ETV Bharat / state

ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಶ್ವ ಬ್ಯಾಂಕ್ ಅನುದಾನಿತ ಯೋಜನೆಗಳ ಕುರಿತು ಚರ್ಚೆ: ಚೆಲುವರಾಯಸ್ವಾಮಿ

author img

By

Published : Jun 26, 2023, 9:25 PM IST

ವಿಶ್ವಬ್ಯಾಂಕ್​ ಅಧಿಕಾರಿಗಳ ನಿಯೋಗ ಹಲವು ಸಲಹೆಗಳನ್ನು ನೀಡಿದೆ ಎಂದು ಕೃಷಿ ಸಚಿವ ಚೆಲುವನಾರಾಯಣಸ್ವಾಮಿ ತಿಳಿಸಿದ್ದಾರೆ.

ಕೃಷಿ ಸಚಿವ ಚೆಲುವನಾರಾಯಣಸ್ವಾಮಿ
ಕೃಷಿ ಸಚಿವ ಚೆಲುವನಾರಾಯಣಸ್ವಾಮಿ

ಬೆಂಗಳೂರು : ಜಲಾನಯನ ಪ್ರದೇಶಗಳ ಪುನಶ್ಚೇತನ ಸಂಬಂಧ ವಿಶ್ವ ಬ್ಯಾಂಕ್ ನೆರವು ನೀಡಲು ಮಾತುಕತೆ ನಡೆಸಿದೆ. ರಾಜ್ಯದಲ್ಲಿ 600 ಕೋಟಿ ರೂ. ಅನುದಾನ ವೆಚ್ಚಕ್ಕೆ ವಿಶ್ವಬ್ಯಾಂಕ್ ಈಗಾಗಲೇ ಸಮ್ಮತಿ ಕೊಟ್ಟಿದೆ. 5 ವರ್ಷಗಳ ರಿವಾರ್ಡ್ ಪ್ರೋಗ್ರಾಂ ಮೂಲಕ ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ ಇರಲಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು. ವಿಶ್ವ ಬ್ಯಾಂಕ್ ನಿಯೋಗದ ಅಧಿಕಾರಿಗಳ ಜೊತೆಗೆ ಸಚಿವರು ಇಂದು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದರು.

ರಾಜಸ್ಥಾನ ಬಿಟ್ಟರೆ ಕರ್ನಾಟಕದಲ್ಲೇ ಹೆಚ್ಚಿನ ಒಣ ಭೂಮಿ ಇದೆ. ವಿಶ್ವ ಬ್ಯಾಂಕ್ ಅಧಿಕಾರಿಗಳ ನಿಯೋಗ ಹಲವು ಸಲಹೆಗಳನ್ನು ನೀಡಿದೆ. ಅದನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದ್ದೇವೆ. ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಜಾನ್ ರೂಮ್ ನೇತೃತ್ವದಲ್ಲಿ ಉನ್ನತ ಮಟ್ಟದ ವಿಶ್ವ ಬ್ಯಾಂಕ್ ನಿಯೋಗ ಭೇಟಿ ನೀಡಿತ್ತು. ಜೂನ್ 2023ರ ತನಕ ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಶ್ವ ಬ್ಯಾಂಕ್ ಅನುದಾನಿತ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಮುಂದೆ ಕರ್ನಾಟಕದಲ್ಲಿ ಸರ್ಕಾರದ ಜೊತೆಗೂಡಿ ವಿವಿಧ ವಲಯ ಬಲಪಡಿಸುವ ಕುರಿತು ಚರ್ಚಿಸಲು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದರು.

