ETV Bharat / state

ಚಂದ್ರಯಾನ-3.. ಹೇಗೆಲ್ಲಾ ಕಾರ್ಯ ಯೋಜನೆ ರೂಪುಗೊಳ್ಳುತ್ತದೆ?

author img

By

Published : Jan 1, 2020, 6:23 PM IST

ಚಂದ್ರಯಾನ 3,  Complete information on Chandrayaan 3
ಚಂದ್ರಯಾನ 3

ಚಂದ್ರಯಾನ-3ರ ವೆಚ್ಚ 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 250 ಕೋಟಿ ರೂಪಾಯಿ ರೋವರ್ ಹಾಗೂ ಉಡಾವಣಾ ವೆಚ್ಚಕ್ಕೆ 315 ಕೋಟಿ ರೂಪಾಯಿ ತಗುಲಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ ಸಿವನ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು: 2020ರ ಮೊದಲ ದಿನವೇ ಇಸ್ರೋ ತನ್ನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದೇಶಕ್ಕೆ ಸಂತಸದ ವಿಷಯ ತಿಳಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ ಸಿವನ್, 2020ಕ್ಕೆ 25ಕ್ಕೂ ಹೆಚ್ಚು ಬಾಹ್ಯಾಕಾಶ ಉಡಾವಣೆಗಳು ಇವೆ. ಕೇಂದ್ರ ಸರ್ಕಾರ ಚಂದ್ರಯಾನ- 3ಕ್ಕೆ ಸಮ್ಮತಿ ನೀಡಿದೆ. ಚಂದ್ರಯಾನ-3ರ ವೆಚ್ಚ 600 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ಕೇಂದ್ರ ಹಸಿರು ನಿಶಾನೆ: ಇಸ್ರೋ ಸಂಸ್ಥೆ ಈಗಾಗಲೇ ಚಂದ್ರಯಾನ-3ರ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಾಜೆಕ್ಟ್ ನಿರ್ದೇಶಕರಾಗಿ ವೀರ ಮುತ್ತುವೇಲು ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ಚಂದ್ರಯಾನ-3ರ ವೆಚ್ಚ 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 250 ಕೋಟಿ ರೂ. ರೋವರ್ ಹಾಗೂ ಉಡಾವಣಾ ವೆಚ್ಚಕ್ಕೆ 315 ಕೋಟಿ ರೂಪಾಯಿಗೆ ತಗುಲಲಿದೆ ಎಂದು ವಿವರಿಸಿದರು.

2020ರ ನವೆಂಬರ್ ರಂದು ನಮ್ಮ ಆಂತರಿಕ ಗುರಿ ಇದೆ. ಆ ಸಮಯಕ್ಕೆ ಸಾಧ್ಯವಾಗದಿದ್ದರೆ 2021ಕ್ಕೆ ಚಂದ್ರಯಾನ-3 ಉಡಾವಣೆ ಮಾಡಲಾಗುವುದು. ಚಂದ್ರಯಾನ-2ರಲ್ಲಿ ಇದ್ದ ಆರ್ಬಿಟರ್​ ಅನ್ನು ಚಂದ್ರಯಾನ-3ಕ್ಕೆ ಬಳಿಸಲಾಗುವುದು. ಚಂದ್ರಯಾನ-3ರಲ್ಲಿ ಕೇವಲ ರೋವರ್ ಹಾಗೂ ಲ್ಯಾಂಡರ್​​​ ಇರುತ್ತದೆ ಎಂದು ಇವರು ವಿವರಿಸಿದರು.

ಚಂದ್ರಯಾನ-2 ಮಾಡಬೇಕಿದ್ದ ಪ್ರಯೋಗವನ್ನು ಚಂದ್ರಯಾನ-3 ಮಾಡಲಿದೆ. ಚಂದ್ರಯಾನ-2ರ ಯೋಜನೆಯಂತೆ ವಿಕ್ರಂ ಲ್ಯಾಂಡರ್​ ಅಂದ್ಕೊಂಡಂತೆ ಕೊನೆ ಹಂತದಲ್ಲಿ ಸೇಫ್‌ ಆಗಿ ಇಳಿಯಲಿಲ್ಲ. ಈ ಕಾರಣದಿಂದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಉಡಾವಣೆ ಮಾಡಲಾಗುವುದು ಎಂದರು.

