ETV Bharat / state

ದೇವನಹಳ್ಳಿ- ನಲ್ಲೂರು ಟೋಲ್​ ಸಂಗ್ರಹ ನ. 17ರಿಂದ ಪ್ರಾರಂಭ; ಯಾವ ವಾಹನಕ್ಕೆ ಎಷ್ಟು ಸುಂಕ?

author img

By ETV Bharat Karnataka Team

Published : Nov 11, 2023, 12:58 PM IST

ದೇವನಹಳ್ಳಿ ನಲ್ಲೂರು ಟೋಲ್​ ಸುಂಕ ಸಂಗ್ರಹ
ದೇವನಹಳ್ಳಿ ನಲ್ಲೂರು ಟೋಲ್​ ಸುಂಕ ಸಂಗ್ರಹ

ದೇವನಹಳ್ಳಿ ನಲ್ಲೂರು ಟೋಲ್ ಸುಂಕ ಸಂಗ್ರಹ ನವೆಂಬರ್ 17ರಿಂದ ಪ್ರಾರಂಭವಾಗಲಿದೆ.

ದೇವನಹಳ್ಳಿ: ದಾಬಸ್ ಪೇಟೆ–ಹೊಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಇನ್ನೇನು ಪೂರ್ಣಗೊಳ್ಳಲಿದ್ದು, ದೊಡ್ಡಬಳ್ಳಾಪುರ ಬೈಪಾಸ್ ನಿಂದ ನಲ್ಲೂರು ಟೋಲ್ ವರೆಗಿನ 34.15 ಕಿ.ಮೀಗೆ ಟೋಲ್ ಸುಂಕ ವಸೂಲಿ ಪ್ರಾರಂಭವಾಗಲಿದೆ. ನವೆಂಬರ್ 17ರಿಂದ ಟೋಲ್ ಸುಂಕ ಸಂಗ್ರಹ ಪ್ರಾರಂಭವಾಗಲಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದಾಬಸ್ ಪೇಟೆ-ಹೊಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 648ರ ನಾಲ್ಕು ಪಥದ ರಸ್ತೆಯ ಕಾಮಗಾರಿಯು ಬಹುತೇಕ ಪೂರ್ಣವಾಗಿದೆ. ಈ ಹೆದ್ದಾರಿಯ ನಿರ್ಮಾಣದಿಂದ ಬೆಂಗಳೂರು ನಗರ ಒಳ ಬರುವ ವಾಹನಗಳಿಗೆ ಬ್ರೇಕ್ ಬೀಳಲಿದೆ. ಇದರಿಂದ ನಗರದ ಟ್ರಾಫಿಕ್ ಸಮಸ್ಯೆ ಕೂಡ ಬಗೆ ಹರಿಯುವುದು ಜತೆಗೆ ಬೆಂಗಳೂರು ನಗರದ ಹೊರವರ್ತುಲ ರಸ್ತೆಯಾಗಿ ಇದು ಬಳಕೆಯಾಗಲಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. ದೊಡ್ಡಬಳ್ಳಾಪುರ ಬೈಪಾಸ್ ನಿಂದ ನಲ್ಲೂರು ಗ್ರಾಮದ ವರೆಗಿನ ರಸ್ತೆ ಪೂರ್ಣಗೊಂಡಿದೆ.

ಟೋಲ್​ ಸುಂಕ
ಟೋಲ್​ ಸುಂಕ

ನವೆಂಬರ್ 17 ರಿಂದ ಸುಂಕ ವಸೂಲಿ ಪ್ರಾರಂಭವಾಗಲಿದೆ, 34.15 ಕಿ.ಮೀ ಪ್ರಯಾಣಕ್ಕೆ ವಾಹನ ಸವಾರರು ಟೋಲ್ ಸುಂಕ ಪಾವತಿ ಮಾಡಬೇಕಿದೆ, ನೂತನ ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ದಿನಾಂಕ 01-01-2023 ರಿಂದ 31-03-2024ರ ವರೆಗೆ ಟೋಲ್ ದರಪಟ್ಟಿ ಜಾರಿಯಲ್ಲಿರುವುದು.

  • ಕಾರು, ಜೀಪು, ವ್ಯಾನು, ಲಘು ಮೋಟಾರು ವಾಹನ ಏಕಮುಖ ಸಂಚಾರಕ್ಕೆ ₹70, ಅದೇ ದಿನ ಮರಳಿ ಬಂದರೆ ₹105 ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ ₹2,375 ರೂಪಾಯಿ ಇರಲಿದೆ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ ₹35 ಆಗಿರಲಿದೆ.
  • ಲಘು ವಾಣಿಜ್ಯ ಮತ್ತು ಸರಕು ವಾಹನಗಳು, ಮಿನಿ ಬಸ್​, ಏಕಮುಖ ಸಂಚಾರಕ್ಕೆ ₹115, ಅದೇ ದಿನ ಮರಳಿ ಬಂದರೆ ₹175, ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ ₹3,835 ಇರಲಿದೆ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ 60 ರೂಪಾಯಿ ಆಗಿರಲಿದೆ.
  • ಎರಡು ಅಕ್ಸೆಲ್​ಗಳ ಬಸ್​, ಟ್ರಕ್​ಗಳ ಏಕಮುಖ ಸಂಚಾರಕ್ಕೆ ₹240, ಅದೇ ದಿನ ಮರಳಿ ಬಂದರೆ ₹360 ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ ₹8,040 ಇರಲಿದೆ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ ₹120 ರೂಪಾಯಿ ಆಗಿರಲಿದೆ.
  • ಮೂರು ಅಕ್ಸೆಲ್​ ವಾಣಿಜ್ಯ ವಾಹನಗಳು ಏಕಮುಖ ಸಂಚಾರಕ್ಕೆ ₹265, ಅದೇ ದಿನ ಮರಳಿ ಬಂದರೆ ₹395, ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ ₹8,870 ಇರಲಿದೆ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ ₹130 ರೂಪಾಯಿ ಆಗಿರಲಿದೆ. ​
  • 4ರಿಂದ 6 ಆಕ್ಸೆಲ್​​ಗಳ ವಾಹನಗಳ ಏಕಮುಖ ಸಂಚಾರಕ್ಕೆ ₹380, ಅದೇ ದಿನ ಮರಳಿ ಬಂದರೆ ₹565, ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ ₹12,605 ಇರಲಿದೆ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ ₹190 ರೂಪಾಯಿ ಇರಲಿದೆ. ​
  • 7 ಅಥವಾ ಅದಕ್ಕೂ ಹೆಚ್ಚಿನ ಆಕ್ಸೆಲ್​ ವಾಹನಗಳ ಏಕಮುಖ ಸಂಚಾರಕ್ಕೆ ₹460, ಅದೇ ದಿನ ಮರಳಿ ಬಂದರೆ ₹690, ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ ₹15,345 ಇರಲಿದೆ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ ₹230 ರೂಪಾಯಿ ಆಗಿರಲಿದೆ. ​

ಇದನ್ನೂ ಓದಿ: Barrier Less Tolling: ಬರಲಿದೆ ತಡೆರಹಿತ ಟೋಲಿಂಗ್; ಅರ್ಧ ನಿಮಿಷವೂ ಕಾಯದೆ ಸಾಗಬಹುದು ಮುಂದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.