ETV Bharat / sports

ಫೆಡರರ್​ ಮಣಿಸಿದ ಹ್ಯೂಬರ್ಟ್​ ಹರ್ಕಜ್ ಎಟಿಪಿ​ ರ‍್ಯಾಂಕಿಂಗ್‌ನಲ್ಲಿ ಭಾರಿ ಏರಿಕೆ

author img

By

Published : Jul 12, 2021, 9:23 PM IST

ಹ್ಯೂಬರ್ಟ್​ ಹರ್ಕಜ್
ಹ್ಯೂಬರ್ಟ್​ ಹರ್ಕಜ್

ಸೆಮಿಫೈನಲ್​ನಲ್ಲಿ ನಂಬರ್​ 1 ರ‍್ಯಾಂಕ್​​ನ ಜೋಕೊವಿಕ್​ ವಿರುದ್ಧ ಸೋಲು ಕಂಡಿದ್ದ ಕೆನಡಾದ ಡೆನಿಸ್​ ಶಪೊವೊಲೋವ್​ 2 ಸ್ಥಾನ ಏರಿಕೆ ಕಂಡು ಅಗ್ರ 10ಕ್ಕೆ ಮರಳಿದ್ದಾರೆ.

ಲಂಡನ್: ಇತ್ತೀಚೆಗೆ ಮುಗಿದ ವಿಂಬಲ್ಡನ್ ಚಾಂಪಿಯನ್​ಶಿಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಪೋಲೆಂಡ್​ನ ಹ್ಯೂಬರ್ಟ್​ ಹರ್ಕಜ್​ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 7 ಸ್ಥಾನ ಏರಿಕೆ ಕಂಡು 11ನೇ ಸ್ಥಾನಕ್ಕೆ ಏರಿಕೆ ಕಾಣುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ವಿಂಬಲ್ಡನ್​ನ ಆರಂಭಿಕ ಸುತ್ತಿನಲ್ಲಿ 2ನೇ ಶ್ರೇಯಾಂಕದ ಮೆಡ್ವಡೆವ್​ಗೆ ಸೋಲುಣಿಸಿದ್ದ ಹರ್ಕಜ್​ ಕ್ವಾರ್ಟರ್​ ಫೈನಲ್​ನಲ್ಲಿ 20 ಗ್ರ್ಯಾಂಡ್​ ಸ್ಲಾಮ್ ಒಡೆಯ ಸ್ವಿಟ್ಜರ್ಲೆಂಡ್​ನ ರೋಜರ್​ ಫೆಡರರ್​ ಅವರನ್ನು 6-3,7-6, 6-0ಯ ದಾಖಲೆಯ ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಟೂರ್ನಿಗೆ ಮುಂಚೆ 18 ಶ್ರೇಯಾಂಕದಲ್ಲಿದ್ದ ಅವರು ವಿಂಬಲ್ಡನ್​ ನಂತರ 11ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ.

ಸೆಮಿಫೈನಲ್​ನಲ್ಲಿ ನಂಬರ್​ 1 ರ‍್ಯಾಂಕ್​​ನ ಜೋಕೊವಿಕ್​ ವಿರುದ್ಧ ಸೋಲು ಕಂಡಿದ್ದ ಕೆನಡಾದ ಡೆನಿಸ್​ ಶಪೊವೊಲೋವ್​ 2 ಸ್ಥಾನ ಏರಿಕೆ ಕಂಡು ಅಗ್ರ 10ಕ್ಕೆ ಮರಳಿದ್ದಾರೆ.

ಸರ್ಬಿಯಾದ ನೊವಾಕ್ ಜೋಕೊವಿಕ್, ರಷ್ಯಾದ ಡೇನಿಲ್ ಮೆಡ್ವೆಡೆವ್​, ಸ್ಪೇನ್​ನ ರಾಫೆಲ್ ನಡಾಲ್, ಗ್ರೀಕ್​ನ ಸಿಟ್ಸಿಪಾಸ್​, ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಟಾಪ್​ 5ರಲ್ಲಿ ಕಾಣಿಸಿಕೊಂಡಿದ್ದಾರೆ. ಕ್ವಾರ್ಟರ್ ಫೈನಲ್​ನಲ್ಲಿ ಸೋಲು ಕಂಡ ಫೆಡರರ್​ ಒಂದು ಸ್ಥಾನ ಕುಸಿತ ಕಂಡು 9ನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಹೊಸ ದಾಖಲೆ ಬರೆದ ನೊವಾಕ್: ಹ್ಯಾಟ್ರಿಕ್​ ಸಾಧನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.