ETV Bharat / state

ರಾಜ್ಯದಲ್ಲಿಂದು 254 ಮಂದಿಗೆ ಕೋವಿಡ್ ದೃಢ; ಇಬ್ಬರು ಸೋಂಕಿತರು ಮೃತ

author img

By

Published : Nov 3, 2021, 7:42 PM IST

covid
ಕೊರೊನಾ

ಬೆಂಗಳೂರಿನಲ್ಲಿ 151 ಜನರಿಗೆ ವೈರಸ್​ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,52,257 ಕ್ಕೆ ಏರಿಕೆ ಆಗಿದೆ. 173 ಜನರು ಗುಣಮುಖರಾಗಿದ್ದು, 12,29,570 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿಂದು 76,420 ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 254 ಜನರಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,89,014 ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.33 % ರಷ್ಟು ದಾಖಲಾಗಿದೆ. 316 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 29,42,588 ಜನ ಡಿಸ್ಚಾರ್ಜ್​ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 8,306 ರಷ್ಟು ಇದೆ.

2 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,091 ಕ್ಕೆ ಏರಿದೆ. ಮೃತರ ಶೇಕಡಾವಾರು ಪ್ರಮಾಣ 0.78 ರಷ್ಟು ದಾಖಲಾಗಿದೆ. ವಿಮಾನ ನಿಲ್ದಾಣದಲ್ಲಿ 10,987 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 1345 ಪ್ರಯಾಣಿಕರು ಬಂದಿದ್ದಾರೆ.

ಬೆಂಗಳೂರಿನಲ್ಲಿ 151 ಜನರಿಗೆ ವೈರಸ್​ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,52,257 ಕ್ಕೆ ಏರಿಕೆ ಆಗಿದೆ. 173 ಜನರು ಗುಣಮುಖರಾಗಿದ್ದು, 12,29,570 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,285 ಕ್ಕೆ ಏರಿಕೆ ಆಗಿದೆ. ಸದ್ಯ 6401 ಸಕ್ರಿಯ ಪ್ರಕರಣಗಳು ಇವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್​

1)ಡೆಲ್ಟಾ (Delta/B.617.2) - 1698
2)ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೆಟಾ ವೈರಸ್ (BETA/B.1.351) -8
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1
7) ಡೆಲ್ಟಾ ಸಬ್​ಲೈನ್​​ ಏಜ್ AY.4- 300
8) ಡೆಲ್ಟಾ ಸಬ್​ಲೈನ್​ ಏಜ್ AY .12- 15

ಇದನ್ನೂ ಓದಿ: ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.