಲ್ಲ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಸದನಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಆಂತರಿಕ ವಿಚಾರವಾಗಿದೆ. ರಮೇಶ್ ಹಾಗೂ ಈಶ್ವರಪ್ಪ ಮಾತ್ರವಲ್ಲ, ಇತರರೂ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.

ನಾವು ಕತ್ತಿನ ಪಟ್ಟಿ ಹಿಡಿಯಲು ಆಗಲ್ಲ: ಸಾವರ್ಕರ್ ಫೋಟೋ ವಿವಾದದ ವಿಚಾರವಾಗಿ ಕಾಂಗ್ರೆಸ್ ಮುಖಂಡರ ನಡುವಿನ ಗೊಂದಲ ಕುರಿತಾಗಿ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಹುಳಿ ಹಿಂಡುವ ಕೆಲಸ ಆಗಬಾರದು. ಸರ್ಕಾರ ತೀರ್ಮಾನ ಕೈಗೊಂಡಾಗ ನಾವು ಕತ್ತಿನ ಪಟ್ಟಿ ಹಿಡಿಯಲು ಆಗಲ್ಲ. ನಾವು ನಾಗಪುರ ಯುನಿವರ್ಸಿಟಿಯವರಲ್ಲ. ನಾವು ಜನಸಾಮಾನ್ಯರ ವಿವಿಯವರು. ಸಾವರ್ಕರ್ ಕೊಲೆ ಮಾಡಿ ಜೈಲಿಗೆ ಹೋದವರೇ ವಿನಃ, ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ. ಆರು ಬಾರಿ ಕ್ಷಮಾಪಣೆ ಪತ್ರ ಕೊಟ್ಟು ಬ್ರಿಟಿಷರ ತಟ್ಟೆ ಕಾಸಿನಲ್ಲಿ ಜೀವನ ಮಾಡಿದವರು ಎಂದು ಟೀಕಿಸಿದರು.‌

ಸಂವಿಧಾನದಲ್ಲಿ ನಂಬಿಕೆ ಇಲ್ಲ: ಅವರ ಫೋಟೋ ಹಾಕಿರುವುದು ಕರ್ನಾಟಕದ ಜನರಿಗೆ ಅವಮಾನ.‌ ಗಡಿ ವಿವಾದ ಇರುವಾಗ ಆ ಪ್ರದೇಶದ ಹಾಗೂ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ವ್ಯಕ್ತಿಯ ಫೋಟೋ ಹಾಕಿರುವುದು ನೋಡಿದಾಗ ನಗಬೇಕೋ‌ ಅಳಬೇಕೋ ಗೊತ್ತಾಗುತ್ತಿಲ್ಲ.‌ ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.

ನಮ್ಮಲ್ಲಿ ಮತ ಭೇದ ಇರುತ್ತೆ: ನಮ್ಮಲ್ಲಿ ಯಾವುದೇ ಗೊಂದಲ, ದ್ವಂದ್ವ ಇಲ್ಲ. ನಾವು ಹಾವಿನ ಪುರ ವಿವಿಯಿಂದ ತೀರ್ಮಾನ ಮಾಡಲ್ಲ. ಸಾವರ್ಕರ್ ವಿಚಾರವಾಗಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಬೇರೆ ಬೇರೆ ರೀತಿಯಲ್ಲಿ ವಿರೋಧ ಮಾಡುತ್ತಾರೆ. ನಮ್ಮಲ್ಲಿ ಮತ ಭೇದ ಇರುತ್ತೆ. ಸಿದ್ದರಾಮಯ್ಯ ಅವರಿಂದ ಟಿಕೆಟ್ ಘೋಷಣೆ ವಿಚಾರವಾಗಿ,‌ ಯಾರೂ ಟಿಕೆಟ್ ಘೋಷಣೆ ಮಾಡಲು ಆಗಲ್ಲ. ಅಧ್ಯಕ್ಷರು ಹಾಗೂ ಸಿಎಲ್​ಪಿ ಕೂಡಾ ಅವರವರ ಟಿಕೆಟ್ ಘೋಷಣೆ ಮಾಡಲು ಆಗಲ್ಲ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಆಗಿ ಮಲ್ಲಿಕಾರ್ಜುನ ಖರ್ಗೆ ಸೀಲ್ ಬೀಳುವವರೆಗೂ ಯಾರಿಗೂ ಏನು ಗ್ಯಾರಂಟಿ ಇಲ್ಲ. ದೊಡ್ಡ ದೊಡ್ಡ ಮುಖ್ಯಮಂತ್ರಿಗೂ ಕಾಂಗ್ರೆಸ್​ನಲ್ಲಿ ಸೀಟು ತಪ್ಪಿ ಹೋಗಿದೆ ಎಂದರು.

ಓದಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ.. ನಿಲುವಳಿ ಸೂಚನೆ ನೀಡಲು ಕಾಂಗ್ರೆಸ್ ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.