ETV Bharat / state

ಪರಿಷತ್ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಂ ದಾಸ್ ಪ್ರಮಾಣ ವಚನ ಸ್ವೀಕಾರ

author img

By ETV Bharat Karnataka Team

Published : Aug 31, 2023, 1:41 PM IST

Legislative Council members: ಕರ್ನಾಟಕ ವಿಧಾನ ಪರಿಷತ್​ನ ನೂತನ ಸದಸ್ಯರಾಗಿ ಇಂದು ಮೂವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

Umashree, Sitaram, Sudham Das sworn as Legislative Council members
ವಿಧಾನ ಪರಿಷತ್​ನ ನೂತನ ಸದಸ್ಯರ ಪ್ರಮಾಣ ವಚನ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್​ನ ನೂತನ ಸದಸ್ಯರಾಗಿ ಉಮಾಶ್ರೀ, ಎಮ್. ಆರ್ ಸೀತಾರಾಮ್ ಮತ್ತು ಹೆಚ್.ಪಿ ಸುಧಾಂ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು.

ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ: ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಕೆ ಪಾಟೀಲ್, ಬೋಸರಾಜು ಸೇರಿದಂತೆ ಹಲವು ಶಾಸಕರುಗಳು, ನೂತನ ಶಾಸಕರುಗಳ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೂವರು ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.

Umashree, Sitaram, Sudham Das sworn as Legislative Council members
ಕರ್ನಾಟಕ ವಿಧಾನ ಪರಿಷತ್​ನ ನೂತನ ಸದಸ್ಯರಾಗಿ ಸೀತಾರಾಂ ಪ್ರಮಾಣ ವಚನ ಸ್ವೀಕಾರ

ನೂತನವಾಗಿ ಪರಿಷತ್ ಸದಸ್ಯರಾಗಿ ಆಯ್ಕೆ ಆದ ಎಂ.ಆರ್ ಸೀತಾರಾಮ್​​ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ, ಉಮಾಶ್ರೀ ಸಂವಿಧಾನ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್.ಪಿ. ಸುಧಾಂ ದಾಸ್ ಬುದ್ಧ ಬಸವ, ಅಂಬೇಡ್ಕರ್ ಹಾಗೂ ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Umashree, Sitaram, Sudham Das sworn as Legislative Council members
ಕರ್ನಾಟಕ ವಿಧಾನ ಪರಿಷತ್​ನ ನೂತನ ಸದಸ್ಯರಾಗಿ ಉಮಾಶ್ರೀ ಪ್ರಮಾಣ ವಚನ ಸ್ವೀಕಾರ

ಕೆಲ ಸಚಿವರ ತೀವ್ರ ಆಕ್ಷೇಪ! ಸುಧಾಂ ದಾಸ್ ನಾಮನಿರ್ದೇಶನಕ್ಕೆ ಕಾಂಗ್ರೆಸ್​​ನ ಎಸ್ ಸಿ ಸಮುದಾಯದ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದರು‌. ಕೊನೆಗೆ ಹೈಕಮಾಂಡ್ ಈ ಮೂವರ ಹೆಸರನ್ನು ನಾಮನಿರ್ದೇಶಿಸಿ ಶಿಫಾರಸು ಮಾಡಿತ್ತು. ಮೊದಲಿಗೆ ಎಂ.ಆರ್. ಸೀತಾರಾಮ್, ಸುಧಾಂ ದಾಸ್ ಹಾಗೂ ಮನ್ಸೂರ್ ಖಾನ್ ಹೆಸರನ್ನು ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು.‌

ಇದನ್ನೂ ಓದಿ: ರಕ್ಷಾ ಬಂಧನದಂದು ನ್ಯಾಯಮೂರ್ತಿಗಳಾಗಿ ಆಯ್ಕೆ ಆದ ಅಕ್ಕ - ತಮ್ಮ: ಹಬ್ಬದ ಸಂಭ್ರಮ ಹೆಚ್ಚಿಸಿದ ನ್ಯಾಯಾಧೀಶರ ಮಕ್ಕಳು!

ಇತ್ತ ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮ‌ನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ಎಂಬವರು ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು. ಬಳಿಕ ಹೈ ಕಮಾಂಡ್ ಉಮಾಶ್ರೀ, ಎಮ್.ಆರ್. ಸೀತಾರಾಮ್ ಮತ್ತು ಹೆಚ್.ಪಿ. ಸುಧಾಂ ದಾಸ್ ಅವರಿಗೆ ಮಣೆ ಹಾಕಿತ್ತು.

Umashree, Sitaram, Sudham Das sworn as Legislative Council members
ಕರ್ನಾಟಕ ವಿಧಾನ ಪರಿಷತ್​ನ ನೂತನ ಸದಸ್ಯರಾಗಿ ಸುಧಾಂ ದಾಸ್ ಪ್ರಮಾಣ ವಚನ ಸ್ವೀಕಾರ

ಇದನ್ನೂ ಓದಿ: ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ಬಿಜೆಪಿ ಸಭೆ: ಪಕ್ಷದ ಕಚೇರಿಯಿಂದ ದೂರ ಉಳಿದಿದ್ದ ನಾಯಕರು ಹಾಜರು!

ಮನ್ಸೂರ್ ಖಾನ್ ಅಲ್ಲದೇ ಸುಧಾಂ ದಾಸ್ ಹೆಸರು ಶಿಫಾರಸ್ಸಿಗೂ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿತ್ತು. ಇವರು ನಿವೃತ್ತ ಇಡಿ ಅಧಿಕಾರಿ. ಹಲವರ ಆಕ್ಷೇಪದ ಹೊರತಾಗಿಯೂ ಹೈಕಮಾಂಡ್​​ ಸುಧಾಂ ದಾಸ್ ಅವರನ್ನು ಫೈನಲ್​ ಮಾಡಿತ್ತು. ಅಲ್ಲದೇ ಡಿಸಿಎಂ ಡಿ ಕೆ ಶಿವಕುಮಾರ್​ ಅವರೂ ಸಹ ಸುಧಾಂ ದಾಸ್ ಪರ ಬ್ಯಾಟಿಂಗ್​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.