ETV Bharat / state

ಆಂಧ್ರ ಸಿಎಂ ಫೋಟೊ ದುರ್ಬಳಕೆ ಮಾಡಿ ಗಾಂಜಾ ಮಾರಾಟ: ಮೂವರ ಬಂಧನ

author img

By

Published : Feb 17, 2022, 5:24 AM IST

ಆಂಧ್ರಪ್ರದೇಶ ಮುಖ್ಯಮಂತ್ರಿಯ ಫೋಟೋ ದುರ್ಬಳಕೆ ಮಾಡಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Andhra CM photo use marijuana sale, Bengaluru police arrested Three people, Bengaluru crime news, ಆಂಧ್ರ ಸಿಎಂ ಫೋಟೊ ಬಳಸಿ ಗಾಂಜಾ ಮಾರಾಟ, ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಬೆಂಗಳೂರು ಅಪರಾಧ ಸುದ್ದಿ,
ಆಂಧ್ರ ಸಿಎಂ ಫೋಟೊ ದುರ್ಬಳಕೆ ಮಾಡಿ ಗಾಂಜಾ ಮಾರಾಟ

ಬೆಂಗಳೂರು: ರಾಷ್ಟ್ರೀಯ ಬಾಲ ಸುರಕ್ಷಾ ಇಲಾಖೆಯ ಚಿಹ್ನೆ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೋಟೋಗಳನ್ನು ಬುಲೆರೋ ವಾಹನಕ್ಕೆ ಅಂಟಿಸಿ ಆಂಧ್ರದಿಂದ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Andhra CM photo use marijuana sale, Bengaluru police arrested Three people, Bengaluru crime news, ಆಂಧ್ರ ಸಿಎಂ ಫೋಟೊ ಬಳಸಿ ಗಾಂಜಾ ಮಾರಾಟ, ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಬೆಂಗಳೂರು ಅಪರಾಧ ಸುದ್ದಿ,
ಆಂಧ್ರ ಸಿಎಂ ಫೋಟೊ ದುರ್ಬಳಕೆ ಮಾಡಿ ಗಾಂಜಾ ಮಾರಾಟ

ಬಂಧಿತರು ಚಿತ್ತೂರು ಮೂಲದ ಕುಮಾರ್ (34), ಶಿವಪ್ರಕಾಶ್ (35), ಪ್ರಕಾಶ್ ರಾವ್ (32) ಎಂದು ಗುರುತಿಸಲಾಗಿದೆ. ಫೆಬ್ರವರಿ 2ರಂದು ಸಂಜಯ್‌ನಗರದ ಪಾರ್ಕ್‌ವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕುಮಾರ್‌ನ್ನು ಬಂಧಿಸಲಾಗಿತ್ತು. ಈತನ ವಿಚಾರಣೆ ವೇಳೆ ಇತರೆ ಇಬ್ಬರು ಆರೋಪಿಗಳ ಬ್ಗಗೆ ಮಾಹಿತಿ ನೀಡಿದ್ದ. ಈ ಸುಳಿವಿನ ಮೆರೆಗೆ ಬಳ್ಳಾರಿ ಮುಖ್ಯ ರಸ್ತೆಯ ಸಿಬಿಐ ಬಸ್ ನಿಲ್ದಾಣದ ಸಮೀಪದಲ್ಲಿ ನಿಂತಿದ್ದ ಶಿವ ಪ್ರಕಾಶ್ ಮತ್ತು ಪ್ರಕಾಶ್ ರಾವ್‌ನನ್ನು ಬಂಧಿಸಲಾಗಿದೆ.

ಓದಿ: ಆದೇಶ ಉಲ್ಲಂಘಿಸಿದ ಬಿಬಿಎಂಪಿ : ಜೈಲಿಗೆ ಹೋಗಲು ಗಂಟು ಮೂಟೆ ಕಟ್ಟಿಕೊಂಡು ಬನ್ನಿ ಎಂದ ಹೈಕೋರ್ಟ್

ಬಂಧಿತ ವೇಳೆ ಬುಲೆರೋ ಜೀಪ್‌ನಲ್ಲಿ ಸಂಗ್ರಹಿಸಿಟ್ಟಿದ್ದ 103 ಕೆ.ಜಿ. ಗಾಂಜಾ ಸೊಪ್ಪನ್ನು ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

Andhra CM photo use marijuana sale, Bengaluru police arrested Three people, Bengaluru crime news, ಆಂಧ್ರ ಸಿಎಂ ಫೋಟೊ ಬಳಸಿ ಗಾಂಜಾ ಮಾರಾಟ, ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಬೆಂಗಳೂರು ಅಪರಾಧ ಸುದ್ದಿ,
ಆಂಧ್ರ ಸಿಎಂ ಫೋಟೊ ದುರ್ಬಳಕೆ ಮಾಡಿ ಗಾಂಜಾ ಮಾರಾಟ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬ ಆರೋಪಿಗಳನ್ನು ಬಳಸಿಕೊಂಡು ಕರ್ನಾಟಕ, ತಮಿಳುನಾಡಿಗೆ ನಿರಂತರವಾಗಿ ಗಾಂಜಾ ಪೂರೈಕೆ ಮಾಡುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆತನಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸ್​ ಅಧಿಕಾರಿ ವಿನಾಯಕ್ ಪಾಟೀಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.