ETV Bharat / state

ಬೆಳಗಾವಿ ಬಿಜೆಪಿ ನಾಯಕರ ಕೋಲ್ಡ್ ವಾರ್ ಶಮನ ಮಾಡುತ್ತಾರಾ ಅಮಿತ್ ಶಾ?

author img

By

Published : Jan 28, 2023, 12:27 PM IST

ಕುತೂಹಲ ಕೆರಳಿಸಿದ ಬೆಳಗಾವಿಯ ಬಿಜೆಪಿ ನಾಯಕರ ಸಭೆ-ವಿಧಾನಸಭೆ ಚುನಾವಣೆ ಹಿನ್ನೆಲೆ ಗರಿಗೆದರಿದ ರಾಜಕೀಯ ಚಟುವಟಿಕೆಗಳು- ರಾಜಕೀಯ ರಣತಂತ್ರ ಹೆಣೆದಿರುವ ಅಮಿತ್​ ಶಾ

Belagavi BJP leaders  Amit Shah
ಅಮಿತ್​ ಶಾ ಅವರನ್ನು ಸ್ವಾಗತಿಸಿದ ಸಿಎಂ ಬಸವರಾಜ ಬಿಮ್ಮಾಯಿ

ಚಿಕ್ಕೋಡಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರವೇ. ಬಿಜೆಪಿ ಪಕ್ಷವು ಇದಕ್ಕೆ ಒಂದು ಹೆಜ್ಜೆ ಮುಂದೆ ಎಂಬಂತೆ ರಾಷ್ಟ್ರೀಯ ನಾಯಕರನ್ನು ಕರೆತಂದು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇವತ್ತು ಬೆಳಗಾವಿಯಲ್ಲಿ ಜರುಗುವ ಜನಸಂಕಲ್ಪ ಯಾತ್ರೆಗಿಂತಲೂ ಕುಂದಾನಗರಿ ಬಿಜೆಪಿ ನಾಯಕರ ಜೊತೆಗೆ ಅಮಿತ್ ಶಾ ಹಂತ ಹಂತವಾಗಿ ನಡೆಯುತ್ತಿರುವ ಸಭೆಗಳು ಭಾರಿ ಕುತೂಹಲ ಕೆರಳಿಸಿವೆ.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲಿ ಆಂತರಿಕ ಕಲಹದಿಂದಲೇ ಪಕ್ಷ ಹಲವು ಪರಿಣಾಮಗಳು ಉಂಟಾಗಿವೆ. ಕಳೆದ ವಿಧಾನ ಪರಿಷತ್ ಹಾಗೂ ವಾಯುವ್ಯ ಮತಕ್ಷೇತ್ರದ ಶಿಕ್ಷಕರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ, ಸದ್ಯ ಬಿಜೆಪಿಯ ಬುಡವನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಅಲುಗಾಡಿಸಿದೆ. ಇದರಿಂದ ಕೇಂದ್ರ ವರಿಷ್ಠರ ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯ ಬಿಜೆಪಿ ನಾಯಕರ ಕಲಹ: ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಸ್ಥಳೀಯ ನಾಯಕರ ವೈಮನಸ್ಸೇ ಪ್ರಮುಖ ಕಾರಣವಾಗಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ್ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈ ಪ್ರಮುಖ ಎರಡು ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿಗೆ ಭಾರಿ ಮುಖಭಂಗ ಎದುರಾಗಿತ್ತು. ಈ ಎರಡು ಸ್ಥಾನಗಳು ಕೈತಪ್ಪಲು ಸ್ಥಳೀಯ ಬಿಜೆಪಿ ನಾಯಕರ ಕಲಹ ಎಂಬುದು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಸದ್ಯ ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ವರಿಷ್ಠರು ಶತಾಯಗತಾಯವಾಗಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಳ ಮಟ್ಟದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ.

