ETV Bharat / sports

ಹ್ಯಾಂಗ್​ಝೌ ಏಷ್ಯನ್ ಪ್ಯಾರಾ ಗೇಮ್ಸ್: ಭಾರತದಿಂದ 303 ಅಥ್ಲೀಟ್​ಗಳ ಪ್ರಯಾಣ

author img

By ETV Bharat Karnataka Team

Published : Oct 17, 2023, 6:18 PM IST

Sports Ministry
Sports Ministry

ಇತ್ತೀಚೆಗೆ ಮುಕ್ತಾಯವಾದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. ಇದೇ 22 ರಿಂದ ಪ್ಯಾರ ಏಷ್ಯಾಡ್​ ನಡೆಯಲಿದ್ದು, ಇದರಲ್ಲಿ 303 ಅಥ್ಲೀಟ್​ಗಳು ಭಾಗವಹಿಸುತ್ತಿದ್ದಾರೆ.

ನವದೆಹಲಿ: 19ನೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಪದಕಗಳ ಶತಕ ಬಾರಿಸಿ ಇತಿಹಾಸ ನಿರ್ಮಿಸಿತ್ತು. ಅಕ್ಟೋಬರ್​ 22 ರಿಂದ 28ರ ವರೆಗೆ ಹ್ಯಾಂಗ್​ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (MYAS) 17 ಕ್ರೀಡಾ ವಿಭಾಗಗಳಲ್ಲಿ ಒಟ್ಟು 303 ಕ್ರೀಡಾಪಟುಗಳಿಗೆ ಅನುಮತಿ ನೀಡಿದೆ. ಅವರೊಂದಿಗೆ 143 ತರಬೇತುದಾರರು, ಎಸ್ಕಾರ್ಟ್‌ಗಳು, ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ತೆರಳಲಿದ್ದಾರೆ. ಅಥ್ಲೀಟ್‌ಗಳ ಪಟ್ಟಿಯು 191 ಪುರುಷ ಮತ್ತು 112 ಮಹಿಳಾ ಅಥ್ಲೀಟ್‌ಗಳನ್ನು ಒಳಗೊಂಡಿದೆ. ಅಥ್ಲೆಟಿಕ್ಸ್ ಈವೆಂಟ್‌ಗಳಿಗೆ 123 ಅಥ್ಲೀಟ್‌ ತಂಡಗಳು ತೆರಳುತ್ತಿವೆ.

ಭಾರತವು ಐದು ಕ್ರೀಡೆಗಳು ಸೇರಿದಂತೆ ಹದಿನೇಳು ವಿಭಾಗಗಳಲ್ಲಿ ಭಾಗವಹಿಸುತ್ತದೆ. ಕ್ಯಾನೋ, ಬ್ಲೈಂಡ್ ಫುಟ್ಬಾಲ್, ಲಾನ್ ಬೌಲ್ಸ್, ರೋಯಿಂಗ್ ಮತ್ತು ಟೇಕ್ವಾಂಡೋದಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದೆ. ಅಕ್ಟೋಬರ್​ 8 ರಂದು ಮುಕ್ತಾಯಗೊಂಡ ಏಷ್ಯನ್​​ ಗೇಮ್ಸ್​ನಲ್ಲಿ​​ ಭಾರತ ಅವಿಸ್ಮರಣೀಯ ಸಾಧನೆಗಳನ್ನು ಮಾಡಿದೆ. ಶೂಟಿಂಗ್​ ಮತ್ತು ಅಥ್ಲೀಟ್​ ವಿಭಾಗದಲ್ಲಿ ಅತಿ ಹೆಚ್ಚು ಪದಕಗಳನ್ನು ಬಾಚಿಕೊಂಡದಲ್ಲದೇ, ಮೊದಲ ಬಾರಿಗೆ ಕ್ರಿಕೆಟ್​ನಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿ,ಗಮನ ಸೆಳೆದಿದೆ.

