ETV Bharat / state

ಮಾನಸಿಕ ಖಿನ್ನತೆ.. ಬೆಂಗಳೂರಿನಲ್ಲಿ ಮಹಿಳೆ ಆತ್ಮಹತ್ಯೆ

author img

By

Published : Dec 25, 2022, 6:28 PM IST

Updated : Dec 25, 2022, 7:21 PM IST

women-commits-suicide-in-bengaluru
ಬೆಂಗಳೂರಿನಲ್ಲಿ ಮಹಿಳೆ ಆತ್ಮಹತ್ಯೆ

ಕಾಡಿದ ಮಾನಸಿಕ ಖಿನ್ನತೆ- ಬೆಂಗಳೂರಿನಲ್ಲಿ ಮಹಿಳೆ ಆತ್ಮಹತ್ಯೆ- ಪ್ರಕರಣ ದಾಖಲು

ಬೆಂಗಳೂರು : ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ವ ಹೈಲ್ಯಾಂಡ್ ಅಪಾರ್ಟ್ ಮೆಂಟ್ ನಲ್ಲಿ‌‌ ನಡೆದಿದೆ. ಚರಿಸ್ಮಾ ಸಿಂಗ್(40) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ಕಳೆದ 15 ವರ್ಷಗಳಿಂದ‌ ಕುಟುಂಬದ ಜೊತೆ ಕೆನಡಾದಲ್ಲಿ ವಾಸವಾಗಿದ್ದರು. ಅವರು ಕಳೆದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಚಿಕಿತ್ಸೆಗಾಗಿ ಚರಿಷ್ಮಾ ಮತ್ತು ಗಂಡ ಕರಣ್​ ಕೆಲ ದಿನಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದರು. ಮಾನಸಿಕ ಖಿನ್ನತೆಯ ಚಿಕಿತ್ಸೆಗೆಂದು ಬಂದಿದ್ದ ದಂಪತಿ ಬೆಂಗಳೂರಿನ ಪೂರ್ವ ಖಾಸಗಿ​​ ಅಪಾರ್ಟ್​ಮೆಂಟ್​ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮಧ್ಯಾಹ್ನ ಅಪಾರ್ಟ್ ಮೆಂಟ್ ಆವರಣದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚರಿಷ್ಮಾ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ತಲಘಟ್ಟಪುರ ಪೊಲೀಸರು ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ : ತೆಲಂಗಾಣ: ರೈಲಿಗೆ ಸಿಲುಕಿ ಪ್ರೇಮಿಗಳ ಆತ್ಮಹತ್ಯೆ

Last Updated :Dec 25, 2022, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.