ETV Bharat / state

ರಾಜ್ಯದಲ್ಲಿಂದು 1,073 ಮಂದಿಗೆ ಕೋವಿಡ್‌ ಸೋಂಕು ದೃಢ, ಒಂದು ಸಾವು

author img

By

Published : Jul 1, 2022, 10:13 PM IST

ರಾಜ್ಯದ ಇಂದಿನ ಕೋವಿಡ್ ಬುಲೆಟಿನ್ ಹೀಗಿದೆ..

ಕೊರೊನಾ
ಕೊರೊನಾ

ಬೆಂಗಳೂರು: ರಾಜ್ಯದಲ್ಲಿಂದು 25,587 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,046 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 834 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟು 39,24,232 ಮಂದಿ ಗುಣಮುಖರಾಗಿದ್ದಾರೆ.

ಇಂದು ಕೋವಿಡ್​ಗೆ ಒಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು ಸಂಖ್ಯೆ 6,134. ಸೋಂಕಿತರ ಪ್ರಮಾಣ ಶೇ. 4.19 ರಷ್ಟಿದೆ. ವಾರದ ಸೋಂಕಿತರ ಪ್ರಮಾಣ ಶೇ. 3.67 ಇದೆ. ಇಲ್ಲಿಯವರೆಗೂ ಪರೀಕ್ಷಿಸಲಾದ ಒಟ್ಟು ಸಂಖ್ಯೆ 6,70,13,873. ವಾರದ ಸಾವಿನ ಪ್ರಮಾಣ ಶೇ. 0.05 ರಷ್ಟಿದೆ.

ವಿಮಾನ ನಿಲ್ದಾಣದಿಂದ ಇಂದು ತಪಾಸಣೆಗೆ 4,828 ಮಂದಿ ಒಳಗಾಗಿದ್ದಾರೆ. ಇದುವರೆಗೂ 11,41,788 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೋವಿಡ್ ಸಂಖ್ಯೆ ಸಾವಿರ ಗಡಿ ದಾಟಿದೆ.

ನಗರದಲ್ಲಿ 1,008 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,05099 ಕ್ಕೇರಿದೆ. 770 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 17,82,315 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಇಂದು ಒಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 5,814 ಇದೆ. ಇದುವರೆಗೂ ಕೋವಿಡ್ ಸಾವಿನ ಸಂಖ್ಯೆ 16,969 ರಷ್ಟಿದೆ.

ಇದನ್ನೂ ಓದಿ: ಸಫಾಯಿ ಕರ್ಮಚಾರಿಗಳಿಂದ ಫ್ರೀಡಂ ಪಾರ್ಕ್​ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.