ETV Bharat / state

13 ವಾಹನಗಳನ್ನು ಎಗರಿಸಿದ್ದ ಖದೀಮ... ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಹೀಗೆ ಸಿಕ್ಕಿಬಿದ್ದ!

author img

By

Published : Dec 5, 2020, 3:53 PM IST

Updated : Dec 5, 2020, 4:44 PM IST

ರೋಹಿತ್ ಅಲಿಯಾಸ್​​ ಕ್ಯಾಟ್ ಬಂಧಿತ ಆರೋಪಿ. ಈತ 10 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ನಗರದ ಹಲವೆಡೆ ಪ್ರಕರಣ ದಾಖಲಾಗಿತ್ತು. ಖದೀಮನ ಸೆರೆ ಹಿಡಿಯಲು ತನಿಖೆಗಿಳಿದ ಪೊಲೀಸರಿಗೆ ಒಬ್ಬನೇ ಸರಣಿ ಕಳ್ಳತನ ಮಾಡಿರುವ ಕುರಿತು ತಿಳಿದಿದೆ. ಗಸ್ತಿನಲ್ಲಿ ವಾಹನ ಪರಿಶೀಲನೆ ಮಾಡುತ್ತಿದ್ದ ಪೊಲೀಸರಿಗೆ ಆಕಸ್ಮಿಕವಾಗಿ ಈತ ಸಿಕ್ಕಿಬಿದ್ದಿದ್ದಾನೆ.

ಕಳ್ಳ
ಕಳ್ಳ

ಬೆಂಗಳೂರು: ನಗರದಲ್ಲಿ 10ಕ್ಕೂ ಹೆಚ್ಚು ಬೈಕ್​ಗಳನ್ನು ಕಳ್ಳತನ ಮಾಡಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಖದೀಮನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ರೋಹಿತ್ ಅಲಿಯಾಸ್​​ ಕ್ಯಾಟ್ ಬಂಧಿತ ಆರೋಪಿ. ಈತ 10 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ನಗರದ ಹಲವೆಡೆ ಪ್ರಕರಣ ದಾಖಲಾಗಿತ್ತು. ಖದೀಮನ ಸೆರೆ ಹಿಡಿಯಲು ತನಿಖೆಗಿಳಿದ ಪೊಲೀಸರಿಗೆ ಒಬ್ಬನೇ ಸರಣಿ ಕಳ್ಳತನ ಮಾಡಿರುವ ಕುರಿತು ತಿಳಿದಿದೆ. ಯಾವುದೋ ಕಾರಣಕ್ಕೆ ಗಸ್ತಿನಲ್ಲಿ ವಾಹನ ಪರಿಶೀಲನೆ ಮಾಡುತ್ತಿದ್ದ ಪೊಲೀಸರಿಗೆ ಆಕಸ್ಮಿಕವಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

the-thief-who-was-theft-13-vehicles-was-accidentally-trapped-dot-do-you-know-how
13 ವಾಹನಗಳನ್ನು ಎಗರಿಸಿದ್ದ ಖದೀಮ

ಪತ್ತೆ ಮಾಡಿದ್ದು ಹೇಗೆ?

ಇದೇ ತಿಂಗಳ 1ನೇ ತಾರೀಖು ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿ ಶೆಟ್ಟಿಹಳ್ಳಿ ರೈಲ್ವೆ ಗೇಟ್ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ರೋಹಿತ್​ನನ್ನು ಹಿಡಿದು ವಾಹನದ ದಾಖಲಾತಿ ಕೇಳಿದ್ದಾರೆ. ಆರೋಪಿ ಬಳಿ ಯಾವುದೇ ದಾಖಲೆ ಇರಲಿಲ್ಲ. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 13 ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ.. ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅವಘಡ: ವಿಷಕಾರಿ ಅನಿಲ ಸೇವಿಸಿ 18 ಮಂದಿ ಬಲಿ


ಆರೋಪಿ ಹೋಂಡಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಪೀಣ್ಯ-2, ಚಂದ್ರಾ ಲೇಔಟ್- 1, ಜ್ಞಾನ ಭಾರತಿ-2, ಸೋಲದೇವನಹಳ್ಳಿ- 1, ಗಂಗಮ್ಮನಗುಡಿ-1, ತುಮಕೂರು-1, ತಾವರೆಕೆರೆ-1, ಕುಂಬಳಗೋಡು-2, ಮೈಸೂರು ವಿಜಯನಗರ-2 ಸೇರಿದಂತೆ ಒಟ್ಟು 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆರೋಪಿಯಿಂದ 4.5 ಲಕ್ಷ ರೂ. ಮೌಲ್ಯದ 10 ವಾಹನ ವಶಕ್ಕೆ ಪಡೆದು, ಇನ್ನುಳಿದ ವಾಹನಗಳಿಗಾಗಿ ಪೊಲೀಸರಿಂದ ಶೋಧ ಮುಂದುವರೆದಿದೆ.

Last Updated : Dec 5, 2020, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.