ಇನ್ನು, ಮೈಸೂರು- ಬೆಂಗಳೂರು ಹೆದ್ದಾರಿ ಅಧಿಕಾರಿಗಳ ಸಭೆ ಮಾಡಿದ್ದೇನೆ. ಚುನಾವಣೆಗೆ ಮೊದಲು ಪಕ್ಷದ ಸಲುವಾಗಿ ಹೆದ್ದಾರಿ ಉದ್ಘಾಟನೆ ಮಾಡಿದ್ದಾರೆ. ಈಗ 45 ಡೆತ್, 46 ಆ್ಯಕ್ಸಿಡೆಂಟ್ ಆಗಿಬಿಟ್ಟಿದೆ. ಹೆದ್ದಾರಿ ಆದಮೇಲೆ ಅಪಘಾತ ಕಡಿಮೆ ಆಗಬೇಕಿತ್ತು. ಆದರೆ ಹೆದ್ದಾರಿ ಅಪಘಾತ ಜಾಸ್ತಿ ಆಗಿದೆ. ಭೂಸ್ವಾಧೀನ ಪ್ರಕ್ರಿಯೆಯೇ ದೊಡ್ಡ ಸಮಸ್ಯೆ. ಅದೇ ದೊಡ್ಡ ಇತಿಹಾಸ. ಅಂಬ್ಯುಲೆನ್ಸ್ ಇಲ್ಲ, ಕ್ರೇನ್ ಗಳಿಲ್ಲ, ಟ್ರಾಮಾ ಸೆಂಟರ್‌ಗಳಿಲ್ಲ. ಸಾಕಷ್ಟು ಲೋಪದೋಷಗಳಿವೆ. ಸರಿಪಡಿಸುವ ತನಕ ಶ್ರೀರಂಗಪಟ್ಟಣ ಟೋಲ್ ಕಲೆಕ್ಟ್ ಮಾಡಬಾರದು ಅಂತ ಸೂಚಿಸಿದ್ದೇವೆ ಎಂದು ಹೇಳಿದರು.

ತಾಂತ್ರಿಕ ತಂಡ ರಚನೆಗೆ ಸಿಎಂ ಗಮನಕ್ಕೆ ತರುತ್ತೇವೆ. ಅವರು ಸೂಚಿಸಿದ ಬಳಿಕ ಅಂತಿಮ ನಿರ್ಧಾರ ಮಾಡುತ್ತೇವೆ. ಮೈಸೂರು ಹೈವೇ ಯಾವುದೋ ಹಳ್ಳಿ ರಸ್ತೆಯಲ್ಲಿ ಮಾಡಿ ಬಿಟ್ಟಂಗಿದೆ. ಬೆಂಗಳೂರು ಮಂಗಳೂರು ಹೆದ್ದಾರಿಯೇ ಎಷ್ಟೋ ಇದಕ್ಕಿಂತ ಉತ್ತಮವಾಗಿದೆ. ಪಾಪ ಪ್ರತಾಪ್ ಸಿಂಹ ಅವರಿಗೆ ಇದೆಲ್ಲ ಗೊತ್ತಿಲ್ಲ. ಆಗ ರಾಜ್ಯದಲ್ಲೂ ಕೇಂದ್ರದಲ್ಲೂ ಅವರದೇ ಸರ್ಕಾರ ಇತ್ತು. ಗುತ್ತಿಗೆದಾರರು ಯಾರೋ ಅವರಿಗೂ ಬೇಕಾದವರು ಅಂತ ಹೇಳ್ತಾರಪ್ಪ. ಅದೆಲ್ಲ ನಮಗೆ ಸದ್ಯಕ್ಕೆ ಬೇಡ. ಆದರೆ ಇಡೀ ಹೆದ್ದಾರಿಯೇ ಬಹಳಷ್ಟು ಲ್ಯಾಪ್ಸ್ ಆಗಿದೆ ಎಂದರು.

