ETV Bharat / state

2024ಕ್ಕೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ : ಸಚಿವ ಸಂತೋಷ್​ ಲಾಡ್ ಭವಿಷ್ಯ

author img

By ETV Bharat Karnataka Team

Published : Oct 4, 2023, 4:49 PM IST

2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಚಿವ ಸಂತೋಷ್​ ಲಾಡ್​ ಹೇಳಿದ್ದಾರೆ.

bjp-will-lose-power-at-the-center-by-2024-minister-santhosh-lad
2024ಕ್ಕೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ : ಸಚಿವ ಸಂತೋಷ ಲಾಡ್

ಸಚಿವ ಸಂತೋಷ್​ ಲಾಡ್ ಹೇಳಿಕೆ

ಬೆಳಗಾವಿ : ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ, ಜೆಡಿಎಸ್ ನಾಯಕರು ಟೀಕಿಸುತ್ತಿದ್ದಾರೆ. ಆದರೆ, ಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್ ಭವಿಷ್ಯ ನುಡಿದಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಬದ್ಧವಾಗಿ ನಮ್ಮ ಸರ್ಕಾರ ರಚನೆ ಆಗಿದೆ. ಸರ್ಕಾರ ಹೇಗೆ ಪತನ ಆಗಲಿದೆ ಎಂಬ ಬಗ್ಗೆ ಅವರನ್ನೇ ನೀವು ಕೇಳಬೇಕು. ಟಾರ್ಗೆಟ್ ಮಾಡೋದರಲ್ಲಿ ಬಿಜೆಪಿಯವರು ನಿಸ್ಸೀಮರು. ದೇಶದಲ್ಲಿ 10 ವರ್ಷದಲ್ಲಿ ಬಿಜೆಪಿಯವರು 11 ಸರ್ಕಾರಗಳನ್ನು ಬೀಳಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದಾರೆ‌. ಆದರೆ, ಈ ಬಾರಿ ಹಾಗಾಗುವುದಿಲ್ಲ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದಿಲ್ಲ ಎಂದರು.

ಕಳೆದ 10 ವರ್ಷಗಳಲ್ಲಿ ಮೋದಿ, ಬಿಜೆಪಿ ನಾಯಕರಿಗೆ ಲಾಭವಾಗಿದೆಯೇ ವಿನಃ ಯಾವೊಬ್ಬ ರೈತ, ಜನಸಾಮಾನ್ಯರಿಗೆ ಲಾಭವಾಗಿಲ್ಲ. ನೋಟು ಅಮಾನ್ಯದಿಂದ ಲಕ್ಷ ಲಕ್ಷ ಸಾಲ ತೆಗೆದುಕೊಂಡವರಿಗೆ ಲಾಭವಾಗಿದೆ. ಸಣ್ಣ ಕೈಗಾರಿಕೆಯವರಿಗೆ ಲಾಭವಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ಜಿಎಸ್ ಟಿ ಜಾರಿಗೆ ತಂದು ಸಾಮಾನ್ಯ ಜನರ ಮಕ್ಕಳು ಶಿಕ್ಷಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಿಸಿದ್ದಾರೆ. ಬಿಜೆಪಿಯವರಿಗೆ ಒನ್ ನೇಷನ್-ಒನ್ ಇಂಡಿಯಾ, ಇಂಡಿಯಾ ಬದಲು ಭಾರತ ಹೆಸರು ನಾಮಕರಣ ಬಿಟ್ಟರೆ, ಅವರ ಬಳಿ ಬೇರೆ ಯಾವುದೇ ವಿಷಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಲೋಕಸಭಾ ಚುನಾವಣೆಗೆ ಹಾಲಿ ಸಚಿವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಸ್ಥಳೀಯ ನಾಯಕರು ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಂತೋಷ ಲಾಡ್ ಇದೇ ವೇಳೆ ತಿಳಿಸಿದರು.

ಲಿಂಗಾಯತ ಅಧಿಕಾರಿಗಳನ್ನು ಸರ್ಕಾರ ಕಡೆಗಣಿಸಿದೆ ಎಂಬ ಶಾಮನೂರು ಶಿವಶಂಕರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಹೇಳಿಕೆ. ಒಂದು ಸಮುದಾಯಕ್ಕೆ ಆದ್ಯತೆ ನೀಡುವ ಸಿದ್ಧಾಂತ ನಮ್ಮ ಪಕ್ಷದ್ದಲ್ಲ. ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದರು.

ಡಿಸಿಎಂ ಸ್ಥಾನ ವಿಚಾರವಾಗಿ, ಡಿಸಿಎಂ ಸ್ಥಾನ ಯಾರಿಗೆ ಕೊಡಬೇಕು. ಯಾರಿಗೆ ಕೊಡಬಾರದು ಎಂಬುದು ಹೈಕಮಾಂಡ್​​ಗೆ ಬಿಟ್ಟ ವಿಷಯ. ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡಿದರೆ ವೈಯಕ್ತಿಕವಾಗಿ ನನಗೆ ಸಂತೋಷವಾಗುತ್ತದೆ. ಅಂತಿಮವಾಗಿ ಎಲ್ಲಾ ವಿಷಯವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. ಈ ವೇಳೆ ಶಾಸಕರಾದ ಮಹಾಂತೇಶ ಕೌಜಲಗಿ, ಆಸೀಫ್ ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್​ ನಾವಲಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬರ ಪರಿಸ್ಥಿತಿ ಅವಲೋಕಿಸಲು ನಾಳೆ ರಾಜ್ಯಕ್ಕೆ ಕೇಂದ್ರದ ಮೂರು ತಂಡಗಳು ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.