ETV Bharat / state

ಓದುವ ವಯಸ್ಸಿನಲ್ಲಿ ಪ್ರೀತಿ ಬೇಡ ಅಂದ ಪೋಷಕರು.. ನೆಲಮಂಗಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

author img

By

Published : Aug 31, 2021, 4:23 PM IST

ಕಲಿಯುವ ವಯಸ್ಸಿನಲ್ಲಿ ಈ ಪ್ರೀತಿ ಪ್ರೇಮವೆಲ್ಲ ಯಾಕೆ, ಬಿಟ್ಟು ಬಿಡು ಎಂದು ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೆಸರಘಟ್ಟದಲ್ಲಿ ನಡೆದಿದೆ. ಮೃತ ಯುವತಿ ಕೇರಳ ಮೂಲದವಳು ಎಂದು ತಿಳಿದು ಬಂದಿದೆ.

student-committed-suicide-in-hesaraghatta-pg
ನೇಣಿಗೆ ಶರಣಾದ ಯುವತಿ

ನೆಲಮಂಗಲ: ಹುಡುಗನೊಂದಿಗೆ ಓಡಾಡುತ್ತಿದ್ದ ಮಗಳಿಗೆ ಪೋಷಕರು ಓದುವ ವಯಸ್ಸಿನಲ್ಲಿ ಪ್ರೀತಿ ಮಾಡಬೇಡ ಎಂದು ಬುದ್ಧಿಮಾತನ್ನ ಹೇಳಿದಕ್ಕೆ ಮನನೊಂದ ಯುವತಿ ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ಕೇರಳ ಮೂಲದ 19 ವರ್ಷದ ರಶ್ಮಿ(ಹೆಸರು ಬದಲಾಯಿಸಲಾಗಿದೆ) ಮೃತ ಯುವತಿ. ರಶ್ಮಿ ಹೆಸರಘಟ್ಟದ ಆಚಾರ್ಯ ಕಾಲೇಜ್​​​ನಲ್ಲಿ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತ ಪಿಜಿಯಲ್ಲಿ ವಾಸವಾಗಿದ್ದಳು. ಈಕೆ ಯುವಕನೋರ್ವನ ಜೊತೆ ಸುತ್ತಾಡುತ್ತಿರುವ ವಿಷಯ ಆಕೆಯ ಪೋಷಕರಿಗೆ ತಿಳಿದಿತ್ತು. ಅದಕ್ಕಾಗಿ ಮಗಳಿಗೆ ಪ್ರೀತಿಯ ಕೂಪದಲ್ಲಿ ಬೀಳದಂತೆ ಬುದ್ಧಿ ಮಾತು ಹೇಳಿದ್ದರು ಎನ್ನಲಾಗ್ತಿದೆ.

ಇದರಿಂದ ಮನನೊಂದ ಯುವತಿ ಪಿಜಿ ರೂಮ್​ನ ಫ್ಯಾನ್​ಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.