ETV Bharat / state

'ಗ್ಯಾರಂಟಿಗಳ ಈಡೇರಿಸಲು ಹಣವಿಲ್ಲ ಎಂದ ಕರ್ನಾಟಕ ಸಿಎಂ' - ಕೆಟಿಆರ್ ಪೋಸ್ಟ್​ಗೆ ಸಿದ್ದರಾಮಯ್ಯ ತಿರುಗೇಟು

author img

By ETV Bharat Karnataka Team

Published : Dec 19, 2023, 5:07 PM IST

Updated : Dec 19, 2023, 7:18 PM IST

Siddaramaiah Statement Video Viral: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಎಡಿಟ್​ ಮಾಡಿದ್ದ ವಿಡಿಯೋವೊಂದನ್ನು ಹಂಚಿಕೊಂಡ ವಿಚಾರವಾಗಿ ತೆಲಂಗಾಣದ ಬಿಆರ್​ಎಸ್​ ಶಾಸಕ ಕೆಟಿಆರ್ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Karnataka CM Siddaramaiah Counter To BRS Leader KTR on His X post
'ಗ್ಯಾರಂಟಿಗಳ ಈಡೇರಿಸಲು ಹಣವಿಲ್ಲ ಎಂದ ಕರ್ನಾಟಕ ಸಿಎಂ' - ಕೆಟಿಆರ್ ಪೋಸ್ಟ್​ಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಇತ್ತೀಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋ ತುಣುಕು ಗೊಂದಲಕ್ಕೆ ಕಾರಣವಾಗಿದೆ. ''ಎಲ್ಲಿಂದ ತರಲಿ ದುಡ್ಡು.. ಚುನಾವಣೆಯಲ್ಲಿ ಏನೋ ಹೇಳಿರುತ್ತಿವಪ್ಪಾ, ಹೇಳಿದಂತೆ ನಡೆದುಕೊಳ್ಳೇಕೆ ಆಗುತ್ತಾ'' ಎಂಬ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಹೇಳಿಕೆ ವಿಚಾರವಾಗಿ ತೆಲಂಗಾಣದ ಬಿಆರ್​ಎಸ್​ ಶಾಸಕ, ಮಾಜಿ ಸಚಿವ ಕೆ.ಟಿ.ರಾಮರಾವ್ (ಕೆಟಿಆರ್​) ಕಾಂಗ್ರೆಸ್​ ವಿರುದ್ಧ ಟೀಕಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಯಾವುದು ಸತ್ಯ ಎಂದು ಪರಿಶೀಲಿಸುವುದು ನಿಮಗೆ ಗೊತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

  • No money to deliver poll promises/guarantees says Karnataka CM !

    Is this the future template for Telangana too after successfully hoodwinking the people in elections ?

    Aren’t you supposed to do basic research and planning before making outlandish statements? https://t.co/JOcc4NLsiq

    — KTR (@KTRBRS) December 19, 2023 " class="align-text-top noRightClick twitterSection" data=" ">

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2009ರ ಡಿಸೆಂಬರ್​ನಲ್ಲಿ ಸಾಲ ಮನ್ನಾ ಮಾಡುವ ಕುರಿತು ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮಾತನಾಡುವಾಗ, ''ಯಡಿಯೂರಪ್ಪ ಏನ್​ ಹೇಳಿದ್ದಾರೆ ಗೊತ್ತಾ?, ನಮ್ಮ ಹತ್ರ ಪ್ರಿಟಿಂಗ್​ ಮಿಷನ್​ ಇದೆಯಾ?, ಅಲ್ಲಿಂದ ತರಲಿ ದುಡ್ಡು, ನಾವು ಏನೋ ಚುನಾವಣೆಯಲ್ಲಿ ಹೇಳಿರುತ್ತಿವಪ್ಪಾ, ಹೇಳಿದಂತೆ ನಡೆದುಕೊಳ್ಳೇಕೆ ಆಗುತ್ತಾ'' ಎಂದು ಯಡಿಯೂರಪ್ಪ ಅವರ ಶೈಲಿಯಲ್ಲಿ ಹೇಳಿದ್ದಾರೆ. ಆದರೆ, ಈ ಸಿದ್ದರಾಮಯ್ಯನವರ ಹೇಳಿಕೆ ವಿಡಿಯೋದಲ್ಲಿ ''ಅಲ್ಲಿಂದ ತರಲಿ ದುಡ್ಡು, ನಾವು ಏನೋ ಚುನಾವಣೆಯಲ್ಲಿ ಹೇಳಿರುತ್ತಿವಪ್ಪಾ, ಹೇಳಿದಂತೆ ನಡೆದುಕೊಳ್ಳೇಕೆ ಆಗುತ್ತಾ'' ಎಂಬ ತುಣುಕು ಮಾತ್ರ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ​ ಈ ವಿಡಿಯೋ ತುಣುಕಿನ ಪೋಸ್ಟ್​ ಶೇರ್​ ಮಾಡಿರುವ ಬಿಆರ್​ಎಸ್​ ನಾಯಕ ಕೆಟಿಆರ್​, ''ಚುನಾವಣಾ ಭರವಸೆ/ಗ್ಯಾರಂಟಿಗಳನ್ನು ಈಡೇರಿಸಲು ಹಣವಿಲ್ಲ ಎಂದ ಕರ್ನಾಟಕ ಸಿಎಂ!. ಚುನಾವಣೆಯಲ್ಲಿ ಯಶಸ್ವಿಯಾಗಿ ಜನರನ್ನು ವಂಚಿಸಿದ ನಂತರ ತೆಲಂಗಾಣಕ್ಕೂ ಇದೇ ಭವಿಷ್ಯದ ಮಾದರಿಯೇ?, ವಿಲಕ್ಷಣ ಹೇಳಿಕೆಗಳನ್ನು ನೀಡುವ ಮೊದಲು ನೀವು ಮೂಲ ಸಂಶೋಧನೆ ಮತ್ತು ಯೋಜನೆಯನ್ನು ಮಾಡಬೇಕಲ್ಲವೇ?'' ಎಂದು ಬರೆದುಕೊಂಡಿದ್ದಾರೆ.

