ETV Bharat / state

ಕರ್ನಾಟಕ-ಭಾರತ್ ಗೌರವ್ ಕಾಶಿ ಯಾತ್ರೆಗೆ ಬುಕ್ಕಿಂಗ್ ಆರಂಭ.. ಸರ್ಕಾರದಿಂದಲೇ ಸಿಗಲಿದೆ ಸಹಾಯಧನ

author img

By

Published : Feb 18, 2023, 7:14 PM IST

Updated : Feb 18, 2023, 9:28 PM IST

karnataka-bharat-gaurav-kashi-yatra-booking-starts
ಕರ್ನಾಟಕ-ಭಾರತ್ ಗೌರವ್ ಕಾಶಿ ಯಾತ್ರೆಗೆ ಬುಕ್ಕಿಂಗ್ ಆರಂಭ

ಚಳಿಗಾಲದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರೈಲು ಪ್ರವಾಸ - ಇದೇ ಫೇ.21ರಿಂದ ಪ್ರಾರಂಭಿಸಲು ನಿರ್ಧಾರ - ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿಗೆ 5 ಸಾವಿರ ರೂ.ಗಳ ಸಹಾಯಧನ

ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆ ಕರ್ನಾಟಕ-ಭಾರತ್ ಗೌರವ್ ಕಾಶಿ ರೈಲು ಯಾತ್ರೆಯ ಮೂರನೇ ಟ್ರಿಪ್​ಗೆ ರಾಜ್ಯದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಸುಮಾರು 300ಕ್ಕೂ ಹೆಚ್ಚು ಟಿಕೆಟ್​ಗಳು ಭರ್ತಿಯಾಗಿವೆ ಎಂದು ಐಆರ್​ಸಿಟಿಸಿ (ಭಾರತೀಯ ರೈಲ್ವೆ ಮತ್ತು ಪ್ರವಾಸೊದ್ಯಮ ನಿಗಮ) ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2022ರ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಉದ್ಘಾಟನೆಯಾದ ಈ ಯೋಜನೆ, ಯಾತ್ರಿಕರಿಂದ ಎರಡು ಟ್ರಿಪ್​ಗಳಿಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರೈಲು ಪ್ರವಾಸವನ್ನು ಫೆಬ್ರವರಿ 21, 2023ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಾರಾಣಾಸಿ, ಅಯೋಧ್ಯೆ ಹಾಗೂ ಪ್ರಯಾಗ್‌ ರಾಜ್‌ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿಗೆ 5 ಸಾವಿರ ರೂ.ಗಳ ಸಹಾಯಧನ ನೀಡಲಾಗುತ್ತಿದ್ದು, ರಾಜ್ಯದ ಭಕ್ತಾದಿಗಳೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದಿವ್ಯ ಕಾಶಿ, ಭವ್ಯ ಕಾಶಿಯ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಂಟು ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್​ನ ವಿವರ - ಟೂರ್‌ಗೆ ಶುಲ್ಕ: ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ಗೆ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿ ಸಹಾಯಧನವನ್ನು ರಾಜ್ಯ ಸರಕಾರ ನೀಡಲಿದೆ. ಈ ಪ್ಯಾಕೇಜ್‌ನ ದರ 20 ಸಾವಿರ ರೂಪಾಯಿಯಾಗಿದೆ.

ರೈಲು ಸಂಚರಿಸುವ ಮಾರ್ಗ: ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ವರೆಗೆ ಸಂಚರಿಸಲಿದೆ.

ಪ್ರವಾಸಿಗರಿಗೆ ಇರುವ ಸೌಲಭ್ಯಗಳು: ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆ ರಾಮಲಲ್ಲಾ ದೈವ ಭೂಮಿಯ ವೈಭವ ಭಾಗ್ಯ ಇದಾಗಿದೆ. 8 ದಿನಗಳ ಕಾಲದ ಈ ಟೂರ್‌ ಪ್ಯಾಕೇಜ್‌ನಲ್ಲಿ ಟ್ರೈನ್‌ ದರ, ಪ್ರವಾಸಿ ಸ್ಥಳಗಳಲ್ಲಿ ಬಸ್‌ ವ್ಯವಸ್ಥೆ, ತಂಗಲು ಹೋಟೆಲ್‌, 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆ ಇರಲಿದೆ. ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯ ಸೇವೆ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ.

ರೈಲಿನ ವಿಶೇಷತೆಯೇನು: ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್‌ ಎಸಿ ವ್ಯವಸ್ಥೆ ಮಾಡಲಾಗಿದೆ. 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್‌ ಮಾಡಲಾಗಿದೆ. ನಮ್ಮ ರಾಜ್ಯದ ದೇವಸ್ಥಾನಗಳನ್ನು ಭಾರತದ ಉದ್ದಗಲಕ್ಕೂ ಸಂಚರಿಸಲಿರುವ ಟ್ರೈನ್‌ ಮೂಲಕ ಪ್ರಚಾರ ಮಾಡುವುದು ಇದರ ಉದ್ದೇಶವಾಗಿದೆ.

ಈ ಕೆಳಗಿನ ಲಿಂಕ್‌ ಬಳಸಿ ಟಿಕೆಟ್‌ ಬುಕ್‌ ಮಾಡಬಹುದಾಗಿದೆ : https://www.irctctourism.com/bgaurav?searchKey=&tagType=&travelType=Domestic§or=All&bdar=6

ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿಯನ್ನು ಸಂಪರ್ಕಿಸಬಹುದು . 8595931290/92/93/94

ಇದನ್ನೂ ಓದಿ: ಕಾಪಿ ರೈಟ್ಸ್ ಉಲ್ಲಂಘನೆ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು

Last Updated :Feb 18, 2023, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.