ETV Bharat / state

ಬಾಗ್ಮನೆ ಟೆಕ್​ ಪಾರ್ಕ್​ ಒತ್ತುವರಿ ಪ್ರಕರಣದಲ್ಲಿ ಲೋಕಾಯುಕ್ತ ಮಧ್ಯ ಪ್ರವೇಶ: ವಿಚಾರಣೆ ಮುಂದೂಡಿಕೆ

author img

By

Published : Sep 27, 2022, 7:29 AM IST

KN_BNG_H
ಹೈಕೋರ್ಟ್​

ಮೆಸರ್ಸ್ ಬಾಗ್ಮನೆ ಡೆವಲಪಮೆಂಟ್​ ಪ್ರೈವೇಟ್​ ಲಿಮಿಟೆಡ್​ ಒತ್ತುವರಿ ವಿಷಯ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ಮುಂದೂಡಿದೆ.

ಬೆಂಗಳೂರು: ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಷಯದಲ್ಲಿ ಮೆಸರ್ಸ್​ ಬಾಗ್ಮನೆ ಡೆವಲಪಮೆಂಟ್​ ಪ್ರೈವೇಟ್​ ಲಿಮಿಟೆಡ್​ ಸಲ್ಲಿಸಿದ್ದ ದೂರಿನ ಅನ್ವಯ ಲೋಕಾಯುಕ್ತ ಪ್ರಾರಂಭಿಸಿರುವ ಪ್ರಕ್ರಿಯೆಗಳ ಕಾನೂನು ಬದ್ಧತೆ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಸೆ.28ಕ್ಕೆ(ನಾಳೆಗೆ) ಮುಂದೂಡಿದೆ.

ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕರಾದ ಎಸ್​.ಆರ್.ಹಿರೇಮಠ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಆಗಸ್ಟ್​ ಮತ್ತು ಸೆಪ್ಟಂಬರ್​ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಸತಿ ಸಮುಚ್ಚಯಗಳು ಸೇರಿದಂತೆ ವಿವಿಧ ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯಲಾರದೆ ಕೆಲ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗುವುದಕ್ಕೆ ಕಾರಣವಾಗಿತ್ತು. ಈ ಗೊಂದಲಗಳಿಗೆ ಪರಿಹಾರ ಕಲ್ಪಿಸುವ ಸಲುವಾಗಿ ಬಿಬಿಎಂಪಿ ತಕ್ಷಣ ಕ್ರಮಕ್ಕೆ ಮುಂದಾಗಿದ್ದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾಗಿತ್ತು.

ಈ ನಡುವೆ ಮೆಸರ್ಸ್​​ ಭಾಗ್ಮನೆ ಡೆವಲ್ಪಮೆಂಟ್​ ಪ್ರೈವೇಟ್​ ಲಿಮಿಟೆಡ್​ ನಿಂದ ಸೆ.11ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿ ಭಾಗ್ಮನೆ ಟೆಕ್​ ಪಾರ್ಕ್​ನ ಕಾಂಪೌಂಡ್​ ಮತ್ತು ಚರಂಡಿಯ ಮೇಲಿನ ಕಲ್ಲುಗಳನ್ನು ಪಾಲಿಕೆ ಅಧಿಕಾರಿಗಳು ತೆಗೆಯುವ ಬಗ್ಗೆ ಆತಂಕವಿದೆ ಎಂದು ಮನವಿ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಲೋಕಾಯುಕ್ತರು, ಬಾಗ್ಮನೆ ಟೆಕ್​ ಪಾರ್ಕ್​ನ ಒತ್ತುವರಿ ತೆರವು ಮಾಡಿದಲ್ಲಿ ಈ ಭಾಗದಲ್ಲಿನ ನೆರೆಹೊರೆಯರ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ ಎಂದು ಸೂಚನೆ ನೀಡಿದ್ದಾರೆ. ಈ ರೀತಿಯಲ್ಲಿ ಸೂಚನೆ ನೀಡಲು ಲೋಕಾಯುಕ್ತರಿಗೆ ಕಾನೂನಿಲ್ಲಿ ಅವಕಾಶವಿಲ್ಲ.

ಆದ್ದರಿಂದ ಬಾಗ್ಮನೆ ಒತ್ತುವರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ದೂರಿನ ಸಂಬಂಧದ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಅಲ್ಲದೆ, ಕರ್ನಾಟಕ ಲೋಕಾಯುಕ್ತ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ.

ಇದನ್ನೂ ಓದಿ: ಬಾಗ್ಮನೆ ಟೆಕ್​ ಪಾರ್ಕ್​ ಒತ್ತುವರಿ: ಲೋಕಾಯುಕ್ತ ಮಧ್ಯಪ್ರವೇಶ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಪಿಐಎಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.