ETV Bharat / state

ಇತ್ಯರ್ಥ ಆಗಿರುವ ಪ್ರಕರಣಕ್ಕೆ ಹಣ ಪೀಕಿದ ಆರೋಪ.. ಎಸಿಬಿ ಬಲೆಗೆ ಪಿಎಸ್​ಐ

author img

By

Published : Jul 7, 2022, 5:25 PM IST

ಜಮೀನು ವಿಚಾರವಾಗಿ ಕರೆಯಿಸಿ ಮೂರು ಲಕ್ಷಕ್ಕೆ ಡಿಮ್ಯಾಂಡ್ ಆರೋಪ-1 ಲಕ್ಷ ರೂ. ಲಂಚ ಪಡೆಯುವಾಗ ಪಿಎಸ್ಐ ಎಸಿಬಿ ಬಲೆಗೆ- ಬೆಂಗಳೂರಲ್ಲಿ ಪ್ರಕರಣ

ಇತ್ಯರ್ಥ ಆಗಿರುವ ಪ್ರಕರಣಕ್ಕೆ ಹಣ ಪೀಕಿದ ಪಿಎಸ್​ಐ ಎಸಿಬಿ ಬಲೆಗೆ
ಇತ್ಯರ್ಥ ಆಗಿರುವ ಪ್ರಕರಣಕ್ಕೆ ಹಣ ಪೀಕಿದ ಪಿಎಸ್​ಐ ಎಸಿಬಿ ಬಲೆಗೆ

ಬೆಂಗಳೂರು: ಜಮೀನು ವಿಚಾರ ಸಂಬಂಧ ದೂರುದಾರರಿಂದ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್‌ಪೋರ್ಸ್ (ಬಿಎಂಟಿಎಫ್) ಸಬ್​ಇನ್​​ಸ್ಪೆಕ್ಟರ್ ಬೇಬಿ ಓಲೆಕಾರ್ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ.

ದೂರುದಾರ ಗಿರೀಶ್ ಎಂಬುವರನ್ನು ಜಮೀನು ವಿಚಾರವಾಗಿ ಕರೆಯಿಸಿ ಮೂರು ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿ 1 ಲಕ್ಷ ಲಂಚ ಪಡೆಯುವಾಗ ಪಿಎಸ್ಐ ತಗಲಾಕಿಕೊಂಡಿದ್ದು, ಸದ್ಯ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ಯರ್ಥ ಆಗಿರುವ ಪ್ರಕರಣಕ್ಕೆ ಹಣ ಪೀಕಿದ ಪಿಎಸ್​ಐ ಎಸಿಬಿ ಬಲೆಗೆ

ದೂರುದಾರರ ಸಹೋದರ ಲಕ್ಷ್ಮೀನಾರಾಯಣ್ ಈ ಕುರಿತು ಮಾತನಾಡಿ, ಹೊರಮಾವಿನಲ್ಲಿರುವ ಜಮೀನು ಸಂಬಂಧ ಎರಡು ವರ್ಷಗಳ ಕೇಸ್ ನಡೆಯುತಿತ್ತು‌‌. ಅದೇ ವರ್ಷದಲ್ಲೇ‌ ಕೇಸ್ ಕ್ಲೋಸ್ ಆಗಿತ್ತು. ಎರಡು ತಿಂಗಳ ಹಿಂದೆ ಪಿಎಸ್​​ಐ ಬೇಬಿ ಓಲೆಕಾರ್ ಕರೆ ಮಾಡಿ ನಿಮ್ಮ ಕೇಸ್ ವಿಚಾರಣೆ ಬಾಕಿಯಿದ್ದು, ಕಚೇರಿಗೆ ಬನ್ನಿ ಮಾತನಾಡಬೇಕೆಂದು ಹೇಳಿದ್ದರು. ಎರಡು ವರ್ಷದ ಹಿಂದೆಯೇ ಪ್ರಕರಣ ತನಿಖೆ ಮುಕ್ತಾಯವಾಗಿದೆ ಎಂದು ತಿಳಿಸಿದ್ದೆವು. ಪ್ರಕರಣ ತನಿಖೆ ನಡೆಸಬೇಕಿದ್ದು, ಇದಕ್ಕೆ ಮೂರು ಲಕ್ಷ ರೂಪಾಯಿ ಆಗುತ್ತೆ ಎಂದು ಹೇಳಿದ್ದರು. ಕೊನೆಗೆ ಒಂದು ಲಕ್ಷ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ಆರೋಪಿಸಿದರು.

ಅಲ್ಲದೆ ಈ ಸಂಬಂಧ ನಾವು ಎಸಿಬಿಗೆ ದೂರು ನೀಡಿದ್ದೆವು. ಅದರಂತೆ ಇಂದು ಒಂದು ಲಕ್ಷ ಹಣವನ್ನ ಪಿಎಸ್ಐಗೆ ನೀಡಿದ್ದೇವೆ. ಇದರ ಬೆನ್ನಲ್ಲೇ ಅಧಿಕಾರಿಗಳು ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೂಪುರ್ ಶರ್ಮಾ ತಲೆ ಕಡಿಯುತ್ತೇನೆ ಎಂದಿದ್ದ ಆರೋಪಿ ಬಂಧನ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.