ETV Bharat / state

ಇಂದಿನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್​ 2 ಕಾರ್ಯಾರಂಭ

author img

By ETV Bharat Karnataka Team

Published : Sep 12, 2023, 10:06 AM IST

Updated : Sep 12, 2023, 10:23 AM IST

International flights at KIAL terminal 2  International flights at KIAL terminal 2 begin  KIAL terminal 2 begin today  ಇಂದಿನಿಂದ ಕೆಐಎಎಲ್​ ಟರ್ಮಿನಲ್​ 2  ಟರ್ಮಿನಲ್​ 2 ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭ  ಮುಂದೂಡಲ್ಪಟ್ಟಿದ್ದ ಟರ್ಮಿನಲ್ 2 ಕಾರ್ಯಾಚರಣೆ  ಟರ್ಮಿನಲ್ 2 ಕಾರ್ಯಾಚರಣೆಯನ್ನು ಇಂದಿನಿಂದ ಪ್ರಾರಂಭ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ 2  ಕರ್ನಾಟಕದ ಶ್ರೀಮಂತ ಪರಂಪರೆಯ ಅನಾವರಣ  ಫೋಲಿ ಡಿಸೈನ್‌ ಮತ್ತು ಗುಂಡುರಾಜು ಕಲಾಕೃತಿ
ಇಂದಿನಿಂದ ಕೆಐಎಎಲ್​ ಟರ್ಮಿನಲ್​ 2 ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭ

ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಹೊಸ ಟರ್ಮಿನಲ್ 2ರಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಪ್ರಾರಂಭವಾಗಲಿದೆ.

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ವಿವಿಧ ನಿಯಂತ್ರಕ ಇಲಾಖೆಗಳು ಮತ್ತು ಸಹಭಾಗಿಗಳೊಂದಿಗೆ ಸುದೀರ್ಘ ಸಮಾಲೋಚನೆಯ ನಂತರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ, ಆಕರ್ಷಕ ಟರ್ಮಿನಲ್‌ 2 ರಿಂದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಇಂದಿನಿಂದ ಆರಂಭಿಸಲಾಗುವುದು ಎಂದು ಈ ಹಿಂದೆ ಬಿಐಎಎಲ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದರು. ಆ‌ಗಸ್ಟ್ 31ಕ್ಕೆ ನಿಗದಿಯಾಗಿದ್ದ ಟರ್ಮಿನಲ್ 2 ಕಾರ್ಯಾಚರಣೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಿಕೆ ಮಾಡಲಾಗಿತ್ತು. ಇಂದು ಬೆಳಗ್ಗೆ 10.45 ರಿಂದ ಹೊಸ ಟರ್ಮಿನಲ್ ಮುಖೇನ ವಿಮಾನಗಳ ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಲಾಗಿದೆ. ನಿಯಂತ್ರಕರ ಅಂಗೀಕಾರ, ಕಾರ್ಯಾಚರಣೆಯ ದಕ್ಷತೆ ಹಾಗೂ ಪ್ರಯಾಣಿಕರ ಅನುಕೂಲತೆ ಸೇರಿದಂತೆ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಪರಿಗಣಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

  • Here’s a film that captures the elements of architecture, landscaping, technology and art that make Terminal 2 (T2) at BLR Airport a destination like never before.

    T2 will begin international operations starting September 12, 10:45 AM onwards.

    For assistance please contact our… pic.twitter.com/dWseqt0m6G

    — BLR Airport (@BLRAirport) September 8, 2023 " class="align-text-top noRightClick twitterSection" data=" ">

ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಮ್ಮ ಪ್ರಯಾಣಿಕರಿಗೆ ಈ ಬದಲಾವಣೆಯನ್ನು ಸುಗಮವಾಗಿಸಲು ನಾವು ಬದ್ಧರಾಗಿದ್ದೇವೆ. ಹೊಸ ಸೌಲಭ್ಯಕ್ಕೆ ಅಂತರರಾಷ್ಟ್ರೀಯ ಕಾರ್ಯಾಚರಣೆಯ ಅಡಚಣೆರಹಿತ ಸ್ಥಳಾಂತರಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬಿಐಎಎಲ್ ಭರವಸೆ ನೀಡಿದೆ.

