ETV Bharat / state

ಒತ್ತುವರಿ ತೆರವು ವೇಳೆ ನಲಪಾಡ್​ ವಾಗ್ವಾದ : ತೆರವು ತಡೆಯಲು ಯತ್ನ, ಬಗ್ಗದ ಪಾಲಿಕೆ ಅಧಿಕಾರಿಗಳು

author img

By

Published : Sep 14, 2022, 10:20 AM IST

Updated : Sep 14, 2022, 1:40 PM IST

Mohammed Haris Nalapad
ತೆರವು ತಡೆಯತ್ನ, ಬಗ್ಗದ ಪಾಲಿಕೆ ಅಧಿಕಾರಿಗಳು

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಮಾಡುವ ಸಂದರ್ಭದಲ್ಲಿ ಹ್ಯಾರಿಸ್​ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಒತ್ತುವರಿ ತೆರವು ತಡೆಗೆ ಪ್ರಯತ್ನಿಸಲಾಗಿದೆ. ಆದರೆ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿಕೊಂಡು ಹೋಗಿದ್ದಾರೆ.

ಬೆಂಗಳೂರು: ನಗರದಲ್ಲಿ ಮಳೆಯಿಂದ ಮನೆಗಳಿಗೆ ಮತ್ತು ರಸ್ತೆಯಲ್ಲಿ ನೀರು ನುಗ್ಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಾಂಗ್ರೆಸ್​ನ ಹಿರಿಯ ಶಾಸಕ ಹ್ಯಾರಿಸ್​ ಅವರ ಪುತ್ರ ಮಹ್ಮದ್ ನಲಪಾಡ್​ ಅವರಿಗೆ ಸೇರಿದ್ದೆನ್ನಲಾದ ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಮಾಡಲು ಮುಂದಾದಾಗ ಸ್ಥಳದಲ್ಲಿ ಹೈಡ್ರಾಮವೇ ನಡೆದಿದೆ.

ಒತ್ತರಿಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ನಲಪಾಡ್​ ಅಕಾಡೆಮಿಯ ಸಿಬ್ಬಂದಿಗಳು ಅವಾಜ್​ ಹಾಕಿದ್ದು, ನೋಟಿಸ್​ ನೀಡದೆ ತೆರವಿಗೆ ಮುಂದಾಗಿದ್ದೀರಿ ಎಂದು ಪಾಲಿಕೆಯಿಂದ ನಡೆಸಲಾಗುತ್ತಿದ್ದ ಡೆಮಾಲಿಷನ್ ತಡೆಯುವುದಕ್ಕೆ ಮುಂದಾದರು. ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ ಎಂಬುದಾಗಿ ಹೇಳಿ ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದ ನಲಪಾಡ್​, ಒತ್ತುವರಿ ತೆರವು ಮಾಡಿಲ್ಲ ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ. ಜತೆಗೆ, ಸಿಬ್ಬಂದಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಆದರೂ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಬಗ್ಗದೆ ಒತ್ತುವರಿಯನ್ನು ತೆರವು ಮಾಡಿದರು.

ನಲಪಾಡ್​ ಅಕಾಡೆಮಿ ಸಿಬ್ಬಂದಿಯಿಂದ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಡ ಹೇರಲಾಗಿತ್ತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಎರಡು ಬಾರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಆದರೂ, ದಾಖಲೆಗಳನ್ನು ಒದಗಿಸಿದ ಹಿನ್ನೆಲೆ ತೆರವು ಕಾರ್ಯಾಚರಣೆ ಮುಂದುವರೆಯಿತು.

ಒತ್ತುವರಿ ತೆರವು ವೇಳೆ ನಲಪಾಡ್​ ವಾಗ್ವಾದ

ಅಧಿಕಾರಿಗಳ ವಿರುದ್ಧ ತರಾಟೆ : ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಈವರೆಗೂ ಯಾವುದೇ ಸಮಸ್ಯೆ ಪರಿಹಾರ ಮಾಡಿಲ್ಲ. ಆದರೆ, ಒತ್ತುವರಿ ತೆರವು ಮಾಡುವುದಕ್ಕೆ ಮುಂದಾಗಿದ್ದೀರ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.

ದಾಖಲೆ ಕೊಡುವುದಾಗಿ ಹೇಳಿದ್ದ ನಲಪಾಡ್ : ಸೋಮವಾರ ನಲಪಾಡ್​ ಬಂದಿದ್ದು, ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದ್ದರು. ಆದರೆ, ನಲಪಾಡ್​ ಅಕಾಡೆಮಿ ಇರುವ ಸ್ಥಳದಲ್ಲಿ ಕಾಲುವೆ ಇರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ನಲಪಾಡ್​ ಅವರು ಬೇರೊಂದು ದಾಖಲೆ ಕೊಡುವುದಾಗಿ ಹೇಳಿದ್ದಾರೆ. ಆದರೆ, ಈವರೆಗೂ ಯಾವುದೇ ದಾಖಲೆ ತಂದುಕೊಟ್ಟಿಲ್ಲ. ನಾವು ಅವರಿಗೆ ಕಾಯುವುದಕ್ಕೆ ಸಾಧ್ಯವಿಲ್ಲ, ಸಂಜೆಯ ಒಳಗಾಗಿ ಕಾರ್ಯಾಚರಣೆ ಮುಗಿಯಲಿದೆ ಎಂದು ಸ್ಥಳದಲ್ಲಿ ಹಾಜರಿದ್ದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್​ ಮಾಲತಿ ತಿಳಿಸಿದ್ದಾರೆ.

ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡ ನಲಪಾಡ್ ಪೊಲೀಸ್ ಅಧಿಕಾರಿಗಳ ವಿರುದ್ಧ ಒತ್ತುವರಿ ತೆರವು ವಿರುದ್ಧ ವಾಗ್ವಾದ ನಡೆಸಿದರು. ಸಂತ್ರಸ್ತರಿಗೆ ಸಹಾಯ ಮಾಡಲೂ ಸಹ ಅವಕಾಶ ನೀಡದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ನೋಟಿಸ್​ ನೀಡದೆ ಡೆಮಾಲಿಷ್​ : ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ನೋಟಿಸ್​ ನೀಡದೆ ಏಕಾಏಕಿ ತೆರವಿಗೆ ಮುಂದಾಗಿದ್ದೀರಿ. ಇದು ಕಾನೂನು ಬಾಹಿರ ಎಂದು ಸಾರ್ವಜನಿಕರು ಆರೋಪಿಸಿದರು. ಬಡವರ ಮನೆಗಳನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡಲಾಗುತ್ತದೆ. ಆದರೆ, ಪ್ರಭಾವಿಗಳು ಮತ್ತು ರಾಜಕಾರಣಿಗಳ ಒತ್ತುವರಿ ತೆರವಿಗೆ ಮುಂದಾಗುವುದಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಶೇಮ್​ ಶೇಮ್​ ಬಿಬಿಎಂಪಿ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ : ರಾಜಕಾಲುವೆ ಒತ್ತುವರಿದಾರರಿಗೆ ಶಾಕ್: ಮಹದೇವಪುರದಲ್ಲಿ ಜೆಸಿಬಿಗಳ ಘರ್ಜನೆ

Last Updated :Sep 14, 2022, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.