ETV Bharat / state

ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ: ಅಮಿತ್ ಶಾ

author img

By

Published : Jan 28, 2023, 9:13 PM IST

Updated : Jan 28, 2023, 11:11 PM IST

Home Minister Amit Shah speech in belagavi
ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ:ಅಮಿತ್ ಶಾ

ರಾಜ್ಯ ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ - ಮಹದಾಯಿ ಯೋಜನೆಯನ್ನು ಗೋವಾ ಸರ್ಕಾರ ಜೊತೆ ಮಾತನಾಡಿ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಲಾಗಿದೆ - ಗೃಹ ಸಚಿವ ಅಮಿತ್ ಶಾ ಹೇಳಿಕೆ

ಗೃಹ ಸಚಿವ ಅಮಿತ್ ಶಾ ಭಾಷಣ

ಬೆಳಗಾವಿ: ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬಸವರಾಜ್ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಬೆಳಗಾವಿಯ ಎಂಕೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನ ಏಪ್ರಿಲ್, ಮೇ ನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ. ಕಾಂಗ್ರೆಸ್ ನೆರವಿನಿಂದ ಅಧಿಕಾರದ ಮಾಡಿದ ಜೆಡಿಎಸ್ ಪಕ್ಷವನ್ನು ದೂರವಿಡಬೇಕಿದೆ ಎಂದರು.

ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ರಾಜ್ಯ ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ. ಜೆಡಿಎಸ್​ಗೆ ಹಾಕೋ ಮತ ಕಾಂಗ್ರೆಸ್ ಹಾಕಿದ ಹಾಗೆ, ಅನೇಕ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಕೊಡುತ್ತಿದ್ದಾರೆ. ಆದರೆ, ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಕಾಂಗ್ರೆಸ್, ಜೆಡಿಎಸ್ ಬಡವರಿವಾಗಿ ಏನು ಮಾಡಿದೆ ಎಂದು ನಾನೂ ಪ್ರಶ್ನೆ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದರು. ದಲಿತ ಮಗನನ್ನು ರಾಷ್ಟ್ರಪತಿ ಮಾಡಿದ್ವಿ, ಆದಿವಾಸಿ ‌ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಕಳಸಾ,‌ ಬಂಡೂರಿ ಯೋಜನೆ ನೀಡಲು ಸಿಎಂ ದೊಡ್ಡ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮಹದಾಯಿ ಯೋಜನೆ ಡಿಪಿಆರ್ ಅನುಮೋದನೆ ನೀಡಿದೆ: ಕರ್ನಾಟಕ ಮಹತ್ವಾಕಾಂಕ್ಷಿ ಯೋಜನೆಯಾದ ಮಹದಾಯಿ ಯೋಜನೆಯನ್ನು ಗೋವಾ ಸರ್ಕಾರ ಜೊತೆ ಮಾತನಾಡಿ ಯೋಜನೆಗೆ ಪ್ರಾರಂಭಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಚಾಲನೆ ನೀಡಲಾಗಿದೆ. ಆದರೆ, ಹಿಂದೆ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಾಗ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುದಿಲ್ಲ ಎಂದು ಹೇಳಿದ್ದರು. ಆದರೆ, ನಮ್ಮ ಸರ್ಕಾರ ಮಹದಾಯಿ ಯೋಜನೆ ಡಿಪಿಆರ್ ಅನುಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರ ಇರುವುದರಿಂದ ದೇಶದಲ್ಲಿ ಪ್ರಗತಿ ಕಾಣುತ್ತಿದೆ, ದೇಶದ ಉದ್ದಅಗಲಕ್ಕೂ ಅಭಿವೃದ್ಧಿ ನಡೆಯುತ್ತಿದ್ದೆ, ಪ್ರಪಂಚವೇ ಭಾರತ ದೇಶದತ್ತ ನೋಡುತ್ತಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನಸಾಮಾನ್ಯರಿಗೆ ಅಭಿವೃದ್ಧಿ ನೀಡದೆ ತಮ್ಮ ಪ್ರತಿಷ್ಠೆ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು. ಈ ವೇಳೆ ಸಂಸದ ರಾಹುಲ್ ಗಾಂಧಿ, ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿ ಹೇಳಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ: ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗದ ಯೋಜನೆ ಪ್ರಗತಿಯಲ್ಲಿ ಇದೆ. ಕಿತ್ತೂರು 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಮಾಡುತ್ತೇವೆ. ಏತ ನೀರಾವರಿ ಯೋಜನೆ ಮಾಡುತ್ತೇವೆ, ಬೈಲಹೊಂಗಲದಲ್ಲಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ ಮಾಡಲಾಗುವುದು, ಭಾರತ ಇಂದು ಜಿ‌ 20 ರ ಅಧ್ಯಕ್ಷತೆ ವಹಿಸುತ್ತಿದೆ ಜಗತ್ತು ಇಂದು ಭಾರತದ ಪ್ರಧಾನಿ ಏನು ಹೇಳುತ್ತಾರೆ ಎಂದು ಗಮನಿಸುತ್ತಿದೆ. 11ನೇ ಸ್ಥಾನದಲ್ಲಿ ದೇಶದ ಆರ್ಥಿಕತೆ ಇತ್ತು, ಇಂದು 5ನೇ ಸ್ಥಾನದಲ್ಲಿ ಇದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಬೇಕು ಜಿಲ್ಲೆಯಲ್ಲಿ 16ಸ್ಥಾನ ಗೆಲ್ಲಿಸಬೇಕು ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ ಎಂದು ಜನರಲ್ಲಿ ವಿನಂತಿಸಿದರು.