  • ನೀವು ಸೆಪ್ಟೆಂಬರ್ 12 ರಂದು BLR ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಪ್ರಯಾಣ ಮಾಡುತ್ತಿದ್ದೀರಾ ಅಥವಾ ಬಂದಿಳಿಯಲಿದ್ದೀರಾ?
    ಸೆಪ್ಟೆಂಬರ್ 12, 2023 ಬೆಳಿಗ್ಗೆ10:45 ರ ನಂತರ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ (ಆಗಮನ ಮತ್ತು ನಿರ್ಗಮನ) ಟರ್ಮಿನಲ್ 2 ರಿಂದ ಪ್ರಾರಂಭವಾಗುತ್ತದೆ.
    ಆರಂಭಿಕ ವೇಳಾಪಟ್ಟಿಯನ್ನು ಗಮನಿಸಿ ಮತ್ತು… pic.twitter.com/79SWIC0VfX

    — BLR Airport (@BLRAirport) September 11, 2023 " class="align-text-top noRightClick twitterSection" data=" ">

ಅತ್ಯಾಕರ್ಷಕವಾಗಿದೆ ಟರ್ಮಿನಲ್ 2: ಈ ಟರ್ಮಿನಲ್ ಅನ್ನು ಉದ್ಯಾನವನದಂತೆ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ರೂಪುಗೊಂಡಿದೆ. ಇಲ್ಲಿ ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್‌ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಟರ್ಮಿನಲ್‌ನಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣಸಿಗುತ್ತದೆ.

  • ಉದ್ಯಾನ, ಸುಸ್ಥಿರತೆ, ಕಲೆ ಮತ್ತು ತಂತ್ರಜ್ಞಾನ ಎಂಬ ನಾಲ್ಕು ಸ್ತಂಭಗಳಿಂದ ಪ್ರೇರಿತವಾಗಿರುವ BLR ವಿಮಾನ ನಿಲ್ದಾಣದ ಟರ್ಮಿನಲ್ 2 ರ ಮೂಲಕ ಪ್ರಯಾಣಿಸಿ.
    ನೀವು ಹಿಂದೆಂದೂ ನೋಡಿರದ ಅದ್ಬುತ ತಾಣದ ಅನುಭವಪಡೆಯುವಿರಿ.
    ಸಹಾಯಕ್ಕಾಗಿ ಗ್ರಾಹಕ ಸೌಲಭ್ಯ ಕೇಂದ್ರವನ್ನು ಸಂಪರ್ಕಿಸಿ - +91-8884998888 (ವಾಟ್ಸ್ ಆಪ್ ಮಾತ್ರ) ಹಾಗೂ… pic.twitter.com/crxasCQOVa

    — BLR Airport (@BLRAirport) September 9, 2023 " class="align-text-top noRightClick twitterSection" data=" ">

ಕರ್ನಾಟಕದ ಶ್ರೀಮಂತ ಪರಂಪರೆಯ ಅನಾವರಣ: ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್‌ನಲ್ಲಿ ವ್ಯಾಪಕವಾಗಿ ಬಿದಿರು ಬಳಸಲಾಗಿದೆ. ಒಟ್ಟು 923 ಕಿ.ಮೀ ಉದ್ದದಷ್ಟು ಬಿದಿರು ಬಳಕೆಯಾಗಿದೆ. ಇದೇ ಮೊದಲ ಬಾರಿಗೆ ಇಂಜಿನಿಯರುಗಳು​ ಬಿದಿರು ಬಳಸಿದ್ದು ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳ್ವಿಕೆ ಬರುತ್ತದೆ.

ಫೋಲಿ ಡಿಸೈನ್‌, ಗುಂಡುರಾಜು ಕಲಾಕೃತಿ: ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್‌ ಚೋನಾಟ್‌ ಅವರ ಬೋರ್ಡಿಂಗ್‌ ಪಿಯರ್‌ ಕಲಾಕೃತಿ, ಬಿದ್ರಿ ಕ್ರಾಫ್ಟ್‌ ಗಾಥಾ ಮತ್ತು ಎಂ.ಎ.ರೌಫ್‌ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್‌ ಮತ್ತು ಗುಂಡುರಾಜು ಅವರ ಕಲಾಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: ಬೆಂಗಳೂರು: ತಾಂತ್ರಿಕ ಕಾರಣಗಳಿಂದ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮುಂದೂಡಿಕೆ

Last Updated :Sep 12, 2023, 10:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.