ETV Bharat / sports

Yuvaraj Singh: ಸ್ಟುವರ್ಟ್‌ ಬ್ರಾಡ್‌ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು, ಅವರ ಸಾಧನೆ ಪ್ರೇರಣಾದಾಯಿ: ಯುವರಾಜ್ ಸಿಂಗ್‌

author img

By

Published : Jul 31, 2023, 10:27 AM IST

one-of-most-feared-red-ball-bowlers-yuvraj-congratulates-broad
ಅತ್ಯುತ್ತಮ ಮತ್ತು ಅತ್ಯಂತ ಭಯಭೀತಗೊಳಿಸುವ ಬೌಲರ್‌ಗಳಲ್ಲಿ ಒಬ್ಬರು : ಸ್ಟುವರ್ಟ್​ ಬ್ರಾಡ್​ಗೆ ಯುವಿ ಅಭಿನಂದನೆ

Yuvaraj Singh congratulates Stuart Broad: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಸ್ಟುವರ್ಟ್​ ಬ್ರಾಡ್​ಗೆ ಮಾಜಿ ಭಾರತೀಯ ಕ್ರಿಕೆಟಿಗ​ ಯುವರಾಜ್​ ಸಿಂಗ್​ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ : ಇಂಗ್ಲೆಂಡ್​​ ಕ್ರಿಕೆಟ್ ತಂಡದ ಸ್ಟಾರ್​ ವೇಗಿ ಸ್ಟುವರ್ಟ್​ ಬ್ರಾಡ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು, ಭಾರತದ ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್ ಅಭಿನಂದಿಸಿದ್ದಾರೆ. ಸ್ಟುವರ್ಟ್​ ಬ್ರಾಡ್​ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನ ಪ್ರೇರಣಾದಾಯಿ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅವರು, "ನಿಮ್ಮ ಉತ್ಕೃಷ್ಟ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು. ಅತ್ಯುತ್ತಮ ಮತ್ತು ಬ್ಯಾಟರ್‌ಗಳನ್ನು ಭಯಭೀತಗೊಳಿಸುವ ಬೌಲರ್‌ಗಳಲ್ಲಿ ನೀವೂ ಒಬ್ಬರು. ನಿಜವಾದ ದಂತಕಥೆ. ನಿಮ್ಮ ಪಯಣ ಮತ್ತು ಸಂಕಲ್ಪ ಸ್ಪೂರ್ತಿದಾಯಕವಾಗಿದೆ. ಮುಂದಿನ ಜೀವನ ಶುಭಕರವಾಗಿರಲಿ" ಎಂದು ಯುವಿ ಹಾರೈಸಿದ್ದಾರೆ.

  • Take a bow @StuartBroad8 🙇🏻‍♂️

    Congratulations on an incredible Test career 🏏👏 one of the finest and most feared red ball bowlers, and a real legend!

    Your journey and determination have been super inspiring. Good luck for the next leg Broady! 🙌🏻 pic.twitter.com/d5GRlAVFa3

    — Yuvraj Singh (@YUVSTRONG12) July 30, 2023 " class="align-text-top noRightClick twitterSection" data=" ">

ಸ್ಟುವರ್ಟ್​ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್​ ಅಭಿಮಾನಿಗಳಲ್ಲಿ ಆಶ್ಚರ್ಯ ಉಂಟುಮಾಡಿದೆ. ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಆ್ಯಶಸ್​ ಪಂದ್ಯದ 3ನೇ ದಿನದಂತ್ಯದ ಆಟ ಮುಗಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಬ್ರಾಡ್​, "ಇದು ನನ್ನ ಕೊನೆಯ ಟೆಸ್ಟ್​. ಅಚ್ಚುಮೆಚ್ಚಿನ ಆ್ಯಶಸ್ ಸರಣಿಯಲ್ಲಿ ನಿವೃತ್ತಿ ಘೋಷಿಸಬೇಕೆಂದು ಅಂದುಕೊಂಡಿದ್ದೆ. ಅದರಂತೆ ಈ ಸರಣಿಯಲ್ಲೇ ಕ್ರಿಕೆಟ್​ನಿಂದ ನಿವೃತ್ತಿಯಾಗುತ್ತಿದ್ದೇನೆ" ಎಂದು ಹೇಳಿದ್ದರು.