ಇಸ್ರೋ ಸಂಸ್ಥೆ ತಪ್ಪುಗಳಿಂದ ಪಾಠ ಕಲಿಯುತ್ತದೆ. ಹೀಗಾಗಿ ನಾವು ಚಂದ್ರಯಾನ-3ನ್ನ ಹೆಚ್ಚು ಯಾಂತ್ರೀಕೃತ ಮಾಡುತ್ತೇವೆ. ಇಸ್ರೋ ಸಂಸ್ಥೆ ಸದಾಕಾಲ ಪಾರದರ್ಶಕವಾಗಿ ನಡೆದುಕೊಳ್ಳುತ್ತದೆ. ಚಂದ್ರಯಾನ-2ರ ಬಿರುಸಾದ ತಿಳುವಳಿಕೆ ಚಿತ್ರವನ್ನು ಬಿಡುಗಡೆ ಮಾಡಿದ ಹುಡುಗನಿಗೆ ಶುಭಾಶಯ ಕೋರುತ್ತೇನೆ ಹಾಗೂ ಸಂಸ್ಥೆ ತಂತ್ರಗಾರಿಕೆ ದೃಷ್ಟಿಯಿಂದ ಆ ಚಿತ್ರಗಳನ್ನು ಬಿಡುಗಡೆ ಮಾಡಲಿಲ್ಲ ಎಂದು ಇಸ್ರೋ ಮುಖ್ಯಸ್ಥ ಚಿತ್ರದ ಬಿಡುಗಡೆಯ ವಿಷಯದ ಬಗ್ಗೆ ಸಮರ್ಥನೆ ನೀಡಿದರು.

ಇಸ್ರೋ ನಿರ್ಮಿತ ಸ್ಥಳ ಆಧಾರಿತ ಸೇವೆ: ನಾವಿಕ್ ಯೋಜನೆ ಬಗ್ಗೆ ವಿವರಿಸಿದ ಇಸ್ರೋ ಮುಖ್ಯಸ್ಥ, ಇನ್ನೂ ಕೆಲ ದಿನಗಳಲ್ಲಿ ಮೊಬೈಲ್ ಫೋನ್​ಗಳಲ್ಲಿ ನಾವಿಕ್ ಸೇವೆ ಪ್ರಾರಂಭವಾಗಲಿದೆ. ಈಗಾಗಲೇ ಕ್ವಾಲ್ ಕಾಮ್ ಸಂಸ್ಥೆ ಇಸ್ರೋ ಜೊತೆ ಕೈಜೋಡಿಸಲಿದೆ. ಜೊತೆಗೆ ಕ್ಷಿಯೋಮಿ (xiaomi) ಫೋನ್ ತಯಾರಕರು ಮುಂದೆ ಬಿಡುಗಡೆ ಮಾಡುವ ಫೋನ್​ಗಳಲ್ಲಿ ನಾವಿಕ್ ಚಿಪ್​ಗಳನ್ನು ಅಳವಡಿಸುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ವಿವರಿಸಿದರು. ನಾವಿಕ್ ಸೇವೆಗಳು ಕೇವಲ ಭಾರತದಲ್ಲಿ ಮಾತ್ರ ಲಭ್ಯವಿದ್ದು, ಈ ಸೇವೆ ಜಿಪಿಎಸ್ ಸೇವೆಗೆ ಪರ್ಯಾಯವಾಗಲಿದೆ.

