ETV Bharat / state

ಪೆಟ್ರೋಲ್​ ಸುರಿದುಕೊಂಡು ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ದಂಪತಿ ವಿರುದ್ಧ ಎಫ್ಐಆರ್

author img

By

Published : Oct 12, 2022, 7:48 PM IST

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಬೆಂಗಳೂರಿನ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ‌.

fir-against-couple-for-obstructing-rajakaluve-clearing-operation
ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ದಂಪತಿ ವಿರುದ್ಧ ಎಫ್ಐಆರ್

ಬೆಂಗಳೂರು: ರಾಜಕಾಲುವೆ ಮೇಲೆ‌ ಮನೆ ಕಟ್ಟಿದ ಆರೋಪದ ಹಿನ್ನೆಲೆಯಲ್ಲಿ ಮನೆ ಕೆಡವಲು ಮುಂದಾಗಿದ್ದ ಬಿಬಿಎಂಪಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ದಂಪತಿ ವಿರುದ್ಧ ಕೆಆರ್‌ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಬಿಬಿಎಂಪಿ ಎಇಇ ನೀಡಿದ ದೂರಿನ ಮೇರೆಗೆ ಸುನಿಲ್ ಸಿಂಗ್ ಹಾಗೂ ಪತ್ನಿ ಸೋನಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಬಿಎಂಪಿ ಎಇಇ ಶ್ರೀಲಕ್ಷ್ಮಿ ಎಂಬುವರು ನೀಡಿದ ದೂರು ಆಧರಿಸಿ ದಂಪತಿ ವಿರುದ್ಧ ಐಪಿಸಿ ಸೆಕ್ಷನ್ 353 - ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, 309 - ಆತ್ಮಹತ್ಯೆ ಯತ್ನ ಹಾಗೂ 506 - ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಮುಂದಾದಾಗ ಸುನಿಲ್ ಸಿಂಗ್ ದಂಪತಿ ವಿರೋಧಿಸಿ ಮನೆ ಕಾಂಪೌಂಡ್ ಮೇಲೆ‌ ನಿಂತು ಪೆಟ್ರೋಲ್‌ ಸುರಿದುಕೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರು. ಕಳೆದ‌ 20 ವರ್ಷಗಳ ಹಿಂದೆ ಮನೆ‌ ಕಟ್ಟಲಾಗಿದ್ದು, ಆಗಿಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು? ಮನೆ ಮೇಲೆ‌ 20 ಲಕ್ಷ ಲೋನ್ ಬಾಕಿಯಿದೆ‌. ಯಾವುದೇ ಕಾರಣಕ್ಕೂ ಮನೆ ಕೆಡವಲು ಬಿಡುವುದಿಲ್ಲ ಎಂದು‌ ಪಟ್ಟು ಹಿಡಿದಿದ್ದರು.

ಬಿಬಿಎಂಪಿ ಅಧಿಕಾರಿಗಳು ಹಲವು ಬಾರಿ ಮನವೊಲಿಸಿ ತಿಳಿವಳಿಕೆ ಮೂಡಿಸಿದರೂ ಪಟ್ಟು ಬಿಡದಿದ್ದರಿಂದ ಎಇಇ ಲಕ್ಷ್ಮೀ, ದಂಪತಿ ವಿರುದ್ಧ ಕೆ.ಆರ್‌‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ನೋಟಿಸ್ ನೀಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಕೆಆರ್ ಪುರದಲ್ಲಿ ತೆರವು ಕಾರ್ಯಾಚರಣೆ.. ಪೆಟ್ರೋಲ್​​ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿದ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.