ETV Bharat / state

ನಿಮ್ಹಾನ್ಸ್​​ನಲ್ಲಿದೆ 32 ಜಿಲ್ಲಾ ಕೋ ಆರ್ಡಿನೇಟರ್​ ಹುದ್ದೆ: ಪದವಿ ಆಗಿದ್ರೆ ಸಾಕು

author img

By ETV Bharat Karnataka Team

Published : Nov 9, 2023, 4:40 PM IST

Jobs in Nimhans: ಕನ್ನಡವನ್ನು ಚೆನ್ನಾಗಿ ಓದಲು, ಬರೆಯಲು ಮತ್ತು ಮಾತನಾಡುವ ಸಾಮರ್ಥ್ಯ ಹೊಂದಿರುವ ಪದವಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

District Co Ordinator job notification form NIMHANS
District Co Ordinator job notification form NIMHANS

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ- ನಿಮ್ಹಾನ್ಸ್​ (NIMHANS)ನಲ್ಲಿ ಜಿಲ್ಲಾ ಕೋ ಆರ್ಡಿನೇಟರ್​ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 32 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನೇಮಕಾತಿಗೆ ಮಾಡಲಾಗುವುದು. ಅಭ್ಯರ್ಥಿಗಳು ಕಾರ್ಯಕ್ಷಮತೆ ಆಧಾರದ ಮೇಲೆ ಈ ಹುದ್ದೆ ವಿಸ್ತರಣೆ ನಡೆಸಲಾಗುವುದು. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ನಿಮ್ಹಾನ್ಸ್​ನಲ್ಲಿ ಕರ್ನಾಟಕ ಸರ್ಕಾರ ಅನುದಾನಿತ ಯೋಜನೆ ಕರ್ನಾಟಕ ಬ್ರೈನ್​ ಹೆಲ್ತ್​​ ಇನ್ಷಿಯೆಟಿವ್​ ಯೋಜನೆಗೆ 32 ಜಿಲ್ಲಾ ಕೋ ಆರ್ಡಿನೇಟರ್​ ಹುದ್ದೆ ಭರ್ತಿ ನಡೆಸಲಾಗುವುದು

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜೀವ ವಿಜ್ಞಾನ, ಸಾರ್ವಜನಿಕ ಆರೋಗ್ಯ, ಸಮಾಜಶಾಸ್ತ್ರ, ಗ್ರಾಮೀಣಾಭಿವೃದ್ದಿ, ಅರ್ಥಶಾಸ್ತ್ರ, ಮಾನವ ಸಂಪನ್ಮೂಲ, ಸೋಶಿಯಲ್​ ವರ್ಕ್​, ಸೈಕಾಲಜಿಲ್ಲಿ ಮೊದಲ ದರ್ಜೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣ ಮಾಡಿರಬೇಕು.

ಕನ್ನಡವನ್ನು ಚೆನ್ನಾಗಿ ಓದಲು ಮತ್ತು ಬರೆಯಲು, ಮಾತನಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಈಗಾಗಲೇ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ ಹುದ್ದೆ ನಿರ್ವಹಣೆ ಮಾಡಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ವೇತನ: ಈ ಹುದ್ದೆಗೆ ಮಾಸಿಕ 35 ಸಾವಿರ ವೇತನವನ್ನು ನಿಗದಿಪಡಿಸಲಾಗಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 45 ವರ್ಷ ಆಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ವಾಕ್​ ಇನ್​ ಇಂಟರ್​ವ್ಯೂ ಮೂಲಕ ನೇಮಕಾತಿ ಮಾಡಲಾಗುವುದು.

ವಾಕ್​ ಇನ್​ ಇಂಟರ್​ವ್ಯೂ ಅನ್ನು ನವೆಂಬರ್​ 17ರಂದು ಬೆಳಗ್ಗೆ 10.30ಕ್ಕೆ ನಡೆಸಲಾಗುವುದು. ಇಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ನಡೆಸಲಾಗುವುದು. ಇದರ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು

ನೇರ ಸಂದರ್ಶನದ ಸ್ಥಳ: ಲೆಕ್ಚರ್​ ಹಾಲ್​ 1, ಅಡ್ಮಿನ್​ ಬ್ಲಾಕ್​ 1ನೇ ಮಹಡಿ, ನಿಮ್ಹಾನ್ಸ್​, ಬೆಂಗಳೂರು 560029.

ಈ ಹುದ್ದೆಯ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸಿವಿ, ಶೈಕ್ಷಣಿಯ ಪ್ರಮಾಣ ಪತ್ರ, ಅನುಭವದ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬೇಕಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು nimhans.ac.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಕೆಎಂಎಫ್​ ನೇಮಕಾತಿ; 64 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.