ETV Bharat / state

ಅಕ್ರಮ ಹಣ ಸಂಪಾದಿಸಿದ್ದು ಬಿಜೆಪಿಯನ್ನು ಕೇಳಿಯೇ? ಡಿಕೆಶಿಗೆ ಬಿಜೆಪಿ ಟಾಂಗ್

author img

By

Published : May 27, 2022, 9:26 AM IST

BJP Tweeted About KPCC President DK Shivakumar
BJP Tweeted About KPCC President DK Shivakumar

ರಾಜ್ಯದಲ್ಲಿ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದು ನೀವೇ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಇಷ್ಟೆಲ್ಲಾ ಇರುವಾಗ ಡಿಕೆಶಿ ಸತ್ಯವ್ರತನ ಸೋಗು ಹಾಕಿದರೆ ರಾಜ್ಯದ ಜನ ನಂಬುತ್ತಾರೆಯೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಬೆಂಗಳೂರು: ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಯ ಪ್ರತಿ ಹಂತವನ್ನೂ ಬಿಜೆಪಿ ಮೇಲೆ ಹೊರಿಸುವುದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದೆ.

  • ಕೆಪಿಸಿಸಿ ರಾಜ್ಯ ಅಧ್ಯಕ್ಷರು ಈಗ #ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ.

    ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.

    ಪಕ್ಷದ ಕಚೇರಿಗೆ ಭೇಟಿ ನೀಡುವುದಕ್ಕಿಂತ ಹೆಚ್ಚಾಗಿ ಕೋರ್ಟಿಗೆ ಅಲೆದಾಡುವುದರಲ್ಲೇ ತಲ್ಲೀನರಾಗಿದ್ದಾರೆ.#ಭ್ರಷ್ಟಾಧ್ಯಕ್ಷ pic.twitter.com/RBZIqxctqM

    — BJP Karnataka (@BJP4Karnataka) May 26, 2022 " class="align-text-top noRightClick twitterSection" data=" ">

ನೀವು ಅಕ್ರಮ ಹಣ ಸಂಪಾದಿಸಿದ್ದು ಬಿಜೆಪಿಯನ್ನು ಕೇಳಿಯೇ? ನೀವು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮಾಡಿರುವುದು ಬಿಜೆಪಿ ಒಪ್ಪಿಗೆಯಿಂದಲೇ?‌ ಐಟಿ, ಇಡಿ, ಸಿಬಿಐ ದಾಳಿ ಮಾಡಿದಾಗಲೆಲ್ಲ ಬಿಜೆಪಿ ಮೇಲೆ ಬೊಟ್ಟುಮಾಡುವ ಡಿಕೆಶಿ ಅವರು, ಕೆಪಿಸಿಸಿ ಕಚೇರಿಯಲ್ಲೇ ಕುಳಿತು ತಮ್ಮ ವಿರುದ್ಧವೇ ತಮ್ಮದೇ ಪಕ್ಷದ ಉಗ್ರಪ್ಪ ಹಾಗೂ ಸಲೀಮ್ ಅವರು ಭ್ರಷ್ಟಾಚಾರದ ಆರೋಪ ಮಾಡಿರುವುದನ್ನು ಮರೆತಿರುವರೇ? ನ್ಯಾಯಯುತ ಸಂಪಾದನೆ ಮಾಡಿದ್ದರೆ ನಿಮ್ಮ ಮೇಲೆ ಸ್ವಪಕ್ಷೀಯ ನಾಯಕರಿಂದ ಅಪವಾದ ಕೇಳಿ ಬರುತ್ತಿತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.

  • ಮಾನ್ಯ ಡಿಕೆಶಿ ಅವರೇ,

    ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದು ನೀವೇ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು.

    ಇಷ್ಟೆಲ್ಲಾ ಇರುವಾಗ ನೀವು ಸತ್ಯವ್ರತನ ಸೋಗು ಹಾಕಿದರೆ ರಾಜ್ಯದ ಜನ ನಂಬುತ್ತಾರೆಯೇ?#ಭ್ರಷ್ಟಾಧ್ಯಕ್ಷ pic.twitter.com/Q5djMR1CQV

    — BJP Karnataka (@BJP4Karnataka) May 26, 2022 " class="align-text-top noRightClick twitterSection" data=" ">

ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದು ನೀವೇ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಇಷ್ಟೆಲ್ಲಾ ಇರುವಾಗ ಡಿಕೆಶಿ ಸತ್ಯವ್ರತನ ಸೋಗು ಹಾಕಿದರೆ ರಾಜ್ಯದ ಜನ ನಂಬುತ್ತಾರೆಯೇ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಅನ್ನು ಕುಟುಕಿದೆ.

  • ಕೆಪಿಸಿಸಿ ಅಧ್ಯಕ್ಷರು ಮತ್ತು ಅವರ ಹಿರಿಮೆ!

    √ 317 ಬ್ಯಾಂಕ್‌ ಖಾತೆಗಳು
    √ 200 ಕೋಟಿ ಅಕ್ರಮ ವರ್ಗಾವಣೆ
    √ 800 ಕೋಟಿ ಬೇನಾಮಿ ಆಸ್ತಿ

    ಇಂತಹ ವ್ಯಕ್ತಿ ತಾಳೆ ಮರದಡಿಯಲ್ಲಿ ಹಾಲು ಕುಡಿಯಲು ಸಾಧ್ಯವೇ?#ಭ್ರಷ್ಟಾಧ್ಯಕ್ಷ pic.twitter.com/2e8ymL2RA3

    — BJP Karnataka (@BJP4Karnataka) May 26, 2022 " class="align-text-top noRightClick twitterSection" data=" ">

ಕೆಪಿಸಿಸಿ ರಾಜ್ಯ ಅಧ್ಯಕ್ಷರು ಈಗ ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡುವುದಕ್ಕಿಂತ ಹೆಚ್ಚಾಗಿ ಕೋರ್ಟಿಗೆ ಅಲೆದಾಡುವುದರಲ್ಲೇ ತಲ್ಲೀನರಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: 'ಸಾರ್ವಜನಿಕರ ಹಣ ಲೂಟಿ ಮಾಡಿ ಬಿಜೆಪಿಯವರು ಹೇಗೆ ರಾತ್ರಿ ನಿದ್ದೆ ಮಾಡ್ತಾರೆ?'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.