ETV Bharat / state

ದೊಡ್ಡಬಳ್ಳಾಪುರ: ಅನಧಿಕೃತ ಲ್ಯಾಬ್​ ಸೀಜ್​ ಮಾಡಿದ ಆರೋಗ್ಯ ಅಧಿಕಾರಿಗಳು

author img

By ETV Bharat Karnataka Team

Published : Dec 14, 2023, 10:58 PM IST

health-officials-seized-hospital-lab-in-doddaballapur
ದೊಡ್ಡಬಳ್ಳಾಪುರ: ಅನಧಿಕೃತ ಲ್ಯಾಬ್​ ಸೀಜ್​ ಮಾಡಿದ ಆರೋಗ್ಯ ಅಧಿಕಾರಿಗಳು

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಲ್ಯಾಬ್​ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಜ್​ ಮಾಡಿದ್ದಾರೆ.

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ಹೊಸಕೋಟೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ತಪಾಸಣೆ ತೀವ್ರಗೊಳಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಖಾಸಗಿ‌ ಆಸ್ಪತ್ರೆಗಳ ಪರಿಶೀಲನೆ ನಡೆಸಲಾಗಿದ್ದು, ಅನಧಿಕೃತ ಲ್ಯಾಬ್​ವೊಂದನ್ನು ಸೀಜ್​ ಮಾಡಲಾಗಿದೆ.

ಗುರುವಾರ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿರುವ ಸತ್ಯಸಾಯಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಅನಧಿಕೃತವಾಗಿ ಲ್ಯಾಬ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಲ್ಯಾಬ್ ಸರಿಯಾಗಿ ನಿರ್ವಹಣೆ ಇಲ್ಲದೆ ಇರುವುದು ಮತ್ತು ಸೂಕ್ತವಾದ ದಾಖಲೆ ಓದಗಿಸದ ಹಿನ್ನೆಲೆಯಲ್ಲಿ ಸತ್ಯಸಾಯಿ ಲ್ಯಾಬ್ ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ವೇಳೆ ದೊಡ್ಡಬಳ್ಳಾಪುರ ವೈದ್ಯಾಧಿಕಾರಿ ಶಾರದಾ ಇದ್ದರು.

ಹೊಸಕೋಟೆ ಆಸ್ಪತ್ರೆಯಲ್ಲಿ ಪತ್ತೆಯಾಗಿತ್ತು ಭ್ರೂಣ: ಬುಧವಾರ ಹೊಸಕೋಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ತಪಾಸಣೆ ವೇಳೆ ಹೆಣ್ಣು ಭ್ರೂಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದ ತಂಡವು ಆಸ್ಪತ್ರೆ ಸೀಜ್ ಮಾಡಿ ಕ್ರಮ ಕೈಗೊಂಡಿತ್ತು. ಈ ಸಂಬಂಧ ಗುರುವಾರವೂ ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ. ಕಳೆದ‌ ರಾತ್ರಿ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿದ್ದ 7 ಜನ ಸಿಬ್ಬಂದಿಯನ್ನು ವಶಕ್ಕೆ‌ ಪಡೆಯಲಾಗಿತ್ತು. ನರ್ಸ್​​ಗಳಾಗಿ ಕೆಲಸ ಮಾಡ್ತಿದ್ದವರನ್ನು ವಶಕ್ಕೆ‌ ಪಡೆದು ಮಹಿಳಾ ಕೇಂದ್ರಕ್ಕೆ‌ ಕಳಿಸಲಾಗಿದೆ. ಹೊಸಕೋಟೆ ತಾಲೂಕು ಆರೋಗ್ಯ ಅಧಿಕಾರಿ ವೀಣಾ ಮತ್ತು ಪೊಲೀಸ್ ಅಧಿಕಾರಿಗಳು ಈ ಸಂಬಂಧ ವಿಚಾರಣೆ ಮುಂದುವರೆಸಿದ್ದಾರೆ.

ಪ್ರತಿ ತಿಂಗಳು ಆಸ್ಪತ್ರೆಗೆ ಎಷ್ಟು ಗರ್ಭಿಣಿಯರು ಆರೋಗ್ಯ ತಪಾಸಣೆಗೆ ಬರುತ್ತಾರೆ, ಎಷ್ಟು ಗರ್ಭಿಣಿಯರಿಗೆ ಗರ್ಭಪಾತ ಮಾಡಲಾಗಿದೆ ಎಂಬ ಬಗ್ಗೆ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಂಜುನಾಥ್​ ದೂರು ನೀಡಿದ್ದರು.

ಇದನ್ನೂ ಓದಿ: ಭ್ರೂಣ ಹತ್ಯೆ ಕೇಸ್​: ಆರೋಗ್ಯಾಧಿಕಾರಿಗಳ ತನಿಖೆ ವೇಳೆ ಹೊಸಕೋಟೆಯ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.