ಗೃಹ ಸಚಿವ ಅಮಿತ್ ಶಾ ಅವರು ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅವತ್ತು ಕಣ್ಣಿಗೆ ಕಾಣುವ ಬ್ರೀಟಿಷ ಶತ್ರುಗಳು ಇದ್ದರು. ಆದರೆ. ಇವತ್ತು ಪಿಐಎಪ್ಐ ನಂತ ಹಲವು ಉಗ್ರ ಸಂಘಟನೆ ತಲೆ ಎತ್ತುವ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿದ್ದಾರೆ. ದೇಶದಲ್ಲಿ ಉಗ್ರ ಸಂಘಟನೆ ಹುಟ್ಟಡಗಿಸಿದ್ದಾರೆ. ದೇಶ ಸುಭದ್ರವಾಗಿ ಇದ್ದರೆ ಮಾತ್ರ ದೇಶ ಉಜ್ವಲತೆ ಕಾಣಲು ಸಾಧ್ಯ, ಸದೃಢವಾದ ವ್ಯವಸ್ಥೆ ಬರಬೇಕಾದರೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂದರು.

ಕಾಂಗ್ರೆಸ್ ನವರಿಗೆ ಈಗ ಜನರು ನೆನಪಿಗೆ ಬಂದಿದಾರೆ, ಪ್ರಜಾ ಧ್ವನಿ ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ ಇಷ್ಟು ದಿನಾ ನೀವು ಎಲ್ಲಿ ಹೋಗಿದ್ದಿರಿ?. ಎಸ್​ಸಿ, ಎಸ್​ಟಿ, ಜನಾಂಗದ ನಾವೇ ಉದ್ದಾರ ಮಾಡುವುದು ಎಂದು ಹೇಳುತಿದ್ದರಿ ಆದರೆ ಎಸ್​ಸಿ, ಎಸ್​ಟಿ ಜನಾಂಗದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ರೂಪಿಸಿ, ಅವರಿಗೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರಿಗೆ ಸಂಕಷ್ಟ ಎದುರಾಗಿತ್ತು, ಆದರೆ ನಮ್ಮ ಸರ್ಕಾರ ಬಂದಾಗ ರೈತರಿಗೆ ನೇರವಾಗಿ ಖಾತೆಗೆ ಹಣ ಸಂದಾಯ ಆಗುತ್ತೇ, ನೇರೆ ಸಂತ್ರಸ್ತರಿಗೆ ಮನೆ, ಬೆಳೆ ಕಳೆದುಕೊಂಡ ರೈತರಿಗೆ ಹಣವನ್ನು ಸಂದಾಯ ಮಾಡಲಾಗಿದೆ, ಹಾಗೂ ಸರಕಾರದಿಂದ ಹಲವು ಜನಪರ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಂತರ ಮಾತನಾಡಿ ಎಸ್​ಸಿ, ಎಸ್​ಟಿ, ಜನಾಂಗಕ್ಕೆ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟುವ ಯೋಜನೆ ಜೊತೆಗೆ 25 ಯುನಿಟ್ ವಿದ್ಯುತ್ ಉಚಿತ ನೀಡುತ್ತೇವೆ. ರೈತರಿಗೆ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರು ಕೀಳು ಮಟ್ಟದ ಮಾತುಗಳನ್ನು ಮಾತನಾಡಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಪ್ರಪಂಚಕ್ಕೆ ಮಾದರಿಯಾಗಿದೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿ, ಸರ್ದಾರ್ ವಲ್ಲಭಭಾಯ್ ಪಟೇಲರ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಉದ್ಯೋಗ, ಆರೋಗ್ಯ, ಕುಡಿಯುವ ನೀರಿನ ಜನಜೀವನ ಮಿಷನ್ ಅಂತಹಾ ಜನಪರ ಯೋಜನೆ ರೂಪಿಸಿದ್ದಾರೆ. ಪ್ರಪಂಚವೇ ತೀರುಗಿ ನೊಡುವಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಪ್ರಪಂಚಕ್ಕೆ ಮಾದರಿಯಾಗಿದೆ. ಕೊಟ್ಟ ಕುದುರೆ ಎರದವನು ಸೂರನ್ನು ಅಲ್ಲಾ. ದಿರನು ಅಲ್ಲವೇಂದು ಕಾಂಗ್ರೆಸ್ ನಾಯಕರು ತಮ್ಮ ಕಚ್ಚಾಟದಲ್ಲಿ ಜನ ಸೇವೆ ನಿಲ್ಲಿಸಿದರು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.