ಅಮಿತ್​ ಶಾ ಬಿಜೆಪಿ ನಾಯಕರ ಜೊತೆ ಸಭೆ: ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಪಕ್ಷದಿಂದ ಜನ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ. ಜನ ಸಂಕಲ್ಪ ಯಾತ್ರೆಗಿಂತಲೂ ಕುಂದಾನಗರಿ ನಾಯಕರ ಜೊತೆ ನಡೆಯಲಿರುವ ಒನ್ ಟು ಒನ್ ಸಭೆ ಕುತೂಹಲ ತೀವ್ರ ಮೂಡಿಸಿದೆ. ಬೆಳಗಾವಿ ನಾಯಕರು ಆಂತರಿಕ ಕಲಹ ಶಮನ ಮಾಡುತ್ತಾರಾ ಶಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಬೆಳಗಾವಿಯಲ್ಲಿ ಕುಟುಂಬ ರಾಜಕಾರಣ ಪ್ರತಿಷ್ಠಿತ ಕದನವಾಗಿದೆ. ಸದ್ಯ ಆಪರೇಷನ್ ಕಮಲದಿಂದ ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರುತ್ತಿದ್ದಂತೆ. ಬಿಜೆಪಿಯ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನದಿಂದ ಬೆಳಗಾವಿಯ ಕೆಲವು ಚುನಾವಣೆಯಲ್ಲಿ ಮುಗ್ಗರಿಸಿತ್ತು. ಸದ್ಯ ಬೆಳಗಾವಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ವರಿಷ್ಠ ಅಮಿತ್ ಶಾ ಪ್ರತಿಯೊಬ್ಬ ನಾಯಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಟಿಕೆಟ್ ಗೊಂದಲ ಬಗೆಹರಿಯುತ್ತಾ?: ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ತಿಂಗಳು ಇರುವಾಗಲೇ ಬಿಜೆಪಿಯಲ್ಲಿ ಬಿ ಫಾರಂ ಯಾರಿಗೆ ದೊರೆಯುತ್ತದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಹುಕ್ಕೇರಿಯಲ್ಲಿ ತೆರವಾದ ದಿವಂಗತ ಉಮೇಶ್ ಕತ್ತಿ ಅವರ ಸ್ಥಾನ. ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿಯ ಯಾರು? ಹುಕ್ಕೇರಿಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ರಾಜೇಶ್ ನೇರ್ಲಿ ಹಾಗೂ ಅಥಣಿ ಲಕ್ಷ್ಮಣ್ ಸವದಿಗೆ ಮತ್ತೆ ಟಿಕೆಟ್ ನೀಡುವಂತೆ ಕಾರ್ಯಕರ್ತರ ಒತ್ತಾಯಿಸುತ್ತಿದ್ದಾರೆ.

ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಸಂಜಯ್ ಪಾಟೀಲ್ ಅಥವಾ ರಮೇಶ ಜಾರಕಿಹೊಳಿ ಆಪ್ತ ನಾಗೇಶ್ ಬಿ ಫಾರ್ಮ್ ಎಂಬ ಗೊಂದಲ, ಎಲ್ಲಾ ಗೊಂದಲಗಳಿಗೆ ಇವತ್ತು ಅಮಿತ್ ಶಾ ತೆರೆ ಎಳೆಯುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಸಚಿವ ಸಂಪುಟ ವಿಸ್ತರಣೆ ಪುನರಚನೆ ಚರ್ಚೆ ಸಾಧ್ಯತೆ: ಕಳೆದ ಒಂದು ವರ್ಷದಿಂದ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸ್ಥಾನ ಕಳೆದುಕೊಂಡರೆ, ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪನವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಇಬ್ಬರು ಹಿರಿಯ ನಾಯಕರಿಗೆ ನಿರ್ದೋಸಿ ಎಂಬ ಸಾಬೀತಾದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ವರಿಷ್ಠರು ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಮುಂದಾಗುತ್ತಿಲ್ಲ. ಇದರಿಂದ ಕೆಲವು ಬಿಜೆಪಿಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ಕೊಡಲಾಗುವುದು ಎಂದು ಸಿಎಂ ಭರವಸೆ ಕೂಡ ನೀಡಿದ್ದರು.

ಅಧಿವೇಶನ ಮುಗಿದು ಎರಡು ತಿಂಗಳು ಕಳೆಯುತ್ತಾ ಬಂದರೂ ಇನ್ನು ಸಚಿವ ಸಂಪುಟ ವಿಸ್ತರಣೆಯಾಗದೇ ಇರುವುದರಿಂದ ರಮೇಶ ಜಾರಕಿಹೊಳಿ ಹಾಗೂ ಈಶ್ವರಪ್ಪ ಅಸಮಾಧಾನ ಹೊಂದಿದ್ದಾರೆ. ಸಚಿವ ಸಂಪುಟ 6 ಸ್ಥಾನಗಳಿಗೆ ತುಂಬಿಕೊಳ್ಳಲು ಕೇಂದ್ರ ಗೃಹ ಸಚಿವರ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡುತ್ತಾರಾ ಎನ್ನುವ ಬಗ್ಗೆ ಬೆಳಗಾವಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ತಡರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮನ.. ಸಿಎಂ, ಬಿಜೆಪಿ ನಾಯಕರಿಂದ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.