4 ಬಾಹ್ಯಾಕಾಶ ಯಾತ್ರಿಗಳ ಆಯ್ಕೆ: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಕಾರ್ಯ ಪ್ರಾರಂಭವಾಗಿದೆ. 4 ಗಗನಯಾತ್ರಿಗಳನ್ನು ಭಾರತೀಯ ವಾಯುಪಡೆಯಿಂದ ಇಸ್ರೋ ಆಯ್ಕೆ ಮಾಡಿದೆ. ಆಯ್ಕೆ ಮಾಡಿದ ನಾಲ್ಕು ಗಗನಯಾತ್ರಿಗಳ ಮೊದಲ ಹಂತದ ಆರೋಗ್ಯ ತಪಾಸಣೆ ಭಾರತದಲ್ಲಿ ಈಗಾಗಲೇ ನಡೆದಿದೆ. ಹೆಚ್ಚಿನ ಆರೋಗ್ಯ ತಪಾಸಣೆಗೆ ಹಾಗೂ ಗಗನಯಾತ್ರೆಯ ತರಬೇತಿಗೆ ರಷ್ಯಾಕ್ಕೆ ಇವರನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ತೂತುಕುಡಿಯಲ್ಲಿ ಉಡಾವಣಾ ಕೇಂದ್ರ: ಇಸ್ರೋ ಸಂಸ್ಥೆ ವಿಸ್ತರಿಸಲು ಈಗಾಗಲೇ ನಿರ್ಧರಿಸಿದ್ದು, ತಮಿಳುನಾಡಿನ ತೂತುಕುಡಿಯಲ್ಲಿ ಲಘು ಉಪಗ್ರಹ ಉಡಾವಣಾ ಕೇಂದ್ರವನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಈಗಾಗಲೇ ಇಸ್ರೋ ಸಂಸ್ಥೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, 2300 ಎಕರೆ ಜಾಗವನ್ನು ಭೂಸ್ವಾಧೀನ ಗೊಳಿಸಲು ನಿರ್ಧರಿಸಿದೆ. ಲಘು ಉಪ ಗ್ರಹಗಳು ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿವೆ. ಇನ್ಮುಂದೆ ಉಪಗ್ರಹಗಳ ಉಡಾವಣೆ ತೂತುಕುಡಿಯಲ್ಲಿ ಆಗಲಿದೆ ಎಂದರು.

ಇಸ್ರೋ ಸಂಸ್ಥೆ ಕೇಂದ್ರ ಸರ್ಕಾರಕ್ಕೆ 2020-21ರ ವಾರ್ಷಿಕ ಆರೋಗ್ಯಕ್ಕಾಗಿ 14,000 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದೆ. ಸಾಮಾನ್ಯವಾಗಿ ಬೇಡಿಕೆಯಿಟ್ಟ ಹಣ ಪೂರ್ಣವಾಗಿ ದೊರಕುವುದಿಲ್ಲ. ಬೇಡಿಕೆ ಹಣಕ್ಕೆ ಕತ್ತರಿ ಹಾಕಿ ಹಣ ಮಂಜೂರು ಮಾಡಲಾಗುತ್ತದೆ ಎಂದು ಇದೇ ವೇಳೆ ಅವರು ಹೇಳಿದರು.

2020ನೇ ಇಸವಿ ಹೊಸ ದರ್ಶಕದ ಮುನ್ನುಡಿಯಾಗಿದೆ. ಈ ದಶಕದ ಮೊದಲ ವರ್ಷ ಇಸ್ರೋ ಸಂಸ್ಥೆ ಮಹತ್ವಾಕಾಂಕ್ಷೆ, ಕನಸುಗಳನ್ನು ಹೊಂದಿದೆ.

Intro:Body:25 ಕ್ಕೂ ಹೆಚ್ಚು ಬಾಹ್ಯಾಕಾಶ ಯೋಜನೆಗಳು, ಚಂದ್ರಯಾನ 3: 2020ರ ದಶಕದ ಬಾಹ್ಯಾಕಾಶ ಕ್ರಾಂತಿಯ ಉತ್ಸಾಹದಲ್ಲಿ ಇಸ್ರೋ


ಬೆಂಗಳೂರು: 2020ರ ಮೊದಲ ದಿನವೇ ಇಸ್ರೋ ತನ್ನ ಕೇಂದ್ರ ಕಛೇರಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು, ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ ಶಿವನ್, 2020ಕ್ಕೆ 25ಕ್ಕೂ ಹೆಚ್ಚು ಬಾಹ್ಯಾಕಾಶ ಉಡಾವಣೆಗಳು ಇವೆ. ಹಾಗೂ ಕೇಂದ್ರ ಸರ್ಕಾರ ಚಂದ್ರಯಾನ 3ಕ್ಕೆ ಸಮ್ಮತಿ ನೀಡಿದೆ, ಚಂದ್ರಯಾನ 3 ರ ವೆಚ್ಚ 600 ಕೋಟಿ ರೂಪಾಯಿಗಳಷ್ಟು ಅಂದಾಜಿಸಲಾಗಿದೆ ಎಂದು ತಿಳಿಸಿದರು.