ಈ ಭಾಗದಲ್ಲಿ ಒಂದೇ ಭಾರತ್​ ರೈಲು ಯೋಜನೆ ಬರುತ್ತೆ, ಹಾಗೂ ಕಳಾಸ ಬಂಡೂರಿ ಯೋಜನೆಗೆ ಡಿಪಿಆರ್ ಅನುಮೋದನೆ ನೀಡಲಾಗಿದೆ ಹಾಗೂ ಹಲವು ಜನಪರ ಯೋಜನೆ ರೂಪಿಸಲಾಗುವುದು, ಬೆಳಗಾವಿ ಎಲ್ಲಾ ವಿಧಾನಸಭಾ ಕ್ಷೆತ್ರಗಳನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಕಾಂಗ್ರೆಸ್ ನಾಯಕರು ಎರಡನೂರು ಯ್ಯೂನೀಟ್ ವಿದ್ಯುತ್ ಉಚಿತ ನೀಡುತ್ತೆವೆ ಎಂದು ಹೇಳುತ್ತಾರೆ ಆದರೆ ಹಿಂದೆ ರೈತರಿಗೆ ಸರಿಯಾಗಿ ಸಮಪರ್ಕವಾಗಿ ನೀವು ವಿದ್ಯುತ್ ನೀಡಲಿಲ್ಲ, ಹಿಂದೆ ಐದು ವರ್ಷ ನಿಮ್ಮದೆ ಸರಕಾರ ಇದ್ದಾಗ ಯಾಕೆ ನೀವು ಉಚಿತ ವಿದ್ಯುತ್ ನೀಡಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಪಂಚರತ್ನ ಯಾತ್ರೆ ಅಲ್ಲ ಅದು ನವಗ್ರಹ ಯಾತ್ರೆ:ರಾಜ್ಯದಲ್ಲಿ ಪ್ರಜಾ ಧ್ವನಿ, ಹಾಗೂ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ, ಪಂಚರತ್ನ ಯಾತ್ರೆ ಅಲ್ಲ ಅದು ನವಗ್ರಹ ಯಾತ್ರೆ ದೇವೇಗೌಡ ಕುಟುಂಬ ಸದಸ್ಯರು, ಮಕ್ಕಳು, ಸೋಸೆಯರೂ ಎಲ್ಲರೂ ಕೂಡಿ ಸಮಾವೇಶ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷ 60ವರ್ಷ ಅಧಿಕಾರ ನಡೆಸಿದರು.

ಆದರೆ, ದೇಶದಲ್ಲಿ ಜನ ಸಾಮಾನ್ಯರಿಗೆ ಯಾವುದೇ ಸೇವೆಗಳನ್ನು ನೀಡಲಿಲ್ಲ, ನಂತರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಬಂದ ನಂತರ ದೇಶದಲ್ಲಿ ಸುಧಾರಣೆ ಕಂಡಿತು. ಜಮ್ಮು ಕಾಶ್ಮೀರದಲ್ಲಿ 370ಕಲಂ ರದ್ದು ಪಡಸಿ ದೇಶದಲ್ಲಿ ಇತಿಹಾಸ ನಿರ್ಮಾಣ ಮಾಡಿರುವುದು ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ರೈತರಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣವಾಗಿದೆ:ಸಹಕಾರಿ ಕ್ಷೇತ್ರದಲ್ಲಿ ಹಲವು ಬದಲಾವಣೆ ತಂದಿದ್ದಾರೆ, ಸಹಕಾರಿ ಕ್ಷೇತ್ರದಲ್ಲಿ ಹಲವು ಅವ್ಯವಹಾರ ನೊಡಿ, ಇದರಿಂದ ಅಮಿತ್ ಶಾ ಸಹಕಾರಿ ಕ್ಷೇತ್ರದಲ್ಲಿ ಹಲವು ಬದಲಾವಣೆ ತಂದಿದ್ದಾರೆ ಇದರಿಂದಾಗಿ ರೈತರಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜನರಲ್ಲಿ ವಿನಂತಿಸಿದರು.

ಇದನ್ನೂ ಓದಿ:ಬೆಳಗಾವಿ ಬಿಜೆಪಿ ನಾಯಕರ ಕೋಲ್ಡ್ ವಾರ್ ಶಮನ ಮಾಡುತ್ತಾರಾ ಅಮಿತ್ ಶಾ?

Last Updated :Jan 28, 2023, 11:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.