  • Mr. @KTRBRS, Do you know why your party lost in the Telangana Elections?

    Because you don't even know how to verify what is fake and edited, and what is truth. @BJP4India creates fake edited videos, and your party circulates them. Yours is a perfect B Team of BJP.

    If you are… https://t.co/Ey5y9K3fLd

    — Siddaramaiah (@siddaramaiah) December 19, 2023 " class="align-text-top noRightClick twitterSection" data=" ">

ಈ ಪೋಸ್ಟ್​ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ''ಕೆಟಿಆರ್ ಅವರೇ, ತೆಲಂಗಾಣ ಚುನಾವಣೆಯಲ್ಲಿ ನಿಮ್ಮ ಪಕ್ಷ ಸೋತಿದ್ದು ಯಾಕೆ ಗೊತ್ತಾ?, ಏಕೆಂದರೆ, ಯಾವುದು ನಕಲಿ ಮತ್ತು ಯಾವುದು ಎಡಿಟ್ ಮಾಡಿರುವುದು ಮತ್ತು ಯಾವುದು ಸತ್ಯ ಎಂದು ಪರಿಶೀಲಿಸುವುದು ಹೇಗೆ ಎಂದು ನಿಮಗೆ ತಿಳಿದಿಲ್ಲ. ನಕಲಿ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಜೆಪಿ ಸೃಷ್ಟಿಸಿತ್ತದೆ ಮತ್ತು ಅವುಗಳನ್ನು ನಿಮ್ಮ ಪಕ್ಷವು ಪ್ರಸಾರ ಮಾಡುತ್ತದೆ. ನಿಮ್ಮದು ಬಿಜೆಪಿಯ ಪರಿಪೂರ್ಣ ಬಿ-ಟೀಂ'' ಎಂದು ಪೋಸ್ಟ್​ ಮಾಡಿದ್ದಾರೆ.

  • In a concerning turn of events, certain BJP leaders like Ashwath Narayan, CT Ravi, and others have engaged in spreading misleading information about me. The deceptive tactic involves circulating an edited video that distorts my statements, falsely implying an admission of the… pic.twitter.com/8HaeKdtwlU

    — Siddaramaiah (@siddaramaiah) December 17, 2023 " class="align-text-top noRightClick twitterSection" data=" ">

ಈ ಹಿಂದೆ ಇದೇ ವಿಡಿಯೋ ತುಣುಕು ಹಂಚಿಕೊಂಡಿದ್ದ ಕುರಿತಾಗಿ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದರು. ಬಿಜೆಪಿಯು ಸುಳ್ಳು ಸುದ್ದಿಗಳನ್ನು ಹರಡಲು ಹೆಸರುವಾಸಿಯಾಗಿದೆ. ಅದರ ಪೂರ್ಣ ಹೆಸರು 'ಬೊಗಳೆ ಜನತಾ ಪಾರ್ಟಿ' ಆಗಿರಬೇಕು. ಅವರ ಸಂಪೂರ್ಣ ಯಂತ್ರವು ನಕಲಿ ಸುದ್ದಿಗಳನ್ನು ಹರಡಲು ಕೆಲಸ ಮಾಡುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದು, ಬರ ಪರಿಹಾರ ನೀಡಲು ಪ್ರಧಾನಿಗೆ ಒತ್ತಾಯಿಸಿದ್ದೇವೆ: ಸಿಎಂ

Last Updated :Dec 19, 2023, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.