ETV Bharat / state

ತಹಶೀಲ್ದಾರ್​ ವಿರುದ್ಧ ದುಂಡಾವರ್ತನೆ, ಅವಾಚ್ಯ ಶಬ್ದ ಬಳಕೆ: ಮೂವರ ಬಂಧನ

author img

By

Published : Jul 18, 2021, 10:09 PM IST

Police arrest 3 people in Nelamangala
ಮೂವರ ಬಂಧನ

ನೆಲಮಂಗಲದಲ್ಲಿ ಮೂವರು ವ್ಯಕ್ತಿಗಳು ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ ತಹಶೀಲ್ದಾರ್​ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.‌

ನೆಲಮಂಗಲ: ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಹಾಗೂ ತಹಶೀಲ್ದಾರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ತ್ಯಾಮಗೊಂಡ್ಲು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.‌

Nalamangala Tahsildar Manjunath
ನೆಲಮಂಗಲ ತಹಶೀಲ್ದಾರ್​ ಮಂಜುನಾಥ್​

ರಾಜು ಅಲಿಯಾಸ್​ ಬುಲೆಟ್ ರಾಜ, ಮಂಜುನಾಥ್ ಅಲಿಯಾಸ್​​ ದೌಲತ್ ಮಂಜ, ರಂಗಸ್ವಾಮಿ ಅಲಿಯಾಸ್​​ ರಂಗ ಪೊಲೀಸರು ಬಂಧಿಸಿದ ಆರೋಪಿಗಳು. ಇವರು ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ಕರ್ತವ್ಯದ ನಿಮಿತ್ತ ತ್ಯಾಮಗೊಂಡ್ಲುಗೆ ತೆರಳುತ್ತಿದ್ದರು. ಈ ವೇಳೆ ಇವರು ರಸ್ತೆಯಲ್ಲಿ ಕಾರು, ಟೆಂಪೋ ನಿಲ್ಲಿಸಿಕೊಂಡು ಸಂಚಾರಕ್ಕೆ ಅಡ್ಡಿಗೊಳಿಸಿದ್ದರು. ಈ ವೇಳೆ ವಾಹನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ದಂಡಾಧಿಕಾರಿ ಮಂಜುನಾಥ್ ಹೇಳಿದರೂ ಕೂಡ ಅವರ ಜೊತೆಗೆ ಕಿರಿಕ್ ಮಾಡಿದ್ದಾರೆ.

ಈ ಸಂಬಂಧ ತಹಶೀಲ್ದಾರ್, ದುಂಡಾವರ್ತನೆ, ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದ ಬಳಕೆ ಆರೋಪದಡಿ ಪ್ರಕರಣ ದಾಖಲು ನೀಡಿದ್ದರು. ಈ ಹಿನ್ನೆಲೆಯಲ್ಲಿ ತ್ಯಾಮಗೊಂಡ್ಲು ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಶುಭ ಕೋರಿದ ಸಿಎಂ ಬಿಎಸ್​​​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.