ETV Bharat / bharat

ತೆಲಂಗಾಣ: ರೈಲಿಗೆ ಸಿಲುಕಿ ಪ್ರೇಮಿಗಳ ಆತ್ಮಹತ್ಯೆ

author img

By

Published : Dec 25, 2022, 2:12 PM IST

ಆಂಧ್ರಪ್ರದೇಶದಿಂದ ತೆಲಂಗಾಣಕ್ಕೆ ಕೃಷಿ ಕೆಲಸಕ್ಕೆಂದು ಬಂದಿದ್ದ ಕುಟುಂಬಗಳ ಪ್ರೇಮಿಗಳಿಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Lovers who committed suicide
ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ನಾರಾಯಣಪೇಟೆ(ತೆಲಂಗಾಣ): ಕೃಷ್ಣಾ ಮಂಡಲದ ಚೇಗುಂಟಾ ರೈಲು ನಿಲ್ದಾಣದ ಬಳಿ ಪ್ರೇಮಿಗಳಿಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತರನ್ನು ಮಣಿಕುಮಾರ್ ಮತ್ತು ಅನಿತಾ ಎಂದು ಗುರುತಿಸಲಾಗಿದೆ.

ಇಬ್ಬರೂ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಎಮ್ಮಿಗನೂರು ಮಂಡಲದ ಕಂದನೂರು ನಿವಾಸಿಗಳು. ಕೃಷಿ ಕೆಲಸದ ನಿಮಿತ್ತ ಇಬ್ಬರ ಕುಟುಂಬಗಳು ಚೇಗುಂಟಾ ಗ್ರಾಮಕ್ಕೆ ಬಂದಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: RIP ME ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಕಿ ರೈಲಿಗೆ ತಲೆಕೊಟ್ಟ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.