ಕಳೆದ ಬಾಕಿ ಪ್ಯಾರಾ ಏಷ್ಯಾಡ್​ನಲ್ಲಿ ಭಾರತ ಹಲವಾರು ಪದಕ ಸಾಧನೆಗಳನ್ನು ಮಾಡಿದೆ ಅದರಂತೆ ಈ ಬಾರಿಯೂ ದಾಖಲೆಯ ಪದಕ ಗಳಿಕೆಯ ವಿಶ್ವಾಸ ಮೂಡಿಸಿದೆ. 2018 ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಆವೃತ್ತಿಯಲ್ಲಿ 13 ಕ್ರೀಡಾಕೂಟಗಳಲ್ಲಿ ಒಟ್ಟು 190 ಕ್ರೀಡಾಪಟುಗಳು ಭಾಗವಹಿಸಿದ್ದರು, ಅಲ್ಲಿ ಭಾರತವು 15 ಚಿನ್ನ ಸೇರಿದಂತೆ ಒಟ್ಟು 72 ಪದಕಗಳನ್ನು ಜಯಿಸಿತ್ತು.

ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ವಿಲೇಜ್: ನಿನ್ನೆ (ಸೋಮವಾರ) ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ವಿಲೇಜ್ ಉದ್ಘಾಟನಾ ಸಮಾರಂಭ ನಡೆಯಿತು. 19ನೇ ಏಷ್ಯಾಡ್​ನ ಒಂದು ವಾರದ ನಂತರ ಅದೇ ಜಾಗವನ್ನು ಏಷ್ಯನ್ ಪ್ಯಾರಾ ಗೇಮ್ಸ್ ವಿಲೇಜ್ ಆಗಿ ಪರಿವರ್ತಿಸಲಾಗಿದೆ. 325,000 ಚದರ ಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಗ್ರಾಮವನ್ನು ಹ್ಯಾಂಗ್‌ಝೌನಲ್ಲಿ ನಿರ್ಮಿಸಲಾಗಿದೆ. ಏಷ್ಯನ್ ಪ್ಯಾರಾ ಗೇಮ್ಸ್‌ನ ಅಥ್ಲೀಟ್​ಗಳಿಗಾಗಿ 3,446 ಕೊಠಡಿಗಳನ್ನು ಒದಗಿಸಲಾಗಿದೆ. ಇಲ್ಲಿ ಅಥ್ಲೀಟ್​ಗಳಿಗೆ ಸಹಕಾರಿ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹ್ಯಾಂಗ್​ಝೌ ಏಷ್ಯನ್ ಪ್ಯಾರಾ ಗೇಮ್ಸ್ ಅಕ್ಟೋಬರ್ 22-28 ರವರೆಗೆ ನಡೆಯಲಿದೆ.

ಬ್ಯಾಡ್ಮಿಂಟನ್​ನಲ್ಲಿ ಪದಕ ನಿರೀಕ್ಷೆ: ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಅವರು ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಸಜ್ಜಾಗಿದ್ದಾರೆ. ಸಿಂಗಲ್ಸ್‌ನಲ್ಲಿ ವಿಶ್ವದ ನಂ 2 ಪ್ರಮೋದ್ ಭಗತ್ ಅವರು ಸಿಂಗಲ್ಸ್ ಎಸ್‌ಎಲ್ 3, ಮಿಶ್ರ ಡಬಲ್ಸ್‌ನಲ್ಲಿ ಮನೀಶಾ ರಾಮದಾಸ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಸುಕಾಂತ್ ಕದಮ್ ಅವರೊಂದಿಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮತ್ತೊಂದೆಡೆ ಸುಕಾಂತ್ ಕದಮ್ ಎಸ್​ಎಲ್​4 ಸಿಂಗಲ್ಸ್ ವಿಭಾಗ ಮತ್ತು ಪುರುಷರ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಇದನ್ನೂ ಓದಿ: ಐಸಿಸಿ ನಿಯಮ ಉಲ್ಲಂಘನೆ: ಅಫ್ಘಾನಿಸ್ತಾನ​ ಆರಂಭಿಕ ಆಟಗಾರ ಗುರ್ಬಾಜ್​ಗೆ ವಾಗ್ದಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.