ETV Bharat / state

"ಪ್ರತಿಜ್ಞಾ" ಕಾರ್ಯಕ್ರಮ ಸಿದ್ಧತೆ ಅರಿಯಲು ಕಾಂಗ್ರೆಸ್ ಕಚೇರಿಯಿಂದ ಡಿಕೆಶಿ ವಿಡಿಯೋ ಕಾನ್ಫರೆನ್ಸ್

author img

By

Published : Jun 7, 2020, 2:22 PM IST

KPCC President D.K Shivakumar
ಡಿಕೆಶಿ ವೀಡಿಯೊ ಕಾನ್ಫರೆನ್ಸ್

ಕಾಂಗ್ರೆಸ್ ಭವನದಲ್ಲಿ ಪ್ರತಿಜ್ಞಾ ಕಾರ್ಯಕ್ರಮದ ಸಿದ್ಧತೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಯಾವ ರೀತಿ ನಡೆಯುತ್ತಿದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದ ಮೂಲಕ ವಿವಿಧ ಮುಖಂಡರ ಜೊತೆ ಡಿಕೆಶಿ ವಿಡಿಯೋ ಸಂವಾದ ನಡೆಸಿದರು.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೂ. 14 ರಂದು ನಿಗದಿಪಡಿಸಿರುವ "ಪ್ರತಿಜ್ಞಾ" ಕಾರ್ಯಕ್ರಮ ನಿಮಿತ್ತ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಸಂಧರ್ಭದಲ್ಲಿ ಪ್ರಚಾರ ಸಮಿತಿಯಿಂದ ಶಿವಕುಮಾರ್​ರನ್ನು ಅಭಿನಂದಿಸಲಾಯಿತು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. ಇದೇ ವೇಳೆ ಡಿ. ಕೆ. ಶಿವಕುಮಾರ್ ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಿಸಿ, ಪಕ್ಷದ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ಬಳಿಕ ಕಾಂಗ್ರೆಸ್ ಭವನದಲ್ಲಿ ಪ್ರತಿಜ್ಞಾ ಕಾರ್ಯಕ್ರಮದ ಸಿದ್ಧತೆ, ಗ್ರಾಮ ಪಂಚಾಯತ್​ ಮಟ್ಟದಲ್ಲಿ ಯಾವ ರೀತಿ ನಡೆಯುತ್ತಿದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದ ಮೂಲಕ ವಿವಿಧ ಮುಖಂಡರ ಜೊತೆ ವಿಡಿಯೋ ಸಂವಾದ ನಡೆಸಿದರು.

ಪ್ರತಿಜ್ಞಾ ಕಾರ್ಯಕ್ರಮದ ಸಿದ್ಧತೆ ಕುರಿತು ಡಿಕೆಶಿ ವಿಡಿಯೋ ಕಾನ್ಫರೆನ್ಸ್

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನಾಳೆಯಿಂದ ಲಾಕ್​ಡೌನ್ ಇನ್ನಷ್ಟು ಸಡಿಲಗೊಳ್ಳಲಿದೆ. ಲಾಕ್​ಡೌನ್​ನಿಂದಾಗಿ ಸಾಕಷ್ಟು ಸಮಸ್ಯೆ ಆಗಿತ್ತು. ಕೇಂದ್ರ ಸರ್ಕಾರ ಜವಾಬ್ದಾರಿಯನ್ನು ಕೈಬಿಟ್ಟಿದೆ. ಈ ಮೂಲಕ ಕೊರೊನಾ ಹೋರಾಟದಲ್ಲಿ ಕೇಂದ್ರದ ವೈಫಲ್ಯ ಕಾಣಿಸುತ್ತಿದೆ. ಯಾವುದೇ ಸೌಕರ್ಯ ನೀಡದೆ ಲಾಕ್ ಡೌನ್ ಮಾಡಿತ್ತು. ವಿವಿಧ ಪಿಂಚಣಿಗಳು ಬಂದು ಮೂರ್ನಾಲ್ಕು ತಿಂಗಳಾಗಿದೆ ಎಂದರು.

ಈಗ ನಾವು ಎಚ್ಚರಿಕೆಯಿಂದಿರಬೇಕು. ಸೋಂಕಿನ ಪ್ರಮಾಣ ಹೆಚ್ಚಾಗ್ತಾನೇ ಇದೆ. ಆರ್ಥಿಕವಾಗಿಯೂ ನಾವು ಸುಧಾರಿಸಬೇಕಿದೆ. ಅದಕ್ಕೆ ನಮ್ಮ ಜವಾಬ್ದಾರಿಯನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಎರಡು ಮೂರು ತಿಂಗಳಲ್ಲಿ ವ್ಯಾಪಾರ ಆಗುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.