ETV Bharat / state

ಹೋರಾಟಗಾರರ ಬಲಿದಾನ ವ್ಯರ್ಥ ಮಾಡಲು ಬಿಡಲ್ಲ: ಸಿಎಂ ಬಸವರಾಜ ಬೊಮ್ಮಾಯಿ

author img

By

Published : Nov 9, 2022, 9:52 PM IST

Updated : Nov 9, 2022, 10:33 PM IST

ಜನಸಂಕಲ್ಪವೇ ನಮ್ಮ ಸಂಕಲ್ಪ, ಕನ್ನಡ ನಾಡು ಕಟ್ಟೋದೆ ನಮ್ಮ ಸಂಕಲ್ಪ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ: ದೇಶಕ್ಕಾಗಿ ಹೋರಾಡಿದವರ ಬಲಿದಾನ ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಖಾನಾಪೂರ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಜನಸಂಕಲ್ಪ ಯಾತ್ರೆ ಕಳೆದ ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಇವತ್ತು ಒಂಬತ್ತನೆ ಜಿಲ್ಲೆಗೆ ನಾವು ಬಂದಿದ್ದೇವೆ. ಪ್ರತಿ ಯಾತ್ರೆಯಲ್ಲಿ ಜನ ಆಶೀರ್ವಾದ ಮಾಡ್ತಿದ್ದಾರೆ. ಜನಸಂಕಲ್ಪವೇ ನಮ್ಮ ಸಂಕಲ್ಪ, ಕನ್ನಡ ನಾಡು ಕಟ್ಟೋದೆ ನಮ್ಮ ಸಂಕಲ್ಪ. ನವಕರ್ನಾಟಕದಿಂದ ನವಭಾರತ ಕಟ್ಟುವುದೇ ನಮ್ಮ ಸಂಕಲ್ಪ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು

ಬಲಿದಾನ ವ್ಯರ್ಥ ಮಾಡಲು ಬಿಡಲ್ಲ: ಈ ದೇಶದ ಸಂಸ್ಕೃತಿ ಉಳಿಸಲು ಸಾಕಷ್ಟು ಜನರ ಬಲಿದಾನ, ಹೋರಾಟವಿದೆ. ಈ ಪುಣ್ಯಭೂಮಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜನ್ಮ ತಾಳಿದ್ದಾರೆ. ಈ ದೇಶದ ಸಂಸ್ಕೃತಿ ಉಳಿಸಲು ಛತ್ರಪತಿ ಶಿವಾಜಿ ಮಹಾರಾಜರು ಹೋರಾಟ ಮಾಡಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಹೋರಾಟ ಮಾಡಿದ್ದಾರೆ. ಇದೇ ಖಾನಾಪುರ ಮಣ್ಣಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಣ್ಣಾಗಿದ್ದಾರೆ. ಇವರೆಲ್ಲರ ಬಲಿದಾನ ವ್ಯರ್ಥ ಮಾಡಲು ನಾವು ಬಿಡಲ್ಲ ಎಂದರು.

ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ: ಬಿಜೆಪಿ ಅಂದ್ರೆ ದೇಶಭಕ್ತಿ ಪಕ್ಷ, ದೇಶ ಕಾಯುವ ಪಕ್ಷವಾಗಿದೆ. ದೇಶ ಮೊದಲು ತದನಂತರ ಎಲ್ಲರೂ ಅನ್ನುವ ಪಕ್ಷ ಬಿಜೆಪಿ. ದೇಶದಲ್ಲಿ ನೂರು ವರ್ಷ ದಾಟಿರುವ ಕಾಂಗ್ರೆಸ್ ಪಕ್ಷ ಇದೆ. ಒಡೆದು ಆಳಿದ ಬ್ರಿಟಿಷ್‌ ಆಳಿ ಹೋಗಿದ್ದಾರೆ. ಬ್ರಿಟಿಷರು ತಮ್ಮ ನೀತಿಯನ್ನು ಬಳುವಳಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ತಂದ್ರು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ. ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ನಕ್ಸಲರಿಗೆ ಪುಷ್ಟಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಈಗ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಸತೀಶ್​ ಜಾರಕಿಹೊಳಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಮನಸ್ಥಿತಿ, ಭಾವನೆ ಹೊಲಸು ಇದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು

ಕಾರ್ಮಿಕರ ಮಕ್ಕಳಿಗೆ ಯೋಜನೆಯ‌ ಲಾಭ: ನಂಬಿಕೆ ಇಲ್ಲ ಅಂದರೆ ನಮ್ಮನ್ನು ಆಳುವ ನೈತಿಕತೆ ಇಲ್ಲ. ಸಂಸ್ಕೃತಿ, ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಂದೆಂದಿಗೂ ಅಧಿಕಾರ ಕೊಡಬಾರದು. ಐದು ವರ್ಷ ಆಡಳಿತ ಮಾಡಿ ಜನರಿಗೆ ಯಾವ ಭಾಗ್ಯ ಕೊಡಲಿಲ್ಲ. ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಂಡ್ರು.

