ETV Bharat / sports

ಭಾರತ ಹಾಕಿ ತಂಡದ ಮಾಜಿ ನಾಯಕಿ, ಕರ್ನಾಟಕದ ಎಲ್ವಿರಾ ಬ್ರಿಟ್ಟೋ ನಿಧನ

author img

By

Published : Apr 26, 2022, 5:28 PM IST

Former India women's hockey team captain Elvera Britto passes away
ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವಿರಾ ಬ್ರಿಟ್ಟೋ ನಿಧನ

ಎಲ್ವಿರಾ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದು ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ್ದಾರೆ. 1965ರಲ್ಲಿ ಇವರಿಗೆ ಪದ್ಮ ಪ್ರಶಸ್ತಿ ದೊರೆತಿದ್ದು, ಈ ಪ್ರಶಸ್ತಿ ಪಡೆದ 2ನೇ ಮಹಿಳಾ ಹಾಕಿಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಯೋಸಹಜ ಖಾಯಿಲೆಗಳಿಂದಾಗಿ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ. 81 ವರ್ಷದ ಎಲ್ವೆರಾ, 60ರ ದಶಕದ ಭಾರತ ಹಾಕಿ ವಲಯದಲ್ಲಿ ಬ್ರಿಟ್ಟೊ ಸಹೋದರಿಯರೆಂದೇ (ರೀತಾ ಮತ್ತು ಮೇ) ಪ್ರಸಿದ್ಧಿಯಾಗಿದ್ದ ಮೂವರು ಸಹೋದರಿಯರಲ್ಲಿ ಹಿರಿಯವರು. ಈ ಮೂವರು 1960-67ರವರೆಗ ದೇಶಿ ಟೂರ್ನಿಗಳಲ್ಲಿ ತಮ್ಮದೇ ಪ್ರಾಬಲ್ಯ ಸಾಧಿಸಿ ಕರ್ನಾಟಕ ತಂಡಕ್ಕೆ 7 ರಾಷ್ಟ್ರೀಯ ಚಾಂಪಿಯನ್​ಶಿಪ್ ತಂದುಕೊಟ್ಟಿದ್ದರು.

ಎಲ್ವಿರಾ ಭಾರತ ತಂಡವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ್ದಾರೆ. 1965ರಲ್ಲಿ ಇವರಿಗೆ ಪದ್ಮ ಪ್ರಶಸ್ತಿ ದೊರೆತಿದ್ದು, ಈ ಪ್ರಶಸ್ತಿ ಪಡೆದ 2ನೇ ಮಹಿಳಾ ಹಾಕಿ ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದರು.

"ಎಲ್ವಿರಾ ಬ್ರಿಟ್ಟೋ ನಿಧನದ ಸುದ್ದಿ ಕೇಳುವುದಕ್ಕೆ ತುಂಬಾ ದುಃಖವಾಗಿದೆ. ಅವರ ಮಹಿಳಾ ಹಾಕಿಯಲ್ಲಿ ತುಂಬಾ ಸಾಧಿಸಿದ್ದಾರೆ ಮತ್ತು ರಾಜ್ಯ ಮಂಡಳಿಯಲ್ಲಿ ಆಡಳಿತಾಧಿಕಾರಿಯಾಗಿ ಕ್ರೀಡೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಹಾಕಿ ಇಂಡಿಯಾ ಮತ್ತು ಇಡೀ ಹಾಕಿ ವೃತ್ತಿಪರರ ಪರವಾಗಿ, ನಾವು ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಲು ಬಯಸುತ್ತೇವೆ" ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಜ್ಞಾನೇಂದ್ರ ನಿಂಗೊಂಬಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 'ನಮ್ಮಲ್ಲಿ ಅಸೂಯೆ ಜಾಸ್ತಿ, ಕೋಚ್​ ಆದಾಗ ವೈಫಲ್ಯ ಅನುಭವಿಸಲೆಂದು ಸಾಕಷ್ಟು ಜನ ಬಯಸಿದ್ದರು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.