ಚಂದ್ರಯಾನ 3: ಕೇಂದ್ರ ಹಸಿರು ನಿಶಾನೆ; ಕೆಲಸ ಪ್ರಾರಂಭ


ಇಸ್ರೋ ಸಂಸ್ಥೆ ಈಗಾಗಲೇ ಚಂದ್ರಯಾನ 3 ರ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಾಜೆಕ್ಟ್ ನಿರ್ದೇಶಕರಾಗಿ ವೀರ ಮುತ್ತುವೇಲು ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಹೇಳಿದರು.


ಒಟ್ಟಾರೆ ಚಂದ್ರಯಾನ 3 ರ ವೆಚ್ಚ 600 ಕೋಟಿ ರೂಪಾಯಿ ಅಂದಾಜಿಸಲಾಗಿದೆ, 250 ಕೋಟಿ ರೂಪಾಯಿ ರೋವರ್ ಹಾಗೂ ಉಡಾವಣಾ ವೆಚ್ಚ 315 ಕೋಟಿ ರೂಪಾಯಿ ಆಗಲಿದೆ ಎಂದು ವಿವರಿಸಿದರು.


2020ರ ನವೆಂಬರ್ ರಂದು ನಮ್ಮ ಆಂತರಿಕ ಗುರಿ ಇದೆ, ಆ ಸಮಯಕ್ಕೆ ಸಾಧ್ಯವಾಗದಿದ್ದರೆ 2021ಕ್ಕೆ ಚಂದ್ರಯಾನ 3 ಉಡಾವಣೆ ಮಾಡಲಾಗುವುದು ಎಂದು ಹೇಳಿದರು. ಚಂದ್ರಯಾನ 2 ರಲ್ಲಿ ಇದ್ದ ಆರ್ಬಿಟರ್ ರನ್ನು ಚಂದ್ರಯಾನ 3 ಕ್ಕೆ ಬಳಿಸಲಾಗುವುದು, ಚಂದ್ರಯಾನ 3 ರಲ್ಲಿ ಕೇವಲ ರೋವರ್ ಹಾಗೂ ಲ್ಯಾನ್ಡರ್ ಇರುತ್ತದೆ ಎಂದು ಇವರು ವಿವರಿಸಿದರು. ಜೊತೆಗೆ ಚಂದ್ರಯಾನ 2ರ ಪ್ರಯೋಗ ಚಂದ್ರಯಾನ 3 ಮಾಡಲಿದೆ. ಚಂದ್ರಯಾನ 2 ರ ಯೋಜನೆಯಂತೆ ವಿಕ್ರಂ ಲ್ಯಾನ್ಡರ್ ಮೃದು ಇಳಿದಾನವಾಗಲಿಲ್ಲ, ಈ ಕಾರಣದಿಂದ ಚಂದ್ರಯಾನ 3 ಚಂದ್ರನ ದಕ್ಷಿಣ ದೃವಕ್ಕೆ ಉಡಾವಣೆ ಮಾಡಲಾಗುವುದು ಎಂದು ಇವರು ಹೇಳಿದರು.


ಇಸ್ರೋ ಸಂಸ್ಥೆ ತಪ್ಪುಗಳಿಂದ ಪಾಠ ಕಲಿಯುತ್ತದೆ, ಹೀಗಾಗಿ ನಾವು ಚಂದ್ರಯಾನ 3 ಹೆಚ್ಚು ಯಾಂತ್ರೀಕೃತ ಮಾಡುತ್ತೇವೆ ಎಂದು ಸಕಾರಾತ್ಮಕವಾಗಿ ಹೇಳಿದರು.


