ETV Bharat / state

ಬೈಕ್​ಗಳ ಮುಖಾಮುಖಿ ಡಿಕ್ಕಿ: ಮಗಳ ನೋಡ ಹೊರಟ ತಾಯಿಯ ದಾರುಣ ಸಾವು

author img

By

Published : Dec 5, 2020, 4:48 PM IST

Updated : Dec 5, 2020, 4:53 PM IST

A collision between bikes
ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ: ಮಗಳನ್ನು ನೋಡಲು ಹೊರಟ ತಾಯಿ ದೇಹ ಛಿದ್ರ-ಛಿದ್ರ

ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದು ಹೋದ ಪರಿಣಾಮ ಆಕೆಯ ದೇಹ ಛಿದ್ರವಾಗಿರುವ ಮನಕಲುಕುವ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.

ನೆಲಮಂಗಲ (ಬೆಂ.ಗ್ರಾಮಾಂತರ): ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದಿದ್ದು, ಆಕೆಯ ದೇಹ ಛಿದ್ರವಾಗಿರುವ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.

A collision between bikes
ಮಗಳನ್ನು ನೋಡಲು ಹೊರಟ ತಾಯಿ ದೇಹ ಛಿದ್ರ

ಧನಲಕ್ಷ್ಮಿ (35) ಲಾರಿ ಚಕ್ರದಡಿ ಸಿಲುಕಿ ಮೃತಪಟ್ಟ ಮಹಿಳೆ. ಈ ಮಹಿಳೆ ತನ್ನ ತವರು ಮನೆಯಲ್ಲಿ ಬಿಟ್ಟಿದ್ದ ಮಗಳನ್ನು ನೋಡುವ ಸಲುವಾಗಿ ಪತಿ ಹಾಗೂ ಇನ್ನೊಬ್ಬ ಮಗಳ ಜೊತೆ ಬೈಕ್​ನಲ್ಲಿ ಹೊರಟ್ಟಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ 4ರ ಟಿ.ಬೇಗೂರು ಬಳಿ ಎರಡು ಬೈಕ್​ಗಳ ನಡುವೆ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿದ್ದ ಮಹಿಳೆ ರಸ್ತೆಯ ಬಲಬದಿಗೆ ಬಿದ್ದಿದ್ದಾರೆ. ದುರಾದೃಷ್ಟವಶಾತ್‌ ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಆಕೆಯ ದೇಹದ ಮೇಲೆ ಹರಿದಿದೆ.

ಓದಿ: 13 ವಾಹನಗಳನ್ನು ಎಗರಿಸಿದ್ದ ಖದೀಮ... ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಹೀಗೆ ಸಿಕ್ಕಿಬಿದ್ದ!

ದುರ್ಘಟನೆಯಲ್ಲಿ ಮಹಿಳೆಯ ಪತಿ ಮತ್ತು ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Dec 5, 2020, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.