ETV Bharat / state

ರಾಜ್ಯದಲ್ಲಿಂದು 1,579 ಮಂದಿಗೆ ಕೋವಿಡ್ ದೃಢ: 23 ಸೋಂಕಿತರು ಸಾವು

author img

By

Published : Feb 17, 2022, 8:31 PM IST

karnataka-covid-report-today
ರಾಜ್ಯದಲ್ಲಿಂದು 1,579 ಮಂದಿಗೆ ಕೋವಿಡ್ ದೃಢ: 23 ಸೋಂಕಿತರು ಸಾವು

ರಾಜ್ಯದಲ್ಲಿ ಸದ್ಯ 19,761 ಸಕ್ರಿಯ ಪ್ರಕರಣಗಳಿವೆ. ಇಂದು ಸೋಂಕಿಗೆ 23 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,738 ಏರಿಕೆ ಕಂಡಿದೆ.

ಬೆಂಗಳೂರು: ರಾಜ್ಯದಲ್ಲಿಂದು 90,688 ಜನರಿಗೆ ಕೋವಿಡ್​ ಪರೀಕ್ಷೆ ನಡೆಸಿದ್ದು, 1,579 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,33,115 ಕ್ಕೆ ಏರಿದೆ.‌

ಪಾಸಿಟಿವ್ ದರ ಶೇ. 1.74 ಹಾಗೂ ಡೆತ್ ರೇಟ್​​ ಶೇ. 1.45ರಷ್ಟಿದೆ. ಇತ್ತ 5,079 ಸೋಂಕಿತರು ಗುಣಮುಖರಾಗಿದ್ದು, ಈತನಕ 38,73,580 ಮಂದಿ ಚೇತರಿಕೆ ಆಗಿದ್ದಾರೆ.

ಸದ್ಯ 19,761 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ 23 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,738 ಏರಿಕೆ ಕಂಡಿದೆ. ವಿಮಾನ ನಿಲ್ದಾಣದಿಂದ 1,325 ಪ್ರಯಾಣಿಕರು ಆಗಮಿಸಿದ್ದಾರೆ.

ಇದನ್ನೂ ಓದಿ: ಧರಣಿ ನಿರತ ಡಿಕೆಶಿ ಭೇಟಿಯಾದ ಸ್ಪೀಕರ್ ಕಾಗೇರಿ.. ಹಳೆ ಘಟನೆ ಮೆಲಕು ಹಾಕಿದ ನಾಯಕರು

ಬೆಂಗಳೂರು ಕೋವಿಡ್​: ರಾಜಧಾನಿಯಲ್ಲಿ 769 ಮಂದಿಗೆ ಸೋಂಕು ದೃಢಪಟ್ಟಿದ್ದು, 17,73,991ಕ್ಕೆ ಏರಿಕೆ ಆಗಿದೆ. 1889 ಮಂದಿ ಗುಣಮುಖರಾಗಿದ್ದು, ಈವರೆಗೆ 17,48,371 ಜನರು ಚೇತರಿಸಿಕೊಂಡಂತಾಗಿದೆ. ಇಂದು 7 ಸೋಂಕಿತರು ಮೃತರಾಗುವ ಮೂಲಕ ಸಾವಿನ ಸಂಖ್ಯೆ 16,791 ತಲುಪಿದೆ. ಸದ್ಯ 8,828 ಸಕ್ರಿಯ ಪ್ರಕರಣಗಳು ಇವೆ.

  • ರೂಪಾಂತರಿ ಮಾಹಿತಿ:
  • ಅಲ್ಪಾ - 156
  • ಬೇಟಾ - 08
  • ಡೆಲ್ಟಾ ಸಬ್ ಲೈನ್ ಏಜ್ - 4,431
  • ಇತರೆ - 286
  • ಒಮಿಕ್ರಾನ್ - 1,115
  • BAI.1.529 - 807
  • BA1 - 89
  • BA2 - 219
  • ಒಟ್ಟು - 5,996
ETV Bharat Logo

Copyright © 2024 Ushodaya Enterprises Pvt. Ltd., All Rights Reserved.