ಬಿರುಸಾದ ಇಳುವಳಿಕೆ ಆದಮೇಲೆ ಪ್ರಧಾನಿ ನರೇಂದ್ರ ಮೋದಿಯ ಮುಂದೆ ನಾನು ಭಾವುಕನಾಗಿ ಕಣ್ಣೀರಿಟ್ಟೆ, 2 ಮನುಷ್ಯರು ದುಃಖ ತೋಡಿಕೊಂಡ ಸಮಯ ಅದು, ಅಷ್ಟೇ ಬಿಟ್ಟರೆ ಏನು ಮಾತನ್ನಾದಲಿಲ್ಲ ಎಂದು ಇವರು ತಿಳಿಸಿದರು.


ಇಸ್ರೋ ಸಂಸ್ಥೆಯ ಪಾರದರ್ಶಕದ ಬಗ್ಗೆ ಉತ್ತರಿಸಿದ ಇವರು, ಇಸ್ರೋ ಸಂಸ್ಥೆ ಸದಾಕಾಲ ಪಾರದರ್ಶಕವಾಗಿ ನಡೆದುಕೊಳ್ಳುತ್ತದೆ. ಚಂದ್ರಯಾನ 2ರ ಬಿರುಸಾದ ತಿಳುವಳಿಕೆ ಚಿತ್ರವನ್ನು ಬಿಡುಗಡೆ ಮಾಡಿದ ಹುಡುಗನಿಗೆ ಶುಭಾಶಯ ಕೋರುತ್ತೇನೆ ಹಾಗೂ ಸಂಸ್ಥೆ ತಂತ್ರಗಾರಿಕೆ ದೃಷ್ಟಿಯಿಂದ ಆ ಚಿತ್ರಗಳನ್ನು ಬಿಡುಗಡೆ ಮಾಡಲಿಲ್ಲ ಎಂದು ಇಸ್ರೋ ಮುಖ್ಯಸ್ಥ ಚಿತ್ರದ ಬಿಡುಗಡೆಯ ವಿಷಯದ ಬಗ್ಗೆ ಸಮರ್ಥನೆ ನೀಡಿದರು.


ನಾವಿಕ್ (NaaVIC) : ಇಸ್ರೋ ನಿರ್ಮಿತ ಸ್ಥಳ ಆಧಾರಿತ ಸೇವೆ (Location Based Services)


ನಾವಿಕ್ ಯೋಜನೆ ಬಗ್ಗೆ ವಿವರಿಸಿದ ಇಸ್ರೋ ಮುಖ್ಯಸ್ಥ , ಇನ್ನು ಕೆಲವು ದಿನಗಳಲ್ಲಿ ಮೊಬೈಲ್ ಫೋನ್ ಗಳಲ್ಲಿ ನಾವಿಕ್ ಸೇವೆ ಪ್ರಾರಂಭವಾಗಲಿದೆ. ಈಗಾಗಲೇ ಕ್ವಾಲ್ ಕಾಮ್ ಸಂಸ್ಥೆ ಇಸ್ರೋ ಜೊತೆ ಕೈಜೋಡಿಸಲಿದೆ ಎಂದು ಇಸ್ರೋ ಹೇಳಿದೆ. ಜೊತೆಗೆ xiaomi ಫೋನ್ ತಯಾರಕರು ಮುಂಬರುವ ತಮ್ಮ ಫೋನ್ಗಳಲ್ಲಿ ನಾವಿಕ್ ಚಿಪ್ ಗಳನ್ನು ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


ನಾವಿಕ್ ಸೇವೆಗಳು ಕೇವಲ ಭಾರತದಲ್ಲಿ ಮಾತ್ರ ಲಭ್ಯವಿದ್ದು ಈ ಸೇವೆ ಜಿಪಿಎಸ್ ಸೇವೆಗೆ ಪರ್ಯಾಯವಾಗಲಿದೆ.


