ETV Bharat / state

ಮತಗಟ್ಟೆಯಲ್ಲಿ ಪವರ್ ಕಟ್.. ಬೆಸ್ಕಾಂ ಸ್ವಲ್ಪ ಎಚ್ಚರ ವಹಿಸಬೇಕಿತ್ತು: ಕೃಷ್ಣಮೂರ್ತಿ

author img

By

Published : Nov 3, 2020, 10:37 AM IST

JDS candidate Krishnamurthy
ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ

ಕೊರೊನಾ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಮತದಾನ ಮಾಡಿ. ಎಲ್ಲರೂ ಕೂಡಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತ ಚಲಾವಣೆ ಮಾಡಿ ಎಂದು ಜೆಡಿಎಸ್​ ಅಭ್ಯರ್ಥಿ ಕೃಷ್ಣ ಮೂರ್ತಿ ತಿಳಿಸಿದ್ದಾರೆ.

ಬೆಂಗಳೂರು: ಜನ ಹೊಸದನ್ನು ಬಯಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡುವಂತೆ ಕೇಳಿದ್ದೇನೆ ಎಂದು ಜೆಡಿಎಸ್​ ಅಭ್ಯರ್ಥಿ ಕೃಷ್ಣ ಮೂರ್ತಿ ಮತದಾನದದ ನಂತರ ಪ್ರತಿಕ್ರಿಯಿಸಿದರು.

ಮತದಾನದ ನಂತರ ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಪ್ರತಿಕ್ರಿಯೆ

ಇನ್ನು ಇದಕ್ಕೂ ಮೊದಲು ಮತಗಟ್ಟೆಯಲ್ಲಿ ಪವರ್ ಕಟ್ ಆದ ಬಗ್ಗೆ ಮಾತಾನಾಡಿದ ಅವರು, ಬೆಸ್ಕಾಂನವರು ಸ್ವಲ್ಪ ಎಚ್ಚರ ವಹಿಸಬೇಕಿತ್ತು. ನಿಮ್ಮ ಕ್ಯಾಮೆರಾ ಲೈಟ್​ಗಳು ಇರಲಿಲ್ಲ ಅಂದಿದ್ರೆ ಬಹಳ ಕಷ್ಟ ಆಗ್ತಿತ್ತು. ಕೊರೊನಾ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಮತದಾನ ಮಾಡಿ. ಎಲ್ಲರೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತ ಚಲಾವಣೆ ಮಾಡಿ ಎಂದು ಅವರು ತಿಳಿಸಿದರು.

ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ: ಜ್ಞಾನಜ್ಯೋತಿ ನಗರದ ಹೆಚ್.ಎಂ.ಆರ್ ಕಾನ್ವೆಂಟ್ ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮತದಾನ ಆರಂಭವಾದ ಬೆಳಗ್ಗೆ 7ರಿಂದ 5 ಬೂತ್​ಗಳಲ್ಲಿಯೂ ನಿರಂತರ ಮತದಾನವಾಗುತ್ತಿದೆ. ಕೊರೊನಾ ನಡುವೆಯೂ ಮತದಾನಕ್ಕೆ ಜ್ಞಾನಜ್ಯೋತಿ ನಗರದ ಮಂದಿ ಆಸಕ್ತಿ ತೋರಿದ್ದಾರೆ. ಯುವಕರು, ವಯೋವೃದ್ಧರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.