ETV Bharat / state

ಅನುದಾನ, ಜಿಎಸ್​ಟಿ ಪಾಲು ತರುವಲ್ಲಿ ರಾಜ್ಯ ಸರ್ಕಾರ ವಿಫಲ ಆರೋಪ: ಕಾಂಗ್ರೆಸ್​​​​​​​ ಕಿಡಿ

author img

By

Published : Feb 22, 2020, 3:38 PM IST

6 ತಿಂಗಳಿನಿಂದ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ವಿವಿಧ ಯೋಜನೆಗಳ ಅನುದಾನ ಹಾಗೂ ಜಿಎಸ್​ಟಿ ಪಾಲು ಬಂದಿಲ್ಲ. ರಾಜ್ಯ ಸರ್ಕಾರ ಇವುಗಳನ್ನು ತರುವಲ್ಲಿ ವಿಫಲವಾಗಿದೆ. ಇದು ರಾಜ್ಯದ ಜನತೆಗೆ ಮಾಡುವ ಅನ್ಯಾಯ ಎಂದು ಕಾಂಗ್ರೆಸ್​ ತನ್ನ ಟ್ವಿಟರ್​ನಲ್ಲಿ ಕಿಡಿಕಾರಿದೆ.

Congress tweet against BJP
ಸಿಎಂ ಬಿಎಸ್​ವೈ ವಿರುದ್ಧ ಕಾಂಗ್ರೆಸ್​ ಕಿಡಿ

ಬೆಂಗಳೂರು: 6 ತಿಂಗಳಿನಿಂದ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ವಿವಿಧ ಯೋಜನೆಗಳ ಅನುದಾನ ಹಾಗೂ ಜಿಎಸ್​ಟಿ ಪಾಲು ಬಂದಿಲ್ಲ. ರಾಜ್ಯ ಸರ್ಕಾರ ಇವುಗಳನ್ನು ತರುವಲ್ಲಿ ವಿಫಲವಾಗಿದೆ. ಇದು ರಾಜ್ಯದ ಜನತೆಗೆ ಮಾಡುವ ಅನ್ಯಾಯ ಎಂದು ಕಾಂಗ್ರೆಸ್​ ತನ್ನ ಟ್ವಿಟರ್​ನಲ್ಲಿ ಕಿಡಿಕಾರಿದೆ.

Congress tweet against BJP
ಕಾಂಗ್ರೆಸ್ ಟ್ವೀಟ್​

ಬಿಎಸ್​ವೈ ಅವರೇ ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸದಿರಿ. ಬಿಎಸ್​ವೈ ಸರ್ಕಾರ ರಾಜ್ಯದಲ್ಲಿ ಬದುಕಿದೆಯಾ? ಎಂದು ಕಟುವಾಗಿ ಟೀಕಿಸಿದೆ.

ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರವಿದೆ. ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯಗಳಲ್ಲಿ ಉಳಿಸಿಕೊಳ್ಳಲಾಗಿದೆ. ಅಭಿವೃದ್ಧಿ ಮಾಯವಾಗಿದೆ, ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ. 41 ಇಲಾಖೆಗಳ 1.07 ಲಕ್ಷ ಕಡತಗಳು ವಿಲೇವಾರಿ ಆಗದೆ ಉಳಿದಿರುವುದೇಕೆ? ಎಂದು ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಯನ್ನು ಲಗತ್ತಿಸಿ ಸರ್ಕಾರವನ್ನು ಪ್ರಶ್ನಿಸುವ ಕಾರ್ಯ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.