ETV Bharat / state

ಬೆಳಗಾವಿ ಡಿಎಚ್‌ಒಗೆ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ

author img

By

Published : Jul 29, 2022, 11:46 AM IST

Anjali_Nimablkar
ಶಾಸಕಿ ಅಂಜಲಿ ನಿಂಬಾಳ್ಕರ್​​

ಖಾನಪೂರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು ನಿಯೋಜಿಸಲಾಗಿದ್ದ ವೈದ್ಯರನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಮರಳಿ ಕರೆಸಿಕೊಂಡಿದ್ದರು.

ಬೆಳಗಾವಿ: ಖಾನಾಪೂರ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದ್ದು ನಿಯೋಜಿಸಲಾಗಿದ್ದ ವೈದ್ಯರುಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಅವರು ವಾಪಸ್ ಕರೆಸಿಕೊಂಡಿರುವ ಕುರಿತು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಡಿಹಚ್​ಒಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

ಡೆಪ್ಯೂಟೇಷನ್ ಆಧಾರದ ಮೇಲೆ ಚರ್ಮರೋಗ ತಜ್ಞೆ ಡಾ.ತಸ್ನಿಂ ಬಾನು, ಡಾ.ಭೂಷಣ್, ಡಾ.ಯಲ್ಲನಗೌಡ ಪಾಟೀಲ್, ಡಾ.ಸರಳಾ ಟಿಪ್ಪನ್ನವರು ಸೇರಿದಂತೆ ಇತರ ವೈದ್ಯರು, ಸಿಬ್ಬಂದಿಯನ್ನು ಖಾನಾಪೂರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ನಿಯೋಜಿಸಲಾಗಿತ್ತು.

ಆದರೆ ಮರಳಿ ಅವರ ಕಾರ್ಯಸ್ಥಾನಗಳಿಗೆ ಸೇರುವಂತೆ ಡಿಎಚ್‌ಒ ಕರೆಸಿಕೊಂಡಿದ್ದು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಹೀಗಾಗಿ ನಾಲ್ಕು ದಿನಗಳೊಳಗಾಗಿ ವೈದ್ಯರುಗಳನ್ನು ಮರಳಿ ನಿಯೋಜಿಸಬೇಕು ಎಂದು ಶಾಸಕಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಐದು ತರಗತಿಗಳಿಗೆ ಒಂದೇ ಕೊಠಡಿ, ರಂಗಮಂದಿರಕ್ಕೆ ಟಾರ್ಪಲ್ ಕಟ್ಟಿ ಮಕ್ಕಳಿಗೆ ಪಾಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.