ಇದನ್ನೂ ಓದಿ : Deodhar Trophy: ಶಿವ ದುಬೆ ಅಮೋಘ ಪ್ರದರ್ಶನ; ಉತ್ತರದ ವಿರುದ್ಧ ಗೆದ್ದು ಬೀಗಿದ ಪಶ್ಚಿಮ ವಲಯ

ಬ್ರಾಡ್‌ ಓವರ್‌ನಲ್ಲಿ 6 ಸಿಕ್ಸ್ ಬಾರಿಸಿದ್ದ ಯುವಿ: 2007ರಲ್ಲಿ ಡರ್ಬನ್​ನಲ್ಲಿ ನಡೆದ ಟಿ20 ವಿಶ್ವಕಪ್​ ಪಂದ್ಯಾಟದಲ್ಲಿ ಯುವರಾಜ್​ ಸಿಂಗ್​ ಅವರು ಸ್ಟುವರ್ಟ್​ ಬ್ರಾಡ್​ ಅವರ ಓವರ್​ನಲ್ಲಿ 6 ಸಿಕ್ಸರ್​ಗಳನ್ನು ಹೊಡೆದು ದಾಖಲೆ ಬರೆದಿದ್ದರು. ಈ ಮೂಲಕ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದು ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಸಿಡಿಸಿದ ಮೊದಲ ಭಾರತೀಯ ಕ್ರಿಕೆಟ್​ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ಟುವರ್ಟ್​ ಬ್ರಾಡ್​​, "ಅದು ನನ್ನ ಕಠಿಣ ದಿನಗಳಲ್ಲಿ ಒಂದಾಗಿತ್ತು. ಈ ಘಟನೆ ನನ್ನನ್ನು ಇನ್ನಷ್ಟು ಸಾಧಿಸುವಂತೆ ಪ್ರೇರೇಪಿಸಿತು" ಎಂದು ಹೇಳಿದ್ದರು.

"ಅದು ನಿಸ್ಸಂಶಯವಾಗಿ ಬಹಳ ಕಠಿಣ ದಿನವಾಗಿತ್ತು. ಇದರಿಂದ ನಾನು ತುಂಬಾ ಕಲಿತಿದ್ದೇನೆ. ನನಗೆ ನಿರ್ದಿಷ್ಟ ಗುರಿ ಎಂಬುದಿರಲಿಲ್ಲ. ಈ ಅನುಭವ ನನ್ನ ದಿನಚರಿಯನ್ನೇ ಬದಲಿಸಿತು. ಈ ಬಳಿಕ ನಾನು ಇನ್ನಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ತಯಾರಿ ನಡೆಸಿದೆ. ನನ್ನ ಶ್ರೇಷ್ಠ ಪ್ರದರ್ಶನಕ್ಕೆ ತಯಾರಿ ನಡೆಸಿದೆ" ಎಂದು ತಿಳಿಸಿದ್ದರು.

2007ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಬ್ರಾಡ್​ 167 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 602 ವಿಕೆಟ್​ ಗಳಿಸಿದ್ದು, ಅತಿಹೆಚ್ಚು ವಿಕೆಟ್​ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಸ್ಟುವರ್ಟ್​ ಬ್ರಾಡ್​ ಮತ್ತು ಜೇಮ್ಸ್​ ಆ್ಯಂಡರ್​ಸನ್​ ಜೋಡಿ ಇಂಗ್ಲೆಂಡ್​ನ ಅತಿ ಯಶಸ್ವಿ ವೇಗಿ ಜೋಡಿ ಎನಿಸಿದೆ.

ಇದನ್ನೂ ಓದಿ : Stuart Broad: ಆ್ಯಶಸ್‌ ಸರಣಿ ನಡುವೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ದಿಗ್ಗಜ ವೇಗಿ ಸ್ಟುವರ್ಟ್‌ ಬ್ರಾಡ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.