ETV Bharat / state

ವೇಶ್ಯಾವಾಟಿಕೆ ದಂಧೆ: ಬೆಂಗಳೂರಲ್ಲಿ ಇಬ್ಬರ ಬಂಧನ, ಐವರು ಯುವತಿಯರ ರಕ್ಷಣೆ

author img

By

Published : Jul 8, 2020, 8:21 AM IST

ಬೆಂಗಳೂರಿನ ಲಾಡ್ಜ್​ವೊಂದರಲ್ಲಿ ಅನ್ಯ ರಾಜ್ಯದ ಹಾಗೂ ಸ್ಥಳೀಯ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ccb-raid-on-prostitution-racket-5-girls-rescued-in-bengaluru
ವೇಶ್ಯಾವಾಟಿಕೆ ದಂಧೆ

ಬೆಂಗಳೂರು: ಕೊರೊನಾ ಮಹಾಮಾರಿ ನಡುವೆಯೂ ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಐವರು ಯುವತಿಯರನ್ನು ರಕ್ಷಿಸಿದ್ದಾರೆ.

ಸತೀಶ್ ಹಾಗೂ ರಾಜಾ ಎಂಬುವವರೇ ಬಂಧಿತ ಆರೋಪಿಗಳು. ಇವರು ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್​ವೊಂದರಲ್ಲಿ ಅನ್ಯರಾಜ್ಯ ಹಾಗೂ ಸ್ಥಳೀಯ ಯುವತಿಯರನ್ನು ಬಳಸಿಕೊಂಡು ದಂಧೆ ನಡೆಸುತ್ತಿದ್ದರು.

ಈ‌ ಬಗ್ಗೆ ಮಾಹಿತಿ ತಿಳಿದು ಸಿಸಿಬಿ ಮಹಿಳಾ ಘಟಕ ದಾಳಿ ನಡೆಸಿದೆ. ಕೊರೊನಾ ವೈರಸ್​ ಹಿನ್ನೆಲೆ ಲಾಡ್ಜ್​ಗಳಿಗೆ ಯಾರೂ ಬಾರದಿರುವುದರಿಂದ ಮಾಲೀಕರು ಅಡ್ಡದಾರಿ ಹಿಡಿದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಲಾಡ್ಜ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.