ವಾಡಿಕೆಗಿಂತ ಕಡಿಮೆ ಮಳೆ: ವಾಡಿಕೆಯ ಪ್ರಕಾರ, ಇಲ್ಲಿಯವರೆಗೆ 167 ಎಂಎಂ ಮಳೆ ಬರಬೇಕಾಬೇಕಾಗಿತ್ತು. 66 ಎಂಎಂ ಮಳೆ ಆಗಿದೆ. ಶೇ 58 ರಷ್ಟು ಕಡಿಮೆ ಮಳೆ ಆಗಿದೆ. 82 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಬೇಕಿತ್ತು. ಈಗ ಬಿತ್ತನೆ ಆಗಿರೋದು 10.20 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. 82% ಬಿತ್ತನೆ ಕಡಿಮೆ ಆಗಿದೆ. ನಾವು ಇನ್ನು ಒಂದು ವಾರ ಕಾಯ್ತಾ ಇದ್ದೀವಿ. ಮಳೆರಾಯ ಕರ್ನಾಟಕ ಕಡೆ ಬರ್ತಾನಾ ಅಂತ. ಚಂಡಮಾರುತ ಇದ್ರೂ ಅದು ಯಶಸ್ವಿ ಆಗ್ತಾ ಇಲ್ಲ. ಇವತ್ತು ಮಳೆ ಬರುತ್ತಾ ನಾಳೆ ಬರುತ್ತಾ ಎಂದು ಕಾಯ್ತಾ ಇದ್ದೀವಿ. ಕರ್ನಾಟಕ ಪೂರ್ತಿ ಮಳೆ ಕವರ್ ಆಗ್ತಾ ಇಲ್ಲ, ಮಳೆ ಸಮಸ್ಯೆ ಇದೆ. ದೇವರು ಕರುಣೆ ತೋರಿಸ್ತಾನಾ? ಕಷ್ಟ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ ಎಂದು ಹೇಳಿದರು.

ಮುಂಗಾರು ಇನ್ನೂ ಮುಗಿದಿಲ್ಲ. ತಜ್ಞರ ಪ್ರಕಾರ, ಐದನೇ ತಾರೀಖಿನವರೆಗೆ ಕಾಯಬಹುದು. ಎರಡು ಮೂರು ದಿನ ಭರವಸೆ ಇದೆ. ಕಾಂಗ್ರೆಸ್ ಬಂದಾಗ ಬರಗಾಲ ಬಂದಿದೆ. ಬಿಜೆಪಿ, ಜೆಡಿಎಸ್ ಬಂದಾಗ ಬರಗಾಲ ಬಂದಿದೆ. ಅದು ಎಲ್ಲ ಮುಖ್ಯ ಅಲ್ಲ, ಬ್ಯಾಡ್ ಟೈಮ್. ಮಳೆ ಜಾಸ್ತಿ ಬಂದ್ರೂ ಕಷ್ಟ, ಕಡಿಮೆ ಬಂದರೂ ಕಷ್ಟ. ಎಲ್ಲ ಬ್ಯಾಲೆನ್ಸ್​ ಆಗಿರಬೇಕು. ವರದಿ ಪ್ರಕಾರ, ಮಳೆ ಆಗುತ್ತೆ ಅಂತಾನೇ ಇದೆ. ಎರಡು ಮೂರು ದಿನಗಳ ಮಳೆ ಆಗುವ ಸಾಧ್ಯತೆ ಇದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಸಮಯ ಇಲ್ಲ. ಮಳೆ ಬಂದರೆ ನಾವು ರೆಡಿ ಇದ್ದೀವಿ. ಮಳೆ ಬರದೆ ಇದ್ರೆ ಏನೂ ಮಾಡೋಕೆ ಆಗಲ್ಲ ಎಂದರು.

ಇದನ್ನೂ ಓದಿ: Price hike: ಗಗನಕ್ಕೇರಿದ ದಿನಸಿ ಹಾಗೂ ತರಕಾರಿ ಬೆಲೆ: ಖರೀದಿಗೆ ಜನರ ಹಿಂದೇಟು, ವ್ಯಾಪಾರಿಗಳು ಕಂಗಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.