ಅಧಿಕಾರದ ಗುಂಗಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಇದ್ದಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ಅಧಿಕಾರಕ್ಕೆ ಬರಬಾರದು. ಬಡವರ ಮಕ್ಕಳಿಗಾಗಿ ವಿದ್ಯಾರ್ಥಿ ನಿಧಿಯನ್ನು ಕೊಡುತ್ತಿದ್ದೇವೆ. ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ ಯೋಜನೆಯ‌ ಲಾಭ ಆಗಿದೆ. ಈ ಭಾಗದಲ್ಲಿ ಗೌಳಿ ವೃತ್ತಿ ಜಾಸ್ತಿ ಇದೆ. ಗೌಳಿ ವೃತ್ತಿಯಲ್ಲಿ ಇರೋರಿಗೆ ವಿಶೇಷ ಕಾರ್ಯಕ್ರಮ ಮಾಡಲಾಗಿದೆ ಎಂದು ಹೇಳಿದರು.

ಮಹಿಳೆಯರ ಅಭಿವೃದ್ಧಿಗೆ ವಿಶೇಷ ಯೋಜನೆ: ಮರಾಠ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ. ನಿಗಮಕ್ಕೆ ಹೆಚ್ಚಿನ ಹಣ ಕೊಡುತ್ತೇನೆ. ಗೌಳಿ ವೃತ್ತಿಗೆ ಬೇಕಾದ ಸೌಲಭ್ಯ ಒದಗಿಸಬೇಕು. ಯುವಕರು, ಮಹಿಳೆಯರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತೇವೆ. ಕಾಂಗ್ರೆಸ್​ನಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ?. ಮರಾಠಾ ಅಭಿವೃದ್ಧಿ ನಿಗಮ ನಿಮ್ಮ ಕಾಲದಲ್ಲಿ ಆಯಿತಾ?. ಎಲ್ಲಾ ವರ್ಗದ ಜನರಿಗೆ ಈಗ ಯೋಜನೆ ರೂಪಿಸಿದ್ದೇವೆ. ಸಾಮಾಜಿಕ ನ್ಯಾಯ ಭಾಷಣದಿಂದ ಸಾಧ್ಯವಿಲ್ಲ. ಅದನ್ನು ನಾವು ಮಾಡಿ ತೋರಿಸುತ್ತಿದ್ದೇವೆ.

ಕುಡಿಯುವ ನೀರು ಪೂರೈಕೆ ಮಾಡುತ್ತೇವೆ: ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಿಸಲು ನಾವು ದಿಟ್ಟ ಕ್ರಮ ಕೈಗೊಂಡಿದ್ದೇವೆ. ಖಾನಾಪುರದ ಅಭಿವೃದ್ಧಿ ಬಗ್ಗೆ ನನಗೆ ಕಲ್ಪನೆ ಇದೆ. ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ಹಾಸ್ಟೆಲ್​ ನಿರ್ಮಾಣ ಮಾಡಿದ್ದೇವೆ. ಖಾನಾಪುರದ ನೀರಾವರಿ ಯೋಜನೆ ಕೊಡಿಸುತ್ತೇವೆ. ಶೀಘ್ರದಲ್ಲಿ ಯೋಜನೆ ಜಾರಿ ಆಗಲಿದೆ. ಖಾನಾಪುರದ ನೂರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತೇನೆ: ಖಾನಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಆಕಾಂಕ್ಷಿಗಳು ಒಂದಾಗಿ ಕಮಲ ಅರಳಿಸಬೇಕು. ನಮ್ಮಲ್ಲಿಯ ಒಡಕಿನಿಂದ ಬೇರೆ ಪಕ್ಷ ಇಲ್ಲಿ ಗೆದ್ದಿದೆ. ಪಕ್ಷದ ನಾಯಕರು ಯಾರಿಗೆ ಟಿಕೆಟ್ ಕೊಟ್ಟರು ಬೆಂಬಲ ನೀಡಬೇಕು. ಆಕಾಂಕ್ಷಿಗಳು ಎಲ್ಲರೂ ಬದ್ದವಾಗಿ ಇರಬೇಕು ಎಂದು ಎಲ್ಲಾ ಆಕಾಂಕ್ಷಿಗಳನ್ನು ಸಾಲಾಗಿ ನಿಲ್ಲಿಸಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣ ಬೋಧಿಸಿದರು.

ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತೇನೆ. ಕ್ಷೇತ್ರದ ಹಲವಾರು ಆಂಕಾಕ್ಷಿಗಳಲ್ಲಿ ನಾನು ಒಬ್ಬ. ಪಕ್ಷ ಯಾರಿಗೆ ಬಿ ಫಾರಂ ಕೊಟ್ಟರು ಪ್ರಾಮಾಣಿಕವಾಗಿ ದುಡಿದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು 9 ಟಿಕೆಟ್ ಆಕಾಂಕ್ಷಿಗಳ ಕೈ ಮುಂದೆ ಮಾಡಿಸಿ ಪ್ರಮಾಣ ವಚನ ಬೋಧಿಸಿದರು.

ಓದಿ: ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ.. ಸಿಎಂಗೆ ಪತ್ರ ಬರೆದ ಸತೀಶ್​ ಜಾರಕಿಹೊಳಿ

Last Updated :Nov 9, 2022, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.