ETV Bharat / state

ರಾಯಪುರ ಅಧಿವೇಶನ ಕಾಂಗ್ರೆಸ್ ಪಕ್ಷಕ್ಕೆ ಹೊಸ ದಿಕ್ಕು ನೀಡುತ್ತಿದೆ: ಡಿಕೆಶಿ ಬಣ್ಣನೆ

author img

By

Published : Feb 27, 2023, 12:21 PM IST

congress-raipur-meet-gives-new-direction-to-party-dk-shivakumar
ರಾಯಪುರ ಅಧಿವೇಶನ ಕಾಂಗ್ರೆಸ್ ಪಕ್ಷಕ್ಕೆ ಹೊಸ ದಿಕ್ಕು ಕೊಡುತ್ತಿದೆ: ಡಿಕೆಶಿ

ರಾಯಪುರ ಕಾಂಗ್ರೆಸ್ ಅಧಿವೇಶನದಲ್ಲಿ ರಾಷ್ಟ್ರದ ಪಾಲಿಸಿ ಹೇಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ರಾಜ್ಯಕ್ಕೆ ಕಾಂಗ್ರೆಸ್​​ ಹೈಕಮಾಂಡ್ ನಾಯಕರು ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ರಾಯಪುರ ಅಧಿವೇಶನವು ಕಾಂಗ್ರೆಸ್ ಪಕ್ಷಕ್ಕೆ ಹೊಸ ದಿಕ್ಕು ಕೊಡುತ್ತಿದೆ. ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೇಗೆ ಮುನ್ನಡೆಯಬೇಕು. 2024ರ ಚುನಾವಣೆಗೆ ಹೇಗೆ ತಯಾರಿ ಆಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ರಾಯಪುರ ಕಾಂಗ್ರೆಸ್ ಮಹಾಧಿವೇಶನ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆ ವೇಳೆ ತೆಗೆದುಕೊಂಡ ತೀರ್ಮಾನ ಅನುಷ್ಠಾನ ಮಾಡುವುದರ ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಆದರೆ, ಕರ್ನಾಟಕದ ವಿಚಾರ ಚರ್ಚೆ ಆಗಿಲ್ಲ. ರಾಷ್ಟ್ರದ ಪಾಲಿಸಿ ಹೇಗಿರಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆದಿದೆ. ಹೈಕಮಾಂಡ್ ನಾಯಕರು ರಾಜ್ಯ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಮೂರ್ನಾಲ್ಕು ದಿನದಲ್ಲಿ ಯಾರು ಬರುತ್ತಾರೆಂಬ ಬಗ್ಗೆ ತಿಳಿಸುತ್ತೇವೆ ಎಂದರು.

ರಾಜ್ಯದಲ್ಲಿ ಮುಂದೆ ನಾವು ಆಡಳಿತ ಮಾಡಲಿದ್ದೇವೆ. ಹಾಗಾಗಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ ಬಂದು ಆಡಳಿತ ಮಾಡುವುದಿಲ್ಲ. ಮೋದಿ, ಅಮಿತ್ ಶಾ ಪಂಚಾಯಿತಿ, ತಾಲೂಕು, ಜಿಲ್ಲೆಗಳಿಗೆ ಪ್ರಚಾರಕ್ಕೆ ಬಂದು ಹೋಗಲಿ. ಡಬಲ್ ಇಂಜಿನ್ ಇದೆ, ಎಲ್ಲಿ ಬೇಕಾದರೂ ಗಾಡಿ ಓಡಿಸಲಿ ಎಂದು ಪದೇ ಪದೆ ಮೋದಿ, ಅಮಿತ್ ಶಾ‌ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು.

ಶಾಸಕ ಜಮೀರ್​ ಅಹಮದ್​ ಸ್ಪಷ್ಟನೆ : ಚಾಮರಾಜಪೇಟೆಯಲ್ಲಿ ವಿದೇಶಿ ಕರೆನ್ಸಿ ಹಂಚಿದ ವಿಚಾರವಾಗಿ ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿದ್ದು, ಆಶಾ ಕಾರ್ಯಕರ್ತೆಯರು ಉಮ್ರಾಗೆ ಹೋಗುತ್ತಿದ್ದರು. ಅವರಿಗೆ ತಲಾ 12 ಸಾವಿರ ನೀಡಿದ್ದೇನೆ. ಸೌದಿಯಲ್ಲಿ 500 ರಿಯಲ್ ಆಗುತ್ತೆ. ಅಲ್ಲಿ ಹೋಗಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ನೋಟು ಹಂಚಿದ್ದು, ಕಾನೂನು ತೊಡಕು ಏನು ಆಗಲ್ಲ. ನಾನು ಅದರ ವಿವರಣೆ ಕೊಟ್ಟು ಕಳುಹಿಸಿದ್ದೇನೆ ಎಂದು ಜಮೀರ್ ಅಹಮದ್​ ಖಾನ್​ ಹೇಳಿದ್ದಾರೆ.

ಜೆಡಿಎಸ್ ಮಿಷನ್ 123 ಬಗ್ಗೆ ಮಾತನಾಡಿದ ಜಮೀರ್​, ಜೆಡಿಎಸ್ ಪಕ್ಷವವರು ಸಂಖ್ಯೆಯನ್ನು ತಪ್ಪಾಗಿ ಸೇರಿಸಿ ಬಿಟ್ಟಿದ್ದಾರೆ. ಅವರು ಗೆಲ್ಲುವುದು 23 ಕ್ಷೇತ್ರ ಮಾತ್ರ. ಯಾರೇ ಆದರೂ ದೇವೇಗೌಡರ ಮನೆಗೆ ಹೋಗುವುದಾದರೆ ಅವರಿಗೆ ಬಹುಮತ ಬರಲ್ಲ ಅಂತ ಅಲ್ವಾ? ಮತ್ತೆ 123 ಮಿಷನ್ ಹೇಗೆ ಆಗುತ್ತೆ? ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದರು.

ರಾಜ್ಯ ಪ್ರವಾಸ ವಿಚಾರ ಮಾತನಾಡಿ, ಜನಾಭಿಪ್ರಾಯ ಈ ಬಾರಿ ನಮ್ಮ ಪರವಾಗಿ ಇದೆ. ಸಿದ್ದರಾಮಯ್ಯ ಕೊಟ್ಟ ಯೋಜನೆ ನೆನೆಯುತ್ತಿದ್ದಾರೆ. ಉಚಿತ ಅಕ್ಕಿ ಕೊಟ್ಟಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾರೆ. 2018ರಲ್ಲಿ ವೋಟ್ ಕೊಡದೇ ತಪ್ಪು ‌ಮಾಡಿದೆವು ಅಂತಿದ್ದಾರೆ. ಈ ಬಾರಿ 120 ಸೀಟ್ ಅಲ್ಲ, 150 ಸೀಟ್ ಬರುವ ನಿರೀಕ್ಷೆ ಇದೆ ಎಂದರು. ಬಿಜೆಪಿಯವರು ವಿಧಾಸೌಧದಲ್ಲಿ ದುಡ್ಡು ತರಿಸಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ದುಡ್ಡು ಮಾಡುವ ಅವಸರ ಇದೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಯತ್ನಾಳ್​ಗೆ ವೋಟ್​ ಹಾಕಲ್ಲ ಎಂದ ಜಮೀರ್​ : ಬಿಜೆಪಿಯವರು ಒಂದೊಂದು ಕ್ಷೇತ್ರದಲ್ಲಿ ನೂರು ಕೋಟಿ ಖರ್ಚು ಮಾಡಿದರೂ ಗೆಲ್ಲುವುದಿಲ್ಲ. ಚುನಾವಣೆಯು ದುಡ್ಡಿನ ಮೇಲೆ ನಡೆಯುವುದಿಲ್ಲ. ಯತ್ನಾಳ್​ಗೆ ಮುಸ್ಲಿಮರು ಯಾರೂ ಸಹ ವೋಟ್​ ಹಾಕಲ್ಲ. ಬಿಜೆಪಿಗೂ ಕೂಡ ಯಾವುದೇ ಮುಸ್ಲಿಮರೂ ಮತ ಚಲಾಯಿಸುವುದಿಲ್ಲ. ಹಾಗಾಗಿ ಆ ಮಾತು ಹೇಳುತ್ತಿದ್ದಾರೆ. ನಾವು ಪ್ರಮಾಣ ವಚನ ಮಾಡಿದಾಗ ಎಲ್ಲ ಸಮುದಾಯವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ ಅಂತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ತಿರುಗೇಟು ನೀಡಿದರು. ಬಿಜೆಪಿಗೆ ರಾಜ್ಯದ ಜನರು ಬಹುಮತ ನೀಡಿಲ್ಲ. ಕಳೆದ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಮೋದಿ, ಅಮಿತ್ ಶಾ ಬಂದರೂ ಕೇವಲ 104 ಸ್ಥಾನ ಗೆದ್ದರು. ಈ ಬಾರಿ ಕೂಡ ರಾಜ್ಯಕ್ಕೆ ಯಾರೇ ಬಂದರೂ ಏನೂ ನಡೆಯುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಕರೆನ್ಸಿ ನೀಡಿದ ಶಾಸಕ ಜಮೀರ್ ಅಹ್ಮದ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.