ಗಗನಯಾನ: 4 ಬಾಹ್ಯಾಕಾಶ ಯಾತ್ರಿಗಳು ಆಯ್ಕೆ


ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರೆ ಕಾರ್ಯ ಪ್ರಾರಂಭವಾಗಿದೆ. 4 ಗಗನಯಾತ್ರಿಗಳನ್ನು ಭಾರತೀಯ ವಾಯುಪಡೆ ಯಿಂದ ಇಸ್ರೋ ಆಯ್ಕೆ ಮಾಡಿದೆ, ಆಯ್ಕೆ ಮಾಡಿದ ನಾಲ್ಕು ಗಗನಯಾತ್ರಿಗಳ ಮೊದಲ ಹಂತದ ಆರೋಗ್ಯ ತಪಾಸಣೆ ಭಾರತದಲ್ಲಿ ಈಗಾಗಲೇ ನಡೆದಿದೆ ಹೆಚ್ಚಿನ ಆರೋಗ್ಯ ತಪಾಸಣೆಗೆ ಹಾಗೂ ಗಗನಯಾತ್ರೆಯ ತರಬೇತಿಗೆ ರಷ್ಯಾ ರಾಷ್ಟ್ರಕ್ಕೆ ಇವರನ್ನು ಕಳಿಸಲಾಗಿದೆ ಎಂದು ಇಸ್ರೊ ಮುಖ್ಯಸ್ಥರು ತಿಳಿಸಿದರು.


ತೂತುಕುಡಿಯಲ್ಲಿ ಉಡಾವಣಾ ಕೇಂದ್ರ: ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭ


ಇಸ್ರೋ ಸಂಸ್ಥೆ ವಿಸ್ತರಿಸಲು ಈಗಾಗಲೇ ನಿರ್ಧರಿಸಿದ್ದು ತಮಿಳುನಾಡಿನ ತೂತುಕುಡಿಯಲ್ಲಿ ಲಘು ಉಪಗ್ರಹ ಉಡಾವಣ ಕೇಂದ್ರವನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಈಗಾಗಲೇ ಇಸ್ರೋ ಸಂಸ್ಥೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು 2300 ಎಕರೆ ಜಾಗವನ್ನು ಭೂಸ್ವಾಧೀನ ಗೊಳಿಸಲು ನಿರ್ಧರಿಸಿ.
ಲಘು ಉಪಗ್ರಹ ಉಡಾವಣೆ ಕೇಂದ್ರದ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆಲವು ಪ ಗ್ರಹಗಳು ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿದೆ ನಂತರ ತಮಿಳುನಾಡಿನ ತೂತುಕುಡಿಯಲ್ಲಿ ಇನ್ನು ಮುಂದೆ ಉಪಗ್ರಹಗಳ ಉಡಾವಣೆ ಆಗಲಿದೆ ಎಂದು ಅವರು ತಿಳಿಸಿದರು.


ಇಸ್ರೋ ಸಂಸ್ಥೆ ಕೇಂದ್ರ ಸರ್ಕಾರಕ್ಕೆ 2020 21ರ ವಾರ್ಷಿಕ ಆರೋಗ್ಯಕ್ಕಾಗಿ 14000 ಕೋಟಿ ರೂಪಾಯಿಗಳನ್ನು ಬೇಡಿಕೆ ಇಟ್ಟಿದೆ, ಸಾಮಾನ್ಯವಾಗಿ ಬೇಡಿಕೆಯಿಟ್ಟ ಹಣ ಪೂರ್ಣವಾಗಿ ದೊರಕುವುದಿಲ್ಲ ಬೇಡಿಕೆ ಹಣಕ್ಕೆ ಕತ್ತರಿ ಹಾಕಿ ಹಣ ಮಂಜೂರು ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಶಿವನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಒಟ್ಟಾರೆಯಾಗಿ 2020 ಹೊಸ ದರ್ಶಕದ ಮುನ್ನುಡಿಯಾಗಿದೆ, ಈ ದಶಕದ ಮೊದಲ ವರ್ಷ ಇಸ್ರೋ ಸಂಸ್ಥೆ ಮಹತ್ವಾಕಾಂಕ್ಷೆಯನ್ನು, ಕನಸುಗಳನ್ನು ಹೊಂದಿದೆ. ಹಾಗೂ ಇಸ್ರೋ ಸಂಸ್ಥೆ ಕಂಡ ಕನಸುಗಳನ್ನು ನನಸಾಗಿಸಲು ಹಗಲಿರುಳು ಶ್ರಮಿಸುತ್ತಿದೆ




kn_bng_02_isropressconferencekan_script_7205473




















Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.