ETV Bharat / sports

26 ದಿನಗಳ ತರಬೇತಿಗಾಗಿ ಮಾಸ್ಕೋಗೆ ತೆರಳಿದ ಕುಸ್ತಿಪಟು ಬಜರಂಗ್ ಪೂನಿಯಾ

author img

By

Published : Dec 27, 2021, 8:26 PM IST

Bajrang begins 26-day training camp in Moscow ahead of busy season
ಬಜರಂಗ್ ಪೂನಿಯಾ ತರಬೇತಿ

ಟೋಕಿಯೋ ಒಲಿಂಪಿಕ್ಸ್​ ನಂತರ ಬಜರಂಗ್ ಪೂನಿಯಾ ಅವರ ಮೊದಲ ತರಬೇತಿ ಶಿಬಿರ ಇದಾಗಿದೆ. ಜನವರಿ 21ರವರೆಗೆ ಪೂನಿಯಾ ಮಾಸ್ಕೋದಲ್ಲಿ ತರಬೇತಿ ನಡೆಸಲಿದ್ದಾರೆ. ಒಲಿಂಪಿಕ್ಸ್​ನಲ್ಲಿ ರಷ್ಯಾ ಯಶಸ್ವಿ ರಾಷ್ಟ್ರವಾಗಿರುವುದರಿಂದ ಪೂನಿಯಾ ಈ ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಭರವಸೆಯ ಕುಸ್ತಿಪಟು ಬರಜರಂಗ್ ಪೂನಿಯಾ ಸೋಮವಾರ 26 ದಿನಗಳ ತರಬೇತಿ ಶಿಬಿರಕ್ಕಾಗಿ ಮಾಸ್ಕೋಗೆ ತೆರಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ ನಂತರ ಬಜರಂಗ್ ಪೂನಿಯಾ ಅವರ ಮೊದಲ ತರಬೇತಿ ಶಿಬಿರ ಇದಾಗಿದೆ. ಜನವರಿ 21ರವರೆಗೆ ಪೂನಿಯಾ ಮಾಸ್ಕೋದಲ್ಲಿ ತರಬೇತಿ ನಡೆಸಲಿದ್ದಾರೆ. ಒಲಿಂಪಿಕ್ಸ್​ನಲ್ಲಿ ರಷ್ಯಾ ಯಶಸ್ವಿ ರಾಷ್ಟ್ರವಾಗಿರುವುದರಿಂದ ಪೂನಿಯಾ ಈ ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ ನಂತರ ಇದು ನನ್ನನ ಮೊದಲ ತರಬೇತಿ ಕ್ಯಾಂಪ್​. ಇದು ನನಗೆ ಒಂದು ಒಳ್ಳೆಯ ಕ್ಯಾಂಪ್​ ಆಗಲಿದೆ ಎಂದು ನಾನು ಭಾವಿಸುತ್ತೇನೆ. ಒಲಿಂಪಿಕ್ ಗೇಮ್ಸ್​ ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ರಷ್ಯಾದ ಕುಸ್ತಿಪಟುಗಳು ಹೆಚ್ಚು ಪ್ರಶಸ್ತಿ ಗೆಲ್ಲುವುದರಿಂದ ನಾನು ತರಬೇತಿಗೆ ರಷ್ಯಾವನ್ನು ಆಯ್ಕೆಮಾಡಿಕೊಂಡಿದ್ದೇನೆ. ಇಲ್ಲಿ ಅನುಭವಿ ಕುಸ್ತಿಪಟುಗಳಿಂದ ಅನುಕೂಲ ಪಡೆದುಕೊಳ್ಳಲಿದ್ದೇನೆ ಎಂದು ರಷ್ಯಾದಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬಜರಂಗ್ ಪೂನಿಯಾ ಅವರ ಈ ತರಬೇತಿಗಾಗಿ ಭಾರತೀಯ ಕ್ರೀಡಾ ಸಚಿವಾಲಯ 7.53 ಲಕ್ಷ ರೂಪಾಯಿಗಳನ್ನು ಮಿಷನ್ ಒಲಿಂಪಿಕ್ಸ್ ಸೆಲ್(MOC) ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಿದೆ. ಜೀತೆಂದರ್ ತರಬೇತಿ ಪಾರ್ಟ್ನರ್​ ಮತ್ತು ಆನಂದ್ ಕುಮಾರ್​ ಅವರನ್ನು ಫಿಸಿಯೋ ಆಗಿ ಬಜರಂಗ್ ಜೊತೆಯಲ್ಲಿ ಕಳುಹಿಸಿಕೊಡಲಾಗಿದೆ. ಬಜರಂಗ್​ 2022ರಲ್ಲಿ UWW ರ್ಯಾಂಕಿಂಗ್ ಇವೆಂಟ್ಸ್​, 2022 ಕಾಮನ್​ವೆಲ್ತ್​ ಗೇಮ್ಸ್​ ಚೀನಾದಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನು ಓದಿ:ಅಮೆರಿಕಾದಲ್ಲಿ ಕ್ರಿಕೆಟ್ ಆಡುವ ಸಲುವಾಗಿ ನಿವೃತ್ತಿ ಘೋಷಿಸಿದ ಭಾರತೀಯ ಡೊಮೆಸ್ಟಿಕ್ ಕ್ರಿಕೆಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.