ETV Bharat / state

ಪಾದರಾಯನಪುರ ಗಲಭೆಯ ಕಿಂಗ್​ಪಿನ್ ಪುಂಡಾಟ.. ನಗರದಲ್ಲಿ ಕಿರಿಕ್ ಮಾಡ್ತಿದ್ದವ ಈಗ ಆಸ್ಪತ್ರೆಯಲ್ಲಿ

author img

By

Published : Jan 4, 2022, 7:02 PM IST

ನಗರದ ಮೈಸೂರು ರಸ್ತೆಯ ಪಾದರಾಯನಪುರದ ಪುಂಡನಾದ ಈತನ ಶೋಕಿ ಒಂದಲ್ಲ ಎರಡಲ್ಲ. ಈತನ ಶೋಕಿಯ ಕೃತ್ಯಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಸೋಮವಾರ ಸಿದ್ದಾಪುರ ಪೊಲೀಸರಿಗೆ ಡ್ರ್ಯಾಗರ್ ಬೀಸಲು ಮುಂದಾಗಿ ಗುಂಡೇಟು ತಿಂದು ಬೆಡ್ ಮೇಲೆ ಬಿದ್ದ ಪರ್ವೇಜ್ ಅಸಲಿಗೆ ಈತ ಪೊಲೀಸರಿಗೇ ತಲೆನೋವಾಗಿದ್ದಾನೆ‌.

Rowdisheater Parvez Pasha
ರೌಡಿಶೀಟರ್ ಪರ್ವೇಜ್ ಪಾಷ

ಬೆಂಗಳೂರು: ಸುಲಿಗೆ ಪ್ರಕರಣದಲ್ಲಿ ಪೊಲೀಸರಿಂದ ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿರುವ ರೌಡಿಶೀಟರ್ ಪರ್ವೇಜ್ ಪಾಷ ಕಳೆದ ಎರಡು ವರ್ಷಗಳ ಹಿಂದೆ ಚಾಮರಾಜಪೇಟೆಯ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಈತನೇ ಕಿಂಗ್ ಪಿನ್ ಆಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

2020ರ ಏಪ್ರಿಲ್​​ನಲ್ಲಿ ಪಾದರಾಯನಪುರದಲ್ಲಿ ನಡೆದಿದ್ದ ಗಲಭೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಘಟನೆಯಲ್ಲಿ ಭಾಗಿಯಾಗಿ ನಾಲ್ಕು ತಿಂಗಳ ಬಳಿಕ ಜೆ.ಜೆ ನಗರ ಪೊಲೀಸರು ಆತನನ್ನು ಬಂಧಿಸಿದ್ದರು. ಜೈಲಿಗೆ ಹೋಗಿ ಜಾಮೀನಿನ ಮೂಲಕ ಹೊರ ಬಂದಿದ್ದ ಆರೋಪಿಯು ಇದೀಗ ಮತ್ತೆ ಬಾಲ ಬಿಚ್ಚಿದ್ದಾನೆ‌.

Rowdysheeter Parvez Pasha
ಕಾಲು ಮುರಿದುಕೊಂಡ ರೌಡಿಶೀಟರ್ ಪರ್ವೇಜ್ ಪಾಷ

ನಗರದ ಮೈಸೂರು ರಸ್ತೆಯ ಪಾದರಾಯನಪುರದ ಪುಂಡನಾದ ಈತನ ಶೋಕಿ ಒಂದಲ್ಲ ಎರಡಲ್ಲ. ಈತನ ಶೋಕಿಯ ಕೃತ್ಯಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಸೋಮವಾರ ಸಿದ್ದಾಪುರ ಪೊಲೀಸರಿಗೆ ಡ್ರ್ಯಾಗರ್ ಬೀಸಲು ಮುಂದಾಗಿ ಗುಂಡೇಟು ತಿಂದು ಬೆಡ್ ಮೇಲೆ ಬಿದ್ದ ಪರ್ವೇಜ್ ಅಸಲಿಗೆ ಈತ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.

2020ರ ಏಪ್ರಿಲ್ ವೇಳೆ ಕೊರೊನಾ ಆತಂಕದಲ್ಲಿ ಇಡೀ ರಾಜ್ಯ ಮುಳುಗಿದ್ದರೆ, ಬೆಂಗಳೂರಿನ ಅದೊಂದು ಏರಿಯಾದಲ್ಲಿ ಈತನ ಪುಂಡಾಟ ಶುರುವಾಗಿತ್ತು. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಿಂದ ಶುರುವಾದ ಆ ಗಲಾಟೆ ಬಳಿಕ ಪೊಲೀಸರ ಮೇಲೆ ಹಲ್ಲೆ ಮಾಡುವ ಮುಖಾಂತರ ದೊಡ್ಡ ಗಲಭೆಯೇ ಸೃಷ್ಟಿಯಾಗಿತ್ತು. ಅಸಲಿಗೆ ಆ ಗಲಭೆಯ ಮಾಸ್ಟರ್ ಮೈಂಡ್​ಗಳು ಒಂದೆಡೆಯಾದ್ರೆ, ಸೃಷ್ಟಿಕರ್ತರ ಗ್ಯಾಂಗೇ ಒಂದಾಗಿದೆ.

ಸೃಷ್ಟಿಕರ್ತರ ಗ್ಯಾಂಗ್​ನಲ್ಲೊಬ್ಬನಾದ ಇದೇ ಪರ್ವೇಜ್‌ ಆಗ ಗಲಭೆ ಸೃಷ್ಟಿಸಿ ನಾಲ್ಕು ತಿಂಗಳು ನಾಪತ್ತೆಯಾಗಿದ್ದ. ಜೆ ಜೆ ನಗರ ಈತನ ಊರೆಲ್ಲಾ ಹುಡುಕಿದ್ರು ಪತ್ತೆಯಾಗಿರಲಿಲ್ಲ. ಬಳಿಕ ಆಸಾಮಿ ಚಿಂತಾಮಣಿಯಲ್ಲಿ ಅಡಗಿರುವ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ತೆರಳಿದ ಪೊಲೀಸರಿಗೆ ಈ ಐನಾತಿ ಪರ್ವೇಜ್ ಸಿಕ್ಕಿ ಬಿದ್ದಿದ್ದ. ಹೀಗೆ ಬಂಧನಕ್ಕೊಳಗಾಗಿದ್ದ ಈತನ ಮೇಲೆ ಇದೇ ಕೇಸ್ ಸಂಬಂಧ ರೌಡಿಪಟ್ಟಿ ಸಹ ಓಪನ್ ಮಾಡಲಾಗಿತ್ತು. ಆದರೆ, ಇಷ್ಟೆಲ್ಲಾ ಆದ ಮೇಲೂ ಬುದ್ಧಿ ಕಲಿಯದ ಈ ಕಿಲಾಡಿ ಅಡ್ಡದಾರಿಯನ್ನೇ ಶೋಕಿ ಮಾಡಿಕೊಂಡಿದ್ದ.

ಅದರಂತೆ ರಾತ್ರಿ ವೇಳೆ ಕಂಡ ಕಂಡವರಿಗೆ ಡ್ರಾಗರ್ ತೋರಿಸಿ ಹಣ ಸುಲಿಗೆ ಮಾಡಿದ್ರೆ, ಬಂದ ಹಣದಲ್ಲಿ ವ್ಹೀಲಿಂಗ್ ಶೋಕಿ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ಕೃತ್ಯಕ್ಕೆ ತಲೆ ಬಿಸಿ ಮಾಡಿಕೊಂಡಿದ್ದ ಪೊಲೀಸರೇ ಆತನ ಬಂಧಿಸಿದ್ದರೂ ಆರೋಪಿ ಮತ್ತೆ ಬಾಲ ಬಿಚ್ಚಲು ಹೋಗಿ ಕಾಲು ಮುರಿದುಕೊಂಡಿದ್ದಾನೆ.

ಓದಿ: ಆಪರೇಷನ್ ಕಮಲ ಪ್ರಕರಣ: ಸಚಿವ ಅಶ್ವತ್ಥನಾರಾಯಣ ಸೇರಿ ಬಿಜೆಪಿ ನಾಯಕರಿಗೆ ಹೈಕೋರ್ಟ್​ನಿಂದ